ಕೊಪ್ಪಳ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದಲ್ಲೆ ಹಲವಾರು ಹಗರಣದ ಕೊಡುಗೆ ನೀಡಿದೆ, ಮೈಸೂರು ಮೂಡಾ ಹಗರಣ ನೇರವಾಗಿ ಸಿಎಂ ಭಾಗಿ ಆಗಿದ್ದು ಅವರು ರಾಜೀನಾಮೆ ನೀಡವಂತೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಆಗ್ರಹಿಸಿದರು.
ಅವರು ಕೊಪ್ಪಳ ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ ಕೇವಲ ಎರಡು – ಮೂರು ಸೈಟ್ ನೀಡಬೇಕಿತ್ತು ಆದರೆ 14 ಸೈಟ್ ನೀಡುವ ಮೂಲಕ ಸಿ ಎಂ ಕುಟುಂಬದ ಪರವಾಗಿ ಕೆಲಸ ಮಾಡಿದ್ದಾರೆ.
ಸಾಧಕರಿಗೆ ನೀಡುವ ಪ್ಲಾಟ್ ಗಳನ್ನು ನೀಡಬೇಕಾದ ಸೈಟ್ ನೀಡಿದ್ದು, 80 ಸಾವಿರ ಅರ್ಜಿ ಇದ್ದರು ಸಹ , ಅವರ ಪತ್ನಿ ಹಾಗೂ ಹಿಂಬಾಲರಿಗೆ ಸೈಟ್ ನೀಡಿದ್ದಾರೆ ಎಂದು ಆರೋಪಿಸಿದ ಅವರು ಸಿಎಂ ಹಾಗೂ ನಗರಾಭಿವೃದ್ಧಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಸ್ ಐ ಟಿ ತನೀಕೆ ಮುಲಕ ಕೇಸ ಮುಚ್ಚಿಹಾಕುವಂತ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು ಸರ್ಕಾರ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ಮುಡಾ ಜಲೋ : ಕಾನೂನು ಬಾಹಿರ ವಾಗಿ ಸೈಟ್ ಹಂಚಿಕೆ ಖಂಡಿಸಿ ಅಂದಾಜು ಐದು ಕೋಟಿ ಹಗರಣ ತನಿಖೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ರಜ್ಯಾಧ್ಯಕ್ಷ ವಿಜಯೇಂದ್ರ ಅವರ ಕರೆ ಮೆರೆಗೆ ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲೆಯಿಂದ ಸಹ ಕಾರ್ಯಕರ್ತರು ಭಾಗವಹಿಸಲಿದ್ದೆವೆ ಎಂದು ಹೇಳಿದರು.
ಶಾಸಕ ಬಸವರಾಜ ರಾಯರೆಡ್ಡಿ ಹೇಳಿದಂತೆ ಈ ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆಯುತ್ತಿದೆ, ನೇರವಾಗಿ ಹಣ ವರ್ಗಾವಣೆ ಮಾಡುವ ದಂದೆ ಮಾಡುತ್ತಿರುವ ರಾಜ್ಯ ಸರ್ಕಾರ ವರ್ಗಾವಣೆಯಲ್ಲಿಯು ಸಹ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಡೆಸಗೂರ, ಮುಖಂಡ ಬಸವರಾಜ ಕ್ಯಾವಟರ, ಸೋಮಶೇಖರ ಗೌಡ ,ಪ್ರಮೋದ ಕಾರಕೂನ ,ಅಮೀತ ಕಂಪ್ಲಿಕರ್ ಇತರರು ಇದ್ದರು.