BEO Ningappa to Bilkodu,
ಕೊಪ್ಪಳ : ಕುಕನೂರ ಮತ್ತು ಯಲಬುರ್ಗಾ ಅವಳಿ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ 11ತಿಂಗಳು ಸೇವೆ ಸಲ್ಲಿಸಿದ ಕೆ.ಟಿ ನಿಂಗಪ್ಪ ಇವರು ವರ್ಗಾವಣೆ ನಿಮಿತ್ತ ತಾಲೂಕು ನೌಕರರ ಸಂಘ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಸಂಘಗಳ ವತಿಯಿಂದ ಸನ್ಮಾನ ಮತ್ತು ಬಿಳ್ಕೋಡು ಸಮಾರಂಭವನ್ನು ಬಿಇಒ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಂತರ ಸನ್ಮಾನ ಸ್ವೀಕರಿಸಿ ಬಿಇಒ ಕೆ.ಟಿ ನಿಂಗಪ್ಪ ಮಾತನಾಡಿ ಇಲ್ಲಿನ ಶಿಕ್ಷಣ ವ್ಯವಸ್ಥೆ ನನಗೆ ತುಂಬಾ ಇಷ್ಟವಾಯಿತು. ಶಿಕ್ಷಕರು ಸತತ ಪರಿಶ್ರಮ ವಹಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಶಾಲೆಯ ಶೇಖಡಾವಾರು ಹೆಚ್ಚಿಸುವಲ್ಲಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಇಷ್ಟು ದಿನಗಳ ಕಾಲ ಅವಳಿ ತಾಲೂಕುಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಜನ ಪ್ರತಿನಿಧಿಗಳಿಗೆ, ಎಲ್ಲಾ ಅಧಿಕಾರಿಗಳಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನೌಕರ ಸಂಘ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ತಾಲೂಕಿನ ಶಿಕ್ಷಕರು, ಸಹ ಶಿಕ್ಷಕರು ಇದ್ದರು.