Encourage sports and contribute to health care: Dr. Mamata
ಕೊಪ್ಪಳ : ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಅವರ ಆರೋಗ್ಯಪೂರ್ಣ ರಕ್ಷಣೆಗೆ ಸಹಕರಿಸಬೇಕು ಎಂದು ಕುಕನೂರು ಆರೋಗ್ಯ ಕೇಂದ್ರ ವೈದ್ಯರಾದ ಮಮತಾ ಇಲಕಲ್ ಹೇಳಿದರು.
ಕುಕನೂರು ಪಟ್ಟಣ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ಚೌದ್ರಿಯವರು ತಮ್ಮ ಮಾತೋಶ್ರೀಯವರಾದ ದಿ. ಶ್ರೀಮತಿ ಅನುಸೂಯಮ್ಮ ಹನುಮಂತಪ್ಪ ಚೌದ್ರಿ ಅವರ 11ನೇ ವರ್ಷದ ಸ್ಮರಣಾರ್ಥವಾಗಿ ಹಮ್ಮಿಕೊಂಡಂತ ಸೌಹಾರ್ದ ಕ್ರಿಕೆಟ್ ಕ್ರೀಡಾಕೂಟ ಅಂತಿಮ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಕ್ರೀಡೆ ಅತ್ಯವಶ್ಯಕವಾಗಿ ಬೇಕು ಕ್ರೀಡೆಯು ಮಾನಸಿಕವಾಗಿ ದೈಹಿಕವಾಗಿ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುತ್ತದೆ ಸೋಲು ಗೆಲುವು ಮುಖ್ಯ ಎನ್ನದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ. ಪ್ರತಿವರ್ಷ ಶ್ರೀಮತಿ ಅನುಸೂಯಮ್ಮ ಚೌದ್ರಿ ಅವರ ಸ್ಮರಣಾರ್ಥವಾಗಿ ಆಯೋಜಿಸುವ ಇಂಥ ಕ್ರೀಡಾಕೂಟವು ಅತ್ಯಂತ ಸೂಕ್ತವಾಗಿದೆ.
ಇಂದಿನ ಯುವಕರು ಹೆಚ್ಚು ಮೊಬೈಲ್ ಗಿಳಿನಿಂದ ಆರೋಗ್ಯದ ಕಡೆ ಗಮನ ಹರಿಸದಿರುವದು ವಿಷಾಧನೀಯ, ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯದತ್ತ ಗಮನ ಹರಿಸಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಪಾದ ದೀಕ್ಷಿತ್ ಮಾತನಾಡಿ ಕ್ರೀಡೆಗೆ ಸಹಕರಿಸುವುದು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಕ್ರೀಡಾಪಟುವಿಗೆ ಪ್ರೋತ್ಸಾಹಿಸುವ ಮೂಲಕ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆ ಎಎಸ್ ಐ ನಿರಂಜನ್ ತಳವಾರ. ಪೌರಕಾರ್ಮಿಕರಾದ ಗಂಗಮ್ಮ ಕಾತರಕಿ, ರೈತ ಮುಖಂಡ ಬಸವರಾಜ ಬೋರಣ್ಣವರ್, ಮುಖಂಡರಾದ ಉಮೇಶಪ್ಪ ನವಲಗುಂದ, ಕಳಕಪ್ಪ ಬೋರಣ್ಣವರ, ನಬಿಸಾಬ ಬಿನ್ನಾಳ,ಮಂಜುನಾಥ ನಾಡಗೌಡರ್, ಗಿರಿಧರ ನಿಲೋಗಲ್, ಮಾಂತೇಶ ಹೂಗಾರ,ಬಸವರಾಜ ಬಡಿಗೇರ, ವಕೀಲರಾದ ಅಡಿವೆಪ್ಪ ಬೋರಣ್ಣವರ, ಬಸವರಾಜ್ ಜಂಗ್ಲಿ, ರಮೇಶ ಗಜಕೋಶ, ಜಗದೀಶ ತೊಂಡಿಹಾಳ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಅಂತಿಮ ಪಂದ್ಯದಲ್ಲಿ ಭಾಗವಹಿಸಿದ ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ಅನ್ನದಾನೇಶ್ವರ ಕ್ರಿಕೆಟ್ ತಂಡಗಳ ಕ್ರೀಡಾಪಟುಗಳು ಭಾಗವಹಿಸಿದ್ದವು.