Hands that give hope and hands that give are ever greater.
ಕೊಪ್ಪಳ,ಜೂ೧೧:. ತಾಲೂಕಿನ ಗ್ರಾಮೀಣ ಭಾಗದಲ್ಲಿ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ನೊಟ್ ಪುಸ್ತಕ ಮತ್ತು ಬ್ಯಾಗ್ ಆಶಾ ಜ್ಯೋತಿ ಸ್ನೇಹಿತರ ಬಳಗದಿಂದ ಆರು ಸರ್ಕಾರಿ ಶಾಲೆಗಳಿಗೆ ಅಂದರೆ –
01.ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಹಳೇ ಬಂಡಿಹರ್ಲಾಪುರ.
02.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಹಮ್ಮದ್ ನಗರ.
03.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಂಡಿಹರ್ಲಾಪುರ.
04.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ.
05.ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆ ಬಸಾಪುರ.
06.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ಬಂಡಿಹರ್ಲಾಪುರ.
ಇಂತಹ ಶಾಲೆಗಳಲ್ಲಿ ಸುಮಾರು 8000 ಪುಸ್ತಕಗಳು ಮತ್ತು 800ಕ್ಕೂ ಹೆಚ್ಚು ಬ್ಯಾಗ್ ವಿತರಿಸಲಾಯಿತು ಎಂದು ಸೇವಕನಾದ ಸುಗಸಾನಿ ಸಹದೇವ ಇವರು ತಿಳಿಸಿದರು.
ಸುಗಸಾನಿ ಅರ್ಜುನ್ ಬಾಬುರವರು ಆಶಾಜೋತಿ ಗೆಳೆಯರ ಬಳಗಕ್ಕೆ ಅನಂತ ಧನ್ಯವಾದಗಳು ಎಂದರು.
ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಗಾದೆ ಮಾತಿನಂತೆ ಆಶಾ ಜ್ಯೋತಿ ಗೆಳೆಯರ ಬಳಗದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವುದಕ್ಕೆ ಖುಷಿ ಕೊಟ್ಟಿದೆ ಎಂದು ಸಮೀರ್ ಬಂಡಿಹರ್ಲಾಪುರ ಹೇಳಿದರು.
ಅಬ್ದುಲ್ ವಾಹೀದ್ ಹೊಸಹಳ್ಳಿ ಸಮಾಜ ಸೇವಕರು ಆಶಾ ಜ್ಯೋತಿ ಸಂಘಕ್ಕೆ ಸಂತಸ ಮತ್ತು ಅಭಿನಂದನೆ ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಸದ್ದಾಂ ಕಳ್ಳಿಮನಿ ಹೊಸಹಳ್ಳಿ ಮಾತ ನಾಡಿ ಮಕ್ಕಳಿಗೆ ಕಲಿಕಾ ಚಟುವಟಿಕೆಯಲ್ಲಿ ತೊಂದರೆಯಾದರೆ ಸದಾ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಧ್ಯೇಯ ವ್ಯಾಖ್ಯ ನುಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಬಸವರಾಜ್ ಹೊಸಳ್ಳಿ ಆಶಾ ಜ್ಯೋತಿ ಸಂಸ್ಥೆಗೆ ಅನಂತ ಅನಂತ ಧನ್ಯವಾದಗಳು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಪಾದ್ಯರು, ಗುರುಗಳು, ಮುಖಂಡರು, ಮತ್ತು ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.