Breaking News

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ ದಾರರಿಗೆ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಗೊರ್ಲೆಕೊಪ್ಪ ಗ್ರಾಮದ
ಮಹಿಳೆಯರು, ಗ್ರಾಮಸ್ಥರು ಆಗ್ರಹಿಸಿ ಇಟಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಕೆಳಗಿನಮನಿ ಇವರಿಗೆ ಮನವಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಲೆಗೆ ಹೆಸರಾದ ಈ ಗ್ರಾಮದ ಸೀಮಾದಲ್ಲಿ ಮದ್ಯದ ಅಂಗಡಿ ತೆರೆದರೇ, ನಮ್ಮ ಗ್ರಾಮದ ಯುವಕರು ದಾರಿ ತಪ್ಪುತ್ತಾರೇ, ಇಲ್ಲಿ ಹೆಚ್ಚಾಗಿ ಜಂಗಮರ ಮನೆತನಗಳಿದ್ದು, ನಮ್ಮ ಪರಂಪರೆಗೆ ದಕ್ಕೆಯಾಗುತ್ತದೆ.

ಅಲ್ಲೋಬ್ಬ ಇಲ್ಲೋಬ್ಬ ಕಾಣ ಸಿಗುವ ಕುಡುಕರಿಂದ ಗ್ರಾಮದ ಕೇಲವೊಂದು ಮನೆಗಳಲ್ಲಿ ದಿನ ನಿತ್ಯ ಮಹಿಳೆಯರು ಗೋಳು ಹೇಳ ತೀರದಾಗಿದೆ,,,,,

ಪ್ರತಿ ನಿತ್ಯ ಮನೆಯವರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮದ ಕಲಾವಿದರಾದ ಶರಣಯ್ಯ ಇಟಗಿ ತಿಳಿಸಿದರು.

ಕುಕನೂರು ಪಟ್ಟಣವು ನಮ್ಮ ಗ್ರಾಮದಿಂದ ಕೇವಲ 2-3 ಕಿ.ಮೀ ದೂರದಲ್ಲಿದ್ದರು ಅಲ್ಲಿಂದ ಕುಡಿದು ಬಂದ ಕುಡುಕರು ದಿನ ನಿತ್ಯ ರಂಪಾಟ ಮಾಡುತ್ತಾ, ಬಾಯಿಗೆ ಬಂದಂತೆ ಕಿರುಚಾಡತ್ತ, ಮನೆಯವರ ನಿದ್ದೆಗೇಡುಸುತ್ತಿದ್ದಾರೆ ಇಂತವರಿಂದ ಗ್ರಾಮದ ಪರಿಸರವೇ ಹಾಳಾಗುತ್ತಿದೆ.

ಇನ್ನೂ ಇದೇ ಗ್ರಾಮದಲ್ಲೇ ಮದ್ಯ ದೊರೆತರೇ ಯುವಕರು ಹಾಳಾಗುವುದು ಖಂಡಿತ, ನಮ್ಮ ಗ್ರಾಮ ಕಲೆಯ ತವರೂರಾಗಿದ್ದು ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಲು ಬಿಡುವುದಿಲ್ಲಾ ಎಂದು ರತ್ನಮ್ಮ ಪೋಲಿಸ್ ಪಾಟೀಲ್ ಆಗ್ರಹಿಸಿದರು.

ಒಂದು ವೇಳೆ ಸ್ಥಳೀಯ ಆಡಳಿತದವರು ಅನುಮತಿ ನೀಡಿದ್ದೆ ಆದಲ್ಲಿ ಗ್ರಾಮದ ಮಹಿಳೆಯರೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮದ ಪಾರಮ್ಮ ಪೋಲಿಸ್ ಪಾಟೀಲ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಶಿಕಲಾ ಹಿರೇಮಠ.ರತ್ನಮ್ಮ ಫೋಲಿಸ್ ಪಾಟೀಲ್ , ಪಾರಮ್ಮ ಪೋಲಿಸ್ ಪಾಟೀಲ್, ಶೇಖಮ್ಮ ಬಿನ್ನಾಳ, ಗಂಗಮ್ಮ ಜುಲ್ಪಿ, ದ್ರಾಕ್ಷಾಣಮ್ಮ ಗುನ್ನಾಳ, ಜಯಮ್ಮ ಹಿರೇಮಠ, ಹುಚ್ಚಿರಯ್ಯ ಗುನ್ನಾಳ, ಚನ್ನಯ್ಯ ಹುಬ್ಬಳ್ಳಿ, ಬಸಯ್ಯ ಹಿರೇಮಠ ಇನ್ನಿತರರು ಇದ್ದರು.

ವರದಿ : ಪಂಚಯ್ಯ ಹಿರೇಮಠ,,,,

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *