
ಬೆಂಗಳೂರು: ಹಿಂದೂಸ್ತಾನ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಪ್ರತಿನಿಧಿಗಳು ಕರ್ನಾಟಕದ ರಾಜ್ಯಪಾಲ ತಾವರಚಂದ್ ಗಹ್ಲೋಟ್ ಇಂದು ಭೇಟಿಯಾಗಿ ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಡೆಸಿದ ಚಟುವಟಿಕೆಯನ್ನು ವಿವರಿಸಿದರು.
ರಾಜ್ಯ ಅಧ್ಯಕ್ಷ ಡಾ ಅಫ್ಸರ್ ಅಹ್ಮದ್ ಅವರ ತಂಡ ಕೈಗೊಂಡಿರುವ ನೂತನ ಯೋಜನೆಗಳು ಮತ್ತು ಚಟುವಟಿಕೆಗಳ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯಪಾಲರು ಪ್ರಸ್ತಾವನೆ ಸ್ವೀಕರಿಸಿದರು ಮತ್ತು ಭವಿಷ್ಯದಲ್ಲಿ ಎಲ್ಲಾ ಬೆಂಬಲವನ್ನು ಭರವಸೆ ನೀಡಿದರು.
ಈ ಸಮಯದಲ್ಲಿ ರಾಜ್ಯಪಾಲರು ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ನ ಹೆಚ್.ಎಸ್.ಜಿ.ಎ ಲಾಗ್‌ಬುಕ್ ಬಿಡುಗಡೆ ಮಾಡಿದರು.
ಹಿಂದೂಸ್ತಾನ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಶನ್ ರಾಷ್ಟ್ರೀಯ ಪ್ರಧಾನ ಕಛೇರಿಯಿಂದ ಕೆ.ಎಸ್ ಚೌಹಾಣ್, ರಾಜ್ಯ ಅಧ್ಯಕ್ಷ ಡಾ. ಅಫ್ಶದ್ ಅಹಮದ್, ಎನ್ಒಸಿ ನೇತೃತ್ವದ ಪ್ರತಿನಿಧಿಗಳು ಕೇಂದ್ರ ವಿಭಾಗ ಮಾದ್ಯಮ ಕಮೀಷನರ್ ಗಂಡಸಿ ಸದಾನಂದಸ್ವಾಮಿ, ಕೇಂದ್ರ ಮುಖ್ಯಸ್ಥರಾದ ಧನಂಜಯ ಕೆ.ಎಚ್ ಮತ್ತು ಬೆ. ಉತ್ತರ ಕಮೀಷನರ್ ಯುವರಾಜು ಕೆ.ಎ ಭಾಗವಹಿಸಿದರು.
Kalyanasiri Kannada News Live 24×7 | News Karnataka
