
ಪಂಚಯ್ಯ ಹಿರೇಮಠ,,,,
ಕೊಪ್ಪಳ: ಕುಕನೂರು ಪಟ್ಟಣದ ಸ್ಥಳೀಯ ಪತ್ರಕರ್ತರನ್ನು ಸಿದ್ರಾಮಯ್ಯನವರ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿಯವರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ಭೂಮಿ ಪಡೆಯಲು ಆಯೋಜಿಸಿದ, ರೈತರ, ಗ್ರಾಮಸ್ಥರ ಸಭೆಯಲ್ಲಿ ನೀಡಿದ ಹೇಳಿಕೆ ಹಿನ್ನೆಲೆ,,,,
ಬೆರಳೆಣಿಕೆಯಷ್ಟೇ ಪತ್ರಕರ್ತರಿಗೆ ಪತ್ರಿಕಾಗೋಷ್ಠಿ ನಡೆಸಿದ್ದು ಉಳಿದ ಪತ್ರಕರ್ತರಿಗೆ ಅಸಮಾಧಾನವಾಗಿದೆ. ಕಾರಣ ಮಂಗಳೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿಯವರ ಹೇಳಿಕೆ ಹೀಗಿದ್ದು, ಸಿಎಂ ಜೊತೆಗೆ ಇರುವ ನನಗೆ ಮಾತ್ರ ಆರ್ಥಿಕ ಪರಸ್ಥಿತಿ ಮತ್ತು ಸಮಸ್ಯೆ ನನಗೆ ಮಾತ್ರ ಗೊತ್ತು. ಕಾರಣ ಪಂಚ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತುಂಬಾ ಕಷ್ಟವಾಗುತ್ತದೆ. ಸಿಎಂ ಸಿದ್ರಾಮಯ್ಯ ನನನ್ನು ತಮ್ಮ ಆರ್ಥಿಕ ಸಲಹೆಗಾರರಾಗಿ ಮಾಡಿಕೊಂಡಿದ್ದಾರೆ. ನಾನು ದಿನ ನಿತ್ಯ ಅವರ ಜೊತೆಯಲ್ಲೇ ಇರುವದರಿಂದ ನನ್ನ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ಹಣಕಾಸಿನ ಆಂತರಿಕ ವಿಚಾರ ನನಗೆ ಮಾತ್ರ ಗೊತ್ತು ಎನ್ನುವ ಹೇಳಿಕೆಗೆ ಸ್ಪಷ್ಟಿಕರಣ ನೀಡಲೆಂದು ತಮ್ಮ ಕಾರ್ಯಕರ್ತರ ಮೂಲಕ ಬೆರಳೆಣಿಕೆಯಷ್ಟು ಪತ್ರಕರ್ತರನ್ನು ಕರೆಯಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿತು.
Kalyanasiri Kannada News Live 24×7 | News Karnataka