Breaking News

ಹಿಂದೂ ಮುಸ್ಲಿಂ ಬಾಂಧವ್ಯಗಟ್ಟಿಗೊಳಿಸುವ ಮೊಹರಂ

Muharram is Hindu Muslim bonding

ಜಾಹೀರಾತು





ಸಾವಳಗಿ: ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹಬ್ಬ ಆಚರಣೆಗಳು ನಡೆಯುತ್ತವೆ. ಇವೆಲ್ಲವೂ ಸಂಪ್ರದಾಯ, ನಂಬಿಕೆ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬಗಳಾಗಿವೆ. ತಮ್ಮ ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕಂತೆ ಜನತೆ ಹಬ್ಬ ಆಚರಿಸಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ನಾವು ಆಚರಿಸುವ ಹಬ್ಬಗಳಲ್ಲಿ ಭಾವೈಕ್ಯತೆ ಪ್ರತಿಬಿಂಬಿಸುವ ಹಲವು ಹಬ್ಬಗಳಿವೆ. ಅದರಲ್ಲಿ ಮೊಹರಂ ಹಬ್ಬಕ್ಕೆ ಮೊದಲ ಸ್ಥಾನ. ಈ ಹಬ್ಬವನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾಧರ್ಮೀಯರು ಆಚರಿಸುವುದು ವಿಶೇಷವಾಗಿದೆ.

ಮೊಹರಂ ಹಬ್ಬ ಕೇವಲ ಹಬ್ಬವಾಗಿರದೆ ಹಿಂದೂ ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಮೊಹರಂ ಹಬ್ಬವು ಒಂದು ವಿಶಿಷ್ಟವಾದ ಸಾಂಸ್ಕೃತಿಕ ಆಚರಣೆಯಾಗಿದೆ. ಇಂದಿಗೂ ಹಳ್ಳಿಗಳಲ್ಲಿಎಲ್ಲಾಸಮುದಾಯದ ಜನರ ಬಾಂಧವ್ಯವನ್ನು ಮೊಹರಂ ಹಬ್ಬ ಗಟ್ಟಿಗೊಳಿಸಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿಕಂಡುಬರುವ ವಿಶಿಷ್ಟ ಆಚರಣೆಯಾಗಿದೆ.

ಧಾರ್ಮಿಕ ಹಿನ್ನೆಲೆ: ಶಾಂತಿ ಮತ್ತು ಧರ್ಮದ ಉಳಿವಿಗಾಗಿ ಹೋರಾಡಿ ಮಡಿದ ಪ್ರವಾದಿ ಮೊಹಮದ್‌ ಪೈಗಂಬರರ ಮೊಮ್ಮಕ್ಕಳಾದ ಹಜರತ್‌ ಹಸನ್‌ ಮತ್ತು ಹುಸೇನರ ನೆನಪಿಗಾಗಿ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಹಬ್ಬಕ್ಕೆ ಒಂದು ಇತಿಹಾಸ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ಮೊಹರಂ ಹಬ್ಬದಿಂದ ಇಸ್ಲಾಂ ಧರ್ಮೀಯರ ವರ್ಷ ಪ್ರಾರಂಭವಾಗುತ್ತದೆ ಎಂಬ ಪ್ರತೀತಿಯಿದೆ. ಇದು ಮೊಹಮದಿಯರಿಗೆ ಹೊಸ ವರ್ಷವಿದ್ದಂತೆ. ಈ ತಿಂಗಳ ಹತ್ತನೇ ದಿನ ಮೊಹರಂ ಹಬ್ಬವನ್ನು ವಿಶೇಷ ರೀತಿಯಲ್ಲಿಆಚರಿಸುತ್ತಾರೆ. ಇದು ಮೊಹರಂ ತಿಂಗಳ ಹತ್ತನೇ ದಿನ ನಡೆದ ಯುದ್ಧ. ಈ ಯುದ್ಧದಲ್ಲಿ ಇಮಾಮ್‌ ಹುಸೇನರು ಮರಣ ಹೊಂದಿದರು. ಅವರ ಪುಣ್ಯ ಸ್ಮರಣೆಗಾಗಿ ಮೊಹರಂ ಹಬ್ಬ ಆಚರಿಸಲಾಗುತ್ತದೆ.

ಹಿಂದೂ ಮುಸ್ಲಿಂ ಬಾಂಧವ್ಯ; ಗ್ರಾಮೀಣ ಪ್ರದೇಶದಲ್ಲಿಮೊಹರಂ ಹಬ್ಬವನ್ನು ಅತಿ ವಿಜೃಂಭಣೆಯಿಂದ ಸಂಭ್ರಮದಿಂದ ಆಚರಿಸುತ್ತಾರೆ. ಹಿಂದೂ ಮುಸ್ಲಿಂ ಎಂಬ ಬೇಧ-ಭಾವವಿಲ್ಲದೆ ಎಲ್ಲರೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅನೇಕ ಕಡೆ ಹಿಂದೂಗಳೇ ಪೂಜೆ ಸಲ್ಲಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಹೆಜ್ಜೆ ಕುಣಿತ, ಆಲಾದಿ ಕುಣಿತ, ಮರಗಾಲು ಕುಣಿತ ಸೇರಿದಂತೆ ಹಲವಾರು ಜಾನಪದ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ನಡೆಯುತ್ತವೆ.

ರೈತರು, ಭಕ್ತಾದಿಗಳಿಂದ ಹರಕೆ: ಮೊಹರಂ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ನಾನಾ ಹರಕೆಗಳನ್ನು ನೆರವೇರಿಸುತ್ತಾರೆ. ಬೆಂಕಿಯಲ್ಲಿ ನಡೆಯುವ ಮೂಲಕ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ. ಅಲ್ಲದೇ ರೈತರು ತಮ್ಮ ಬೇಡಿಕೆ, ಹರಕೆ ನೆರವೇರಿಸುತ್ತಾರೆ. ಮಳೆ ಬಗ್ಗೆ, ಅತಿವೃಷ್ಠಿ, ಅನಾವೃಷ್ಠಿ, ಸಂತಾನ ಪ್ರಾಪ್ತಿ, ಮನೆಯ ಸಮಸ್ಯೆಗಳ ಪರಿಹಾರದ ಬಗ್ಗೆ ದೇವರ ಮೊರೆ ಹೋಗುತ್ತಾರೆ. ಹಬ್ಬದಲ್ಲಿ ಸಂಪ್ರದಾಯ, ಸಂಸ್ಕಾರಗಳೊಂದಿಗೆ ಪರಸ್ಪರ ಪ್ರೀತಿ, ಸಂತೋಷ ಕಂಡುಬರುತ್ತದೆ.

ಈ ಹಬ್ಬದ ಮೂಲಕ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಕಿಗೆ ಬರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿಈ ಹಬ್ಬಕ್ಕೆ ಬಹಳ ಪ್ರಾಶಸ್ತ್ಯ ನೀಡುವ ಮೂಲಕ ದೇವರಿಗೆ ಶ್ರದ್ಧಾಭಕ್ತಿ ಸಲ್ಲಿಸಲಾಗುತ್ತದೆ.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.