Passed Chartered Accountant Exam : Harsha

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ರೈತನ ಮಗ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ವೆಂಕಟಗಿರಿ ಗ್ರಾಮದ ಹನಮೇಶ ತಂದೆ ಫಕೀರಪ್ಪ ತಾಳಕೇರಿ ಪಾಸಾದ ವಿದ್ಯಾರ್ಥಿಯಾಗಿದ್ದು, ಮೇ ತಿಂಗಳಲ್ಲಿ ಪರೀಕ್ಷೆ ಬರೆದಿದ್ದರು. ಸದ್ಯ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಗ್ರಾಮದ ಫಕೀರಪ್ಪ ತಾಳಕೇರಿ ಹಾಗೂ ತಾಯಿ ರೇಣುಕಮ್ಮ ರವರ ಪುತ್ರನಾಗಿರುವ ಇವರು, ವೆಂಕಟಗಿರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಮುಗಿಸಿದರು ಹಾಗೂ ಪಿಯುಸಿ ಮತ್ತು ಪದವಿಯನ್ನು ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪಡೆಯುವುದಲ್ಲದೆ ಗವಿಮಠದ ಉಚಿತ ವಸತಿ ನಿಲಯದಲ್ಲಿ ವಸತಿ ಪಡೆದು ಅಭ್ಯಾಸ ಮಾಡಿದ್ದಾನೆ. ಇತನು ಉತ್ತೀರ್ಣಗೊಂಡಿದ್ದರಿಂದ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
Kalyanasiri Kannada News Live 24×7 | News Karnataka
