Health check-up camps benefit the poor: Gauramma

ಗಂಗಾವತಿ :ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗೌರಮ್ಮ ಶಿವನಗೌಡ್ರು ಹೇಳಿದರು.
ರೋಟರಿ ಕ್ಲಬ್ ಆಫ್ ರೈಸ್ ಬಾಲ್ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗ ದೊಂದಿಗೆ ಜಂಗಮರ ಕಲ್ಗುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಶಿಬಿರದಲ್ಲಿ ಕ್ಯಾನ್ಸರ್ ತಜ್ಞರು, ಶಸ್ತ್ರ ಚಿಕಿತ್ಸೆ ತಜ್ಞರು, ಮೊಳೆ ಮತ್ತು ಕೀಲುರೋಗ ಮತ್ತು ಕೀಲುರೋಗ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೊತಿ,ಮಕ್ಕಳ ತಪಾಸಣೆ ಸೇರಿದಂತೆ ಇನ್ನೂ ಹಲವಾರು ರೋಗಗಳನ್ನು ನೋಡಲಕ್ಕೆ ಬೆಂಗಳೂರಿಂದ ವೈದ್ಯಾಧಿಕಾರಿಗಳು ಬಂದಿದ್ದರು, ಆದಕಾರಣ ಗ್ರಾಮದವರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಲಹೆಯನ್ನು ನೀಡಿದರು.
ನಂತರ ಮಾತನಾಡಿದ ಗಂಗಾವತಿ ರೋಟರಿ ಕ್ಲಬ್ ಅಧ್ಯಕ್ಷ ಗೀತಾ ಚೌದ್ರಿ ಇವರು ನಮ್ಮ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ವತಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿದ್ದವೆ, ನಿಮ್ಮ ಸಹಕಾರ, ಸಹಾಯ ಯಾವಾಗಲೂ ನಮ್ಮ ಸಂಸ್ಥೆಯ ಮೇಲೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಧನಂಜಯ, ರಾಘವೇಂದ್ರ, ಮುರುಗೇಶ್, ರೋಟರಿ ಕ್ಲಬ್ ಕಾರ್ಯದರ್ಶಿ ಭಾರತಿ ಕೃಷ್ಣ ಆಗುಲೂರು, ಉಪಾಧ್ಯಕ್ಷರಾದ ಮಲ್ಲಮ್ಮ ನವಲಿ, ಜಂಟಿ ಕಾರ್ಯದರ್ಶಿ ವಿಜಯಲಕ್ಷ್ಮಿ ಹಿರೇಮಠ, ಸದಸ್ಯರಾದ ಸೋಪಿಯಾರಾಣಿ,ಬಿ.ಶ್ರೀದೇವಿ ಶಶಿಕಲಾ ಹಿರೇಮಠ, ಬಸಮ್ಮ, ದ್ರಾಕ್ಷಾಣಿ, ವನಜಾಕ್ಷಿ, ಸೇರಿದಂತೆ ಇತರರು ಇದ್ದರು.