Breaking News

ಗಂಗಾವತಿ ರೋಟರಿ ಯಿಂದ ನೂತನ ಸಂಸದರಿಗೆ ಮನವಿ

Appeal to new MPs from Gangavati Rotary

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ: ಇಂದು ಹಿಟ್ನಾಳ ಗ್ರಾಮದಲ್ಲಿ ಗಂಗಾವತಿ ರೋಟರಿ ಸದಸ್ಯರು ಕೊಪ್ಪಳ ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ರವರಿಗೆ ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು. ಅಲ್ಲದೆ ಗಂಗಾವತಿ ರೈಲ್ವೇ ನಿಲ್ದಾಣದಕ್ಕೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳು, ಪ್ರಯಾಣಿಕರಿಗೆ ಹಲವು ಉಪಯೋಗಗಳು ಮತ್ತು ಗಂಗಾವತಿ ಯಿಂದ ಬೆಂಗಳೂರು ರೈಲ್ವೆ ಸಮಯ ಮತ್ತು ಮಾರ್ಗ ಬದಲಾವಣೆ, ದರೋಜಿ -- ಬಾಗಲಕೋಟೆ ನೂತನ ಮಾರ್ಗ, ಹಲವು ರೈಲ್ವೇ ಮಾರ್ಗ ವಿಸ್ತರಣೆ, ರೈಲ್ವೇ ನಿಲ್ದಾಣಕ್ಕೆ ಕಿಷ್ಕಿಂಧ/ ಅಂಜನಾದ್ರಿ ನಾಮಕರಣ, ನೂತನ ಗಂಗಾವತಿ ಜಿಲ್ಲಾ ರಚನೆ, ವಿಮಾನ ನಿಲ್ದಾಣ, ಟೋಲ್ ಗೇಟ್,ಹೀಗೆ ಹಲವಾರು ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗಂಗಾವತಿ ರೋಟರಿ ಸಂಸ್ಥೆ ಅಧ್ಯಕ್ಷರಾದ ಟಿ.ಆಂಜನೇಯ, ಕಾರ್ಯದರ್ಶಿ ವಾಸು ಕೊಳಗದ, ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ, ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಜೆ. ನಾಗರಾಜ , ಸಲಾಹುದ್ದೀನ ಸುರಪುರ, ಜೆ. ದೊಡ್ಡಯ್ಯ, ಶ್ರೀನಿವಾಸ ಸಿ ಹೆಚ್,. ಎ.ಶಿವಕುಮಾರ, ಮಂಜುನಾಥ ಹೆಚ್ ಎಂ, ದಿಲೀಪ ಮೋತಾ, ಮಂಜುನಾಥ ಹುಡೇದ ಇನ್ನಿತರರು ಉಪಸ್ಥಿತರಿದ್ದರು* *ಮನವಿ ಮತ್ತು ಸನ್ಮಾನ ಸ್ವೀಕರಿಸಿದ ಸಂಸದರು ಮುಂದಿನ ವಾರ ನಡೆಯುವ ಬಜೆಟ್ ಅಧಿವೇಶನದಲ್ಲಿ ರೈಲ್ವೆ ಸಚಿವರ ಜೊತೆ ಚರ್ಚಿಸಿ ಗಂಗಾವತಿ,ಕಾರಟಗಿ, ಸಿಂಧನೂರು ದಿಂದ ಸಂಚರಿಸುವ ರೈಲ್ವೇ ಮತ್ತು ದರೋಜಿ - ಬಾಗಲಕೋಟೆ, ಇನ್ನಿತರ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *