Breaking News

ಯಲಬುರ್ಗಾತಾಲೂಕು ಪಂಚಾಯತ ಕೆಡಿಪಿ ಸಭೆಯಲ್ಲಿಅಧಿಕಾರಿಗಳಿಗೆ ಶಾಸಕ ರಾಯರಡ್ಡಿ ಖಡಕ್ ಎಚ್ಚರಿಕೆ

ಜನಸಾಮಾನ್ಯರಿಗೆ ಕುಡಿಯೋ ನೀರು ಸಮಸ್ಯೆ ಆಗದಂತೆ ಕ್ರಮವಹಿಸಲು ಶಾಸಕರ ಸೂಚನೆ ,,,

ಜಾಹೀರಾತು


ವರದಿ : ಪಂಚಯ್ಯ ಹಿರೇಮಠ

ಕೊಪ್ಪಳ : (ಯಲಬುರ್ಗಾ) ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ತ್ರೈಮಾಸಿಕ ಕೆಡಿಪಿ ಸಭೆ ಯಲಬುರ್ಗಾ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಜರುಗಿತು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯೋ ನೀರು ಸಮಸ್ಯೆ ಆಗದಂತೆ ಎಇಇ ಮತ್ತು ಪಿ.ಡಿ.ಓ ರವರು ಕ್ರಮ ವಹಿಸಬೇಕು. ಗುಣಮಟ್ಟದ ಪೈಪ್ ಲೈನ್ ಹಾಕಬೇಕು.

ಗ್ರಾಮೀಣ ಪ್ರದೇಶದ ಕಸ, ಚರಂಡಿ ವ್ಯವಸ್ಥೆ ಸರಿಯಾಗಬೇಕು. ಸಣ್ಣ ಸಣ್ಣ ಸಮಸ್ಯೆಗಳಿಗೆ ಜನಪ್ರತಿ ನಿಧಿಗಳಲ್ಲಿಗೆ ಬರಬಾರದು, ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯನ್ನು ನಿಯಮಾನುಸಾರ ಮಾಡಬೇಕು ಎಂದು ಖಡಕ್ ಆಗಿ ಹೇಳಿದರು.

ಗ್ರಾಮೀಣ ರಸ್ತೆಗಳ ನಿರ್ಮಾಣ ಮಾಡುವ ಕಾಮಗಾರಿಗಳನ್ನು ಗುಣಮಟ್ಟದಿಂದ ಅನುಷ್ಠಾನವಾಗಬೇಕು ಎಂದರು.
ಕೃಷಿ ಇಲಾಖೆ, ಬಿತ್ತನೆ ಬೀಜಗಳು ವಿತರಣೆ, ಟ್ರಾಕ್ಟರ್, ಟ್ರಾಕ್ಟರ್ ಸಲಕರಣೆಗಳನ್ನು ಸರಿಯಾದ ಫಲಾನುಭವಿಗಳಿಗೆ ವಿತರಣೆ ಮಾಡಬೇಕು.

ಕುಕನೂರ ತಾಲೂಕಿನ ತಳಕಲ್ ಭಾಗದಲ್ಲಿನ 14 ಗ್ರಾಮ ಪಂಚಾಯತಿಗಳಲ್ಲಿ ಹಳೆಯ ಟೆಂಡರ್ ನಂತೆ 30 lpcd ಮಾತ್ರ ನೀರು ಬರುತ್ತಿದ್ದು, ಆದನ್ನು 85 lpcd ಕೊಡಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲು ಎಇಇ ರವರಿಗೆ ಸೂಚಿಸಿದರು.

ಮತ್ತು ತಕ್ಷಣದ ಪರಿಹಾರವಾಗಿ ತೋಂಡಿಹಾಳ ಮತ್ತು ಬನ್ನಿಕೊಪ್ಪ MBR ಕೇಂದ್ರಗಳಲ್ಲಿ ವಾಟರ್ ಪಂಪಿಗ್ ಕ್ಯಾಪಾಸಿಟಿ ಹೆಚ್ಚಿಸಲು ಅಗತ್ಯ ಕ್ರಮವಹಿಸಲು ಕುಡಿಯೋ ನೀರು ಎಇಇ ರವರೆಗೆ ಸೂಚಿಸಿದರು.

ನಂತರ ವಿವಿಧ ಇಲಾಖೆ ಸಭೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಪ್ರಸ್ತಾಪಿಸಿದರು.
ಸಭೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಕುಕನೂರ ಹಾಗೂ ಯಲಬುರ್ಗಾ, ಅವಳಿ ತಾಲೂಕಿನ ತಹಶೀಲ್ದಾರರು, ಸಿ.ಪಿ.ಐ ಸಾಹೇಬರು. ತಾಲೂಕ ಮಟ್ಟದ ಅಧಿಕಾರಿಗಳು, PDO ರವರು, KDP ನಾಮ ನಿರ್ದೇಸಿತ ಸದಸ್ಯರು, ತಾಪಂ ಸಿಬ್ಬಂದಿಗಳು ಹಾಜರಿದ್ದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.