ಗಂಗಾವತಿ : ಚರ್ಮಗಂಟು ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗಂಗಾವತಿ ತಾಲೂಕು ಶ್ರೀರಾಮನಗರ ಗ್ರಾಮದಲ್ಲಿ ಬುಧವಾರ ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು. ಈ ವೇಳೆ ಸಹಾಯಕ ಪಶು ನಿರ್ದೇಶಕರಾದ ಡಾ.ಜಾಕೀರ್ ಹುಸೇನ್ ಮಾತನಾಡಿ ಮರಳಿ ಹೋಬಳಿಯ ಶ್ರೀರಾಮನಗರ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಲ್ಲಿ ಇದುವರೆಗೂ ಒಟ್ಟು 2839 ಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಗಂಗಾವತಿ ತಾಲೂಕಿನಲ್ಲಿ ಒಟ್ಟು ನಿನ್ನೆ ವರೆಗೆ 14177 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಈ ತಿಂಗಳ 25 ನೇ ದಿನಾಂಕದ ವರೆಗೂ ಲಸಿಕೆ ಕಾರ್ಯಕ್ರಮ ನಡೆಯಲಿದೆ. ರೈತರು ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದು ತಿಳಿಸಿದರು. ಪಶು ಸಖಿಯವರು ಗ್ರಾಮದ ಮನೆ ಮನೆಗೆ ತೆರಳಿ ಚರ್ಮಗಂಟು ರೋಗದ ಬಗ್ಗೆ ಜಾಗೃತಿ ಮೂಡಿಸಿ ಹೆಚ್ಚಿನ ರಾಸುಗಳಿಗೆ ಲಸಿಕೆಯನ್ನು ಮಾಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಶು ಸಖಿ ಸುಶೀಲಾ, ಕೆ.ಎಂ.ಎಫ್ ನ ಪ್ರಸಾದ್ ಮತ್ತು ಗ್ರಾಮಸ್ಥರು ಇದ್ದರು.
ಜಾನುವಾರುಗಳ ಚರ್ಮಗಂಟು ರೋಗ ತಡೆ ಲಸಿಕೆ.
ಜಾಹೀರಾತು