To provide compensation to the families of youths who died due to railway derailment
Urge the Central Govt.
ಗಂಗಾವತಿ: ಜುಲೈ-೧೮ ಗುರುವಾರ ರಾತ್ರಿ ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೊರಟಿದ್ದ ರೈಲ್ವೆಯ ಗಾಲಿಗೆ ಸಿಲುಕಿ ಗಂಗಾವತಿ ನಗರದ ಮೂರು ಜನ ಯುವಕರು ಮೃತರಾಗಿದ್ದು, ಯುವಕರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ ಹತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ಸಿ.ಪಿ.ಐ.ಎಂಎಲ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಗಂಗಾವತಿ-ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಗುರುವಾರ ರಾತ್ರಿ ಹಳಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದ ಪರಿಣಾಮ ಮೂವರು ಸಾವನ್ನಪ್ಪಿರುತ್ತಾರೆ. ಗಂಗಾವತಿಯ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್‌ಪತ್ತಾರ (೨೩), ಅಣ್ಣೂರು ಗೌರಮ್ಮಕ್ಯಾಂಪಿನ ಸುನೀಲ್ ತಿಮ್ಮಣ್ಣ (೨೩) ಹಾಗೂ ಹಿರೇಜಂತಕಲ್‌ನ ವೆಂಕಟ ಭೀಮರಾಯ ಮಂಗಳೂರು (೨೦) ಇವರು ಮೃತಪಟ್ಟವರಾಗಿದ್ದಾರೆ.
ಕೇಂದ್ರ ಸರ್ಕಾರ ಈ ಯುವಕರ ಕುಟುಂಬಗಳಿಗೆ ತಲಾ ಹತ್ತು ರೂಪಾಯಿಗಳ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಮ್ಮ ಸಿ.ಪಿ.ಐ.ಎಂ.ಎಲ್ ಪಕ್ಷ ಒತ್ತಾಯಿಸುತ್ತದೆ ಎಂದು ತಿಳಿಸಿದರು