NH:82-85 Distribution of free notebooks to school children by office bearers of the trust
ವರದಿ : ಬಂಗಾರಪ್ಪ .ಸಿ
ಚಾಮರಾಜನಗರ :ಶಾಲಾ ಮಕ್ಕಳಿಗೆ NH:82-85 ಟ್ರಸ್ಟ್ ನ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ವಿತರಣೆ ಮಾಡಿದರು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಟ್ರಸ್ಟ್ ನ ಸದಸ್ಯ ರಾದ ಬಾಬು ತಿಳಿಸಿದರು .
ಚಾಮರಾಜನಗರ ಜಿಲ್ಲೆಯ
ಯಳಂದೂರು ತಾಲೂಕಿನ ಬನ್ನಿ ಸಾರಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನ ಸಾಮಾಗ್ರಿ ಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು,ಮತ್ತಷ್ಟು ಸವಲತ್ತುಗಳನ್ನು ನೀಡಿದ್ದೆ ಆದಲ್ಲಿ ಉತ್ತಮ ಶಿಕ್ಷಣ ದೊರಕಲಿದೆ, ಇದರಿಂದ ಮಕ್ಕಳ ಸಂಖ್ಯೆಯೂ ಕೂಡ ಹೆಚ್ಚಲಿದೆ,ಪಾಲಕರು ಇಂಗ್ಲೀಷ್ ಹಾಗೂ ಕಾನ್ವೆಂಟ್ ವ್ಯಾಮೋಹ ಬಿಡಬೇಕು,ಈ ಶಾಲೆಯ ೧೦೦ ಮಕ್ಕಳಿಗೆ ಅಗತ್ಯ ಇರುವ ನೋಟ್ ಪುಸ್ತಕಗಳು, ಕಾಪಿರೈಟಿಂಗ್ ಬುಕ್ಗಳು, ಒಂದು ಪ್ಯಾಕೆಟ್ ಪೆನ್ಸಿಲ್, ಜ್ಯಾಮಿಟ್ರಿ ಉಪಕರಣಗಳು, ರಬ್ಬರ್, ಮೆಂಡರ್, ಮಗ್ಗಿ ಪುಸ್ತಕ, ನಲಿಕಲಿ ಮಕ್ಕಳಿಗೆ ಬಾಕ್ಸ್ ಪುಸ್ತಕಗಳನ್ನು ವಿತರಿಸಲಾಗಿದೆ ,ಹಾಗೊ ಸರ್ಕಾರಿ ಶಾಲೆ ವಸತಿ ಶಾಲೆ, ಮತ್ತು ಖಾಸಗಿ ಶಾಲೆಗಿರುವ ವ್ಯತ್ಯಾಸಗಳನ್ನು ಪೋಷಕರೊಡನೆ ಸಂವಾದ ಮಾಡಿದರು. ಇದೇ ಸಮಯದಲ್ಲಿ ಟ್ರಸ್ಟನ ಪದಾಧಿಕಾರಿಗಳನ್ನು ಶಾಲೆಯವರಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಉಮೇಶ್, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಚಂದ್ರೇಶ್, ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯ, ಸದಸ್ಯರಾದ ಆಶಾ, ಮಮತ, ನಟರಾಜ್,ಮುಖಂಡರಾದ ಹರೀಶ್,ಮುಖ್ಯ ಶಿಕ್ಷಕರಾದ ರುದ್ರಸ್ವಾಮಿ, ಶಿಕ್ಷಕರಾದ ಅಮ್ಮನಪುರ ಮಹೇಶ್, ಮಹಾದೇವ್,ಸೌಮ್ಯ, ಉಷಾ ಹಾಗೂ ಶಾಲೆಯ ಎಲ್ಲಾ ಮಕ್ಕಳು ಸೇರಿದಂತೆ ಇನ್ನಿತರರು ಹಾಜರಿದ್ದರು.