Dr. Lakshmana H. Hiremani elected as State Committee Member : Congratulations

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ರಾಜೂರ ಗ್ರಾಮದ ಬಿಜೆಪಿ ಯ ಧುರೀಣರಾದ ಡಾ.ಲಕ್ಷ್ಮಣ ಎಚ್. ಹಿರೇಮನಿ ಇವರನ್ನು ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠಧ ರಾಜ್ಯ ಸಮಿತಿಯ ಸದಸ್ಯರನ್ನಾಗಿ ನಿಯುಕ್ತಿ ಮಾಡಲಾಗಿದೆ ಎಂದು ಭಾಜಪ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಡಾ.ನಾರಾಯಣ.ಕೆ ತಿಳಿಸಿದ್ದಾರೆ.
ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ. ಸಂಘಟನೆಯನ್ನು ತಳಮಟ್ಟದ ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಆದೇಶಿಸಿದರು.
ನಂತರ ಯುವ ನಾಯಕರು ಶಿಕಾರಿಪುರದ ಜನಪ್ರಿಯ ಶಾಸಕರು ಹಾಗೂ ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ ಜೀ ಅವರು ಆದೇಶ ಪ್ರತಿಯನ್ನು ನೀಡಿದರು.
ರಾಜ್ಯ ಬಿಜೆಪಿ ಎಲ್ಲಾ ಮುಖಂಡರುಗಳಿಗೆ ಡಾ.ಲಕ್ಷ್ಮಣ ಎಚ್. ಹಿರೇಮನಿ ಹೃದಯಪೂರ್ವಕ ಅಭಿನಂದಿಸಿ, ಧನ್ಯವಾದಗಳನ್ನು ತಿಳಿಸಿದರು