Breaking News

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲುವೆಗೆ ನೀರು ಬರುತ್ತಿಲ್ಲಾ: ಶಾಸಕ ಜಗದೀಶ ಗುಡಗುಂಟಿ

Is water not coming to the canal due to the negligence of the authorities: MLA Jagdish Gudgunti

ಜಾಹೀರಾತು

*ಸಾವಳಗಿ ತುಂಗಳ ಏತ ನೀರಾವರಿ ಯೋಜನೆ,ನೀರಾವರಿ ಇಲಾಖೆ ಸಂಪೂರ್ಣ ವಿಫಲವಾಗಿದೆ

ಕಲ್ಯಾಣ ಸಿರಿ ಸುದ್ದಿ,

ಸಾವಳಗಿ: ಕೃಷ್ಣಾ ನದಿಯಿಂದ ಹಲ್ಯಾಳ ಪಂಪ ಸೆಟ್ಟಗೆ ನೀರು ಬಂದು, ಅಥಣಿ ತಾಲೂಕಿನ ರೈತರು ಕಾಲುವೆಗಳಿಗೆ ಪೈಪಲ್ಯಾನ ಮೋಟಾರಗಳನ್ನು ಹಚ್ಚುರುವುದರಿಂದ, ಈ ಭಾಗಕ್ಕೆ ನೀರು ಬರುವುತ್ತೀಲ್ಲಾ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ, ಇದರಿಂದ ನಮ್ಮ ಈ ಭಾಗದ ರೈತಾಪಿ ಜನರಿಗೆ ಈ ನೀರಾವರಿ ಯೋಜನೆಯು ಅನುಕೂಲವಾಗುತ್ತಿಲ್ಲ, ಜಾಕ್ವೆಲಿನಲ್ಲಿ ನೀರಿಲ್ಲದೆ ಹೇಗೆ ಕಾಲುವೆಗೆ ಹರಿಸುತ್ತೀರಿ, ಸ್ವಲ್ಪ ಎಚ್ಚೆತ್ತು ಈ ನೀರಾವರಿ ಯೋಜನೆಯು ರೈತಾಪಿ ಜನರಿಗೆ ಅನುಕೂಲವಾಗುತ್ತಿಲ್ಲಾ ನೀವು ಜಾಕ್ವೆಲನಲ್ಲಿ ನೀರು ಇಲ್ಲದೆ ಹೇಗೆ ಕಾಲುವೆಗಳಿಗೆ ನೀರು ಬೀಡುತ್ತೀರಿ ಸ್ವಲ್ಪ ಎಚ್ಚರದಿಂದ ಕೆಲಸ ಮಾಡಿ ನಮ್ಮ ರೈತರಿಗೆ ನೀರು ಬರುವಂತೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಆದೇಶಿಸಿದ ಶಾಸಕ ನಾಡೋಜ ಜಗದೀಶ್ ಗುಡಗುಂಟಿ.

ಸಾವಳಗಿ ಸಮೀಪದ ತುಂಗಳ ಜಾಕ್ವೆಲಗೆ ಶನಿವಾರ ಭೇಟಿ ನೀಡಿದ ಜಮಖಂಡಿ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅಥಣಿ ಭಾಗದ ರೈತರು ಕಾಲುವೆಗಳಿಗೆ ಪೈಪ್ ಮೋಟಾರ್ ಹಚ್ಚಿ ಆ ಭಾಗಕ್ಕೆ ಹೆಚ್ಚು ನೀರು ಹರಿಯುವುದರಿಂದ ನಮ್ಮ ಭಾಗಕ್ಕೆ ಹೆಚ್ಚಾಗಿ ನೀರು ಬರುತ್ತಿಲ್ಲ ಅಧಿಕಾರಿಗಳು ಈ ಭಾಗಕ್ಕೆ ನೀರು ಹರಿಸಲು ಮುಂದಾಗುತ್ತಿಲ್ಲ, ಸೋಮವಾರ ಅಧಿವೇಶನ ಪ್ರಾರಂಭವಾಗಲಿದೆ ಅಧಿವೇಶನದಲ್ಲಿ ಮೋದಲ ಪ್ರಶ್ನೆ ಸಾವಳಗಿ ತುಂಗಳ ಏತ ನೀರಾವರಿ ಬಗ್ಗೆ ಇದೆ ಈ ಭಾಗದ ರೈತರಿಗೆ ಅನುಕೂಲವಾಗುಂತೆ ಕೆಲಸ ಮಾಡುತ್ತೇನೆ, ತುಂಗಳ ಜಾಕ್ವೆಲನಲ್ಲಿ ಎನ್ನು ತೊಂದರೆ ಇಲ್ಲ, ಅಥಣಿ ಭಾಗದವರು ನೀರು ಬೀಡುತತ್ತಿಲ್ಲಾ, ಆದ್ದರಿಂದ ಮೇಲಾಧಿಕಾರಿಗಳ ಜೊತೆ ಮಾತನಾಡಿ ನೀರನ್ನು ಬಿಡಿಸಲು ಪ್ರಯತ್ನ ಮಾಡುತ್ತೇನೆ, ಸದನದಲ್ಲಿ ನೀರಾವರಿ ಸಚಿವರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಜೋತೆ ಮಾತನಾಡಿ ಈ ಭಾಗಕ್ಕೆ ಶಾಶ್ವತವಾಗಿ ಏತ ನೀರಾವರಿ ಯೋಜನೆ ಮಾಡಿಸೋಣ ಎಂದು ಭರವಸೆ ನೀಡಿದರು.‌

ಹೊಸ ಜಾಕ್ವೆಲ ನಿರ್ಮಾಣ: ತುಂಗಳ ಹಾಗೂ ಅಥಣಿ ಗಡಿ ಭಾಗದಲ್ಲಿ ಇರುವಂತಹ ಜಾಕ್ವೆಲನ ತುಬಚಿ ಭಾಗಕ್ಕೆ ಹೊಸ ಜಾಕ್ವೆಲನ ನಿರ್ಮಾಣ ಮಾಡೋಣ ಇಲ್ಲಿ ಇರುವಂತಹ ಉಪಕರಣಗಳು ತುಬಚಿ ಭಾಗದಲ್ಲಿ ಅವಳವಡಿಸಿ ಕೃಷ್ಣಾ ನದಿ ಇರುವುದರಿಂದ ಅಲ್ಲಿ ಜಾಕುವ ನಿರ್ಮಿಸಿದರೆ ನದಿಯಿಂದ ಕಾಲುವೆಗಳಿಗೆ ನೀರು ಹರಿಸಬಹುದು ಇದರಿಂದ ಐದು ಹಳ್ಳಿಗಳಿಗೆ ಸಂಪೂರ್ಣ ನೀರಾವರಿ ಯೋಜನೆಯಾಗುತ್ತದೆ ಎಂದು ಶಾಸಕರು ಹೇಳಿದರು.

ಜಾಕ್ವೆಲನಲ್ಲಿ ನೀರು ಖಾಲಿ: ಹಲ್ಯಾಳದಿಂದ ನೀರು ಬರುವುದು, ನಡುಬಾಗದಲ್ಲಿ ರೈತರು ಅಥಣಿ ಭಾಗದ ರೈತರು ಕಾಲುವೆಗಳಿಗೆ ಪೈಪ್ ಮೋಟಾರ್ ಹಚ್ಚಿ ನೀರು ತಮ್ಮ ಜಮೀನುಗಳಿಗೆ ಹರಿಸುವುದುರಿಂದ ತುಂಗಳ ಜಾಕ್ವೆಲಗೆ ನೀರು ಖಾಲಿಯಾಗಿದೆ, ಇದರಿಂದ ತುಂಗಳ ಸಾವಳಗಿ ಏತ ನೀರಾವರಿ ಯೋಜನೆಗೆ ಜಮೀನುಗಳಿಗೆ ನೀರು ಹೋಗುತ್ತಿಲ್ಲ ಎಂದು ರೈತರು ದೂರಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಅರವಿಂದಗೌಡ ಪಾಟೀಲ, ಬಿಜೆಪಿ ನಗರ ಅಧ್ಯಕ್ಷರಾದ ಅಜಯ ಕಡಪಟ್ಟಿ, ಹಿರಿಯರಾದ ಪುಲಿಕೇಶಿ ನಾಂದ್ರೇಕರ, ಚಿದಾನಂದ ಬಿರಾದಾರ, ರಾಜು ಹಿರೇಮಠ, ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಪರಮಗೌಡ, ಗಾಮೇಶ ಬಾಪಕರ, ಸುಜೀತಗೌಡ ಪಾಟೀಲ, ಭರತೇಶ ಜಮಖಂಡಿ, ಮುಖಂಡರಾದ ಕಿರಣ ಕದಂ, ರವಿ ಹಿಪ್ಪರಗಿ, ರಾಜು ಕರಾಬೆ, ಲಕ್ಷ್ಮಣ್ ಪುಂಡೆ, ಸದಾಶಿವ ಹೋನವಾಡ, ಪರಶುರಾಮ್ ಕುಂಬಾರ, ಸುರೇಶ ಮನಗೂಳಿ, ತುಕಾರಾಮ ಹಾಜವಗೋಳ, ಅಧಿಕಾರಿಗಳು ಸೇರಿದಂತೆ ಸುತ್ತ ಮುತಲಿನ ಗ್ರಾಮದ ರೈತರು ಹಿರಿಯರು ಉಪಸ್ಥಿತರಿದ್ದರು.

About Mallikarjun

Check Also

ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ

Kalyan Karnataka Festival Day: Land Title Deed Distribution ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸೆ.17ರಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.