Huli Hydera was elected unopposed to Primary Agricultural Farmers’ Co-operative Society.

ಕೊಪ್ಪಳ : ಶುಕ್ರವಾರದಂದು ಹುಲಿಹೈದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತೆರವಾದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ರಾಜಮಹ್ಮದಾಸಾಬ ಹಾಗೂ ಉಪಾಧ್ಯಕ್ಷರಾಗಿ ಛಾಯಪ್ಪ ನಾಯಕ ಇವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಸಹಕಾರಿ ಇಲಾಖೆಯ ಶಿವಾಜಿ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹನುಮಂತಪ್ಪ ಗೋಡಿ, ಮೈಬೂಸಾಬ ದೋಟಿಹಾಳ, ಹನುಮಂತಪ್ಪ ಬೇವಿನಗಿಡ, ಅಮಿನಸಾಬ ದನಕಾಯರ, ಅಮರಪ್ಪ ಗೆಜ್ಜಲಗಟ್ಟಿ, ಮಾರೆಪ್ಪ ಚನ್ನದಾಸರ, ಸಣ್ಣ ಹನುಮಂತಪ್ಪ ಸೊಂಡಿ, ಶ್ರೀಮತಿ ನಿಂಗಮ್ಮ ಗದ್ದಿ, ಶ್ರೀಮತಿ ಶಂಕ್ರಮ್ಮ ಹೊಸಗುಡ್ಡ ಸದಸ್ಯರು ಇದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶ ನಾಯಕ ಹುಲಿಹೈದರ ಕನಕಗಿರಿ ವಿಧಾನಸಭಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಎಪಿಎಂಸಿ ಸದಸ್ಯರಾದ ಶಿವಶಂಕರಪ್ಪ ಚನ್ನದಾಸರ. ಅಶೋಕ ಜಾಡಿ. ಗೋಸಲಪ್ಪ ಗದ್ದಿ. ಪರಸಪ್ಪ ಜಾಡಿ ರಾಜಸಾಬ ಗ್ರಾ.ಪಂ ಸದಸ್ಯರು. ಹನುಮೇಶ ವರನಖೇಡ, ಮಾಜಿ ಉಪಾಧ್ಯಕ್ಷರು ಗ್ರಾ.ಪಂ ಹುಲಿಹೈದರ, ದುರುಗಪ್ಪ ನಾಮಸೇವೆ , ಶಿವಜಾತಪ್ಪ ಗದ್ದಿ, ಅಯ್ಯಣ್ಣ ಕನ್ನಾಳ, ಜಗದೀಶಪ್ಪ ಗದ್ದಿ, ಬಜರಂಗಬಲಿ, ದುರುಗಪ್ಪ ಹರಿಜನ, ಸುಬಾನ್ ಸೈಯದ್, ದೊಡ್ಡಬಸವ ಕನ್ನಾಳ, ಹಾಗೂ ಹುಲಿಹೈದರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.