Breaking News

ಟ್ರೀನಿಟಿ ಶಾಲಾ ಸಂಸತ್ತು ಚುನಾವಣೆ

Trinity School Parliament Election

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಟ್ರಿನಿಟಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 2024- 25ನೇ ಶಾಲಾ ಸಂಸತ್ತು ರಚನೆ ಮಾಡಲಾಯಿತು.

ಸಂಸತ್ತು ರಚನೆ ಚುನಾವಣೆ ಮೂಲಕ ನಡೆಯಿತು. ಚುನಾವಣೆ ಪ್ರಕ್ರಿಯೆ ಸಂಪೂರ್ಣ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಯಿತು.

ಮತದಾರರ ಪಟ್ಟಿ, ಬ್ಯಾಲೇಟ್‌ ಪೇಪರ, ಮತ ಮುದ್ರೆ, ಶಾಹಿ, ಗುರುತಿನ ಚೀಟಿ, ಮತ ಪೆಟ್ಟಿಗೆ ಎಲ್ಲವೂ ಅಚ್ಚುಕಟ್ಟಾಗಿದ್ದವು.

ಈ ಸಂದರ್ಭದಲ್ಲಿ ಟ್ರಿನಿಟಿ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಕುಮಾರ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ನಾಯಕರು, ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಇದೆ.

ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ, ಮಕ್ಕಳ ಸಂಸತ್ತು ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಜವಬ್ದಾರಿ ನಿರ್ವಹಣೆಯ ಜೊತೆಗೆ ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ಭಾವಿ ನಾಗರಿಕರನ್ನು ಬೆಳೆಸಲು ಅನುಕೂಲವಾಗುತ್ತದೆ.

ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆ ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ ಎಂದರು.

ಶಾಲಾ ಸಂಸತ್ತು ರಚನೆಯಲ್ಲಿ ಅಶ್ವಿನಿ ಹಿರೇಮಠ ಪ್ರಧಾನ ಮಂತ್ರಿ, ಹರೀಶ್ ಹಲಸಿನ ಮರದ ಉಪಮುಖ್ಯಮಂತ್ರಿ, ಅಪೂರ್ವ ನಾಗಣ್ಣವರ್ ಹಣಕಾಸು ಮಂತ್ರಿ, ಸಂದೀಪ್ ಕರಿಗಾರ ಶಿಕ್ಷಣ ಮಂತ್ರಿ, ಪುಣ್ಯ ಎಸ್ ನಾಯಕ್ ಸಾಂಸ್ಕೃತಿಕ ಮಂತ್ರಿ, ಸುನಿತಾ ಉಪ್ಪಾರ ಸಹಾಯಕ ಸಾಂಸ್ಕೃತಿಕ ಮಂತ್ರಿ, ಅಮನ ಅಲಿ ಗದ್ವಾಲ ಆರೋಗ್ಯ ಮಂತ್ರಿ, ಹೇಮಂತ ಮುತ್ತಾಳ ಸಹಾಯಕ ಆರೋಗ್ಯ ಮಂತ್ರಿ, ಅವಿನಾಶ್ ಎಚ್ ಪ್ರವಾಸ ಮಂತ್ರಿ, ವಿದ್ಯಾ ಸಹಾಯಕ ಪ್ರವಾಸ ಮಂತ್ರಿ, ಕಾರ್ತಿಕ ದಳವಾಯಿ ಮಠ ಕ್ರೀಡಾ ಮಂತ್ರಿ, ವೇದ ಬಡಿಗೇರ್ ಸಹಾಯಕ ಕ್ರೀಡಾ ಮಂತ್ರಿ, ಸಂಜನಾ ಹೊಸಳ್ಳಿ ವಿಜ್ಞಾನ ತಂತ್ರಜ್ಞಾನ ಮಂತ್ರಿ, ಜೋಯಾಕಾನ್ ಪಠಾಣ ಗ್ರಂಥಾಲಯ ಮಂತ್ರಿ, ದೀಪ ಮುಂದಲಮನಿ ವಿರೋಧ ಪಕ್ಷದ ನಾಯಕಿಯಾಗಿ ವಿದ್ಯಾರ್ಥಿಗಳ ಸಂಸತ್ತು ರಚನೆ ಮಾಡಲಾಯಿತು.

ಈ ಸಂದರ್ಭದಲ್ಲಿಶಾಲಾ ಶಿಕ್ಷಕರಾದ ಶಶಿಕಲಾ ಹಿರೇಮಠ, ಹೇಮಾ ಪತ್ತಾರ, ರಮೇಶ , ಪುಪ್ಪಾ, ನೀಲಮ್ಮ ಎಚ್, ನೇತ್ರಾವತಿ, ಕೌಸಲ್ಯ, ಬಸಮ್ಮ, ಮುಬೀನಾ, ಮಲ್ಲಿಕಾರ್ಜುನಯ್ಯ ಭೂಸನೂರುಮಠ, ಸೌಂದರ್ಯ, ಬಿಸ್ಮಿಲ್ಲಾ, ಜ್ಯೋತಿ ಇತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *