To provide employment opportunities to locals: Demand from Karnataka Defense Forum

ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ಕರ್ನಾಟಕದಲ್ಲಿ ಇರುವ ಖಾಸಗಿ, ಅರೆ ಖಾಸಗಿ ಕಂಪನಿಗಳಲ್ಲಿ ಮೂಲ ಸ್ಥಳೀಯ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ) ಬಣದ ಯಲಬುರ್ಗಾ ತಾಲೂಕಾಧ್ಯಕ್ಷ ಶಿವಕುಮಾರ ನಾಗನಗೌಡ್ರ ಆಗ್ರಹಿಸಿದರು.
ಶುಕ್ರವಾರದಂದು ಯಲಬುರ್ಗಾ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಕರವೇ ಸಂಘಟನೆಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ,
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ವಿರೋಧಿಸುತ್ತಿರುವ ನಾಡ ವಿರೋಧಿ ಉದ್ಯಮಿಗಳ ವಿರುದ್ಧ ಕಿಡಿ ಕಾರಿದರು.
ಕರ್ನಾಟಕ ರಾಜ್ಯದ ಕೈಗಾರಿಕೆ, ಕಾರ್ಖಾನೆ ಹಾಗೂ ವಿವಿಧ ಉದ್ಯಮಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ವಿಧಯೇಕ 2024 ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿತ್ತು.
ಆದರೆ ಕೇವಲ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಲ್ಲಿ ಶೇ.100ರಷ್ಟು ಸ್ಥಳೀಯರಿಗೆ ಮೀಸಲು ಕಲ್ಪಿಸಬೇಕು . ಇದನ್ನು ನಿರ್ವಹಣೆ ಮಾಡಲು ನೂಡಲ್ ಏಜೆನ್ಸಿ ಸ್ಥಾಪಿಸಬೇಕೆಂದು ಹೇಳಿರುವದಾಗಿ ಮೂಲಗಳು ಮೂಲಕ ತಿಳಿದು ಬಂದಿದ್ದು , ಮುಖ್ಯಮಂತ್ರಿಗಳು ಯಾವುದೇ ಒತ್ತಾಯಕ್ಕೆ ಮಣಿಯದೇ
ಮತ್ತು ಕೇಲವು ಸಂಪುಟ ಸಚಿವರ ಒತ್ತಾಯಕ್ಕೂ ಮಣಿಯದೇ ಕನ್ನಡಿಗರ ಶೇ.75 ರಷ್ಟು ಮಿಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕ ಉಪಾಧ್ಯಕ್ಷ ರಾಮನಗೌಡ ಪಾಟೀಲ್, ತಾಲೂಕು ಕಾರ್ಯದರ್ಶಿ ಶಿವಕುಮಾರ ನಿಡಗುಂದಿ, ಜಿಲ್ಲಾ ವಿದ್ಯಾರ್ಥಿ ಘಟಕ ಅಧ್ಯಕ್ಷ ಭೀಮೇಶ್, ಶ್ರೀಧರ ಸುರಕೊಡ, ಘನವಂತೇಶ ಚನ್ನದಾಸರ್, ವಿರೇಶ ಬಳಗೇರಿ, ಮಂಜುನಾಥ, ಶ್ರೀ ಕಾಂತ ಹಾಗೂ ಇನ್ನೀತರೇ ಪದಾಧಿಕಾರಿಗಳು ಇದ್ದರು.