Breaking News

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.ನಾಗಲಕ್ಷ್ಮಿ ಮಾತನಾಡುತ್ತ, ಈ ಸಮ್ಮೇಳನಕ್ಕೆ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ನಗರ ಎಲ್ಲಾ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

  ಆಶಾ ಕಾರ್ಯಕರ್ತೆಯರ ಬಹುಮುಖ್ಯ ಬೇಡಿಕೆಗಳಾದ ಆಶಾ ಕಾರ್ಯಕರ್ತೆಯರ ಕಾರ್ಮಿಕರೆಂದು ಪರಿಗಣಿಸಲು ಹಾಗೂ ಆಶಾ ಕಾರ್ಯಕರ್ತೆಯರ ಕೆಲಸ ಕಾಯಂಗೊಳಿಸುವ ಇನ್ನಿತರ ಬೇಡಿಕೆಗಳ ಬಗ್ಗೆ  ಚರ್ಚಿಸಲಾಯಿತು.

ನಗರ ಆಶಾ ಕಾರ್ಯಕರ್ತೆಯರು, ಗ್ರಾಮೀಣ ಹಾಗೂ ನಗರದ ಜನರು ಮತ್ತು ಆರೋಗ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕಳೆದ 15 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಆಶಾ ಕಾರ್ಯಕರ್ತೆ ಯರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲಕ್ಕಾಗಿ ಕಳೆದ ಹದಿನೈದು ವರ್ಷಗಳಿಂದಲೂ ಸಹ ಸತತವಾಗಿ ಹೋರಾಡುತ್ತಿದ್ದಾರೆ. ಬಡ ಕುಟುಂಬ ಗಳಿಂದ ಬರುವ ಆಶಾ ಕಾರ್ಯಕರ್ತೆ ಯರಿಗೆ ಯಾವುದೇ ಸರ್ಕಾರಗಳು ಕಾರ್ಮಿಕರ ಸ್ಥಾನಮಾನವನ್ನಾಗಲಿ, ಕನಿಷ್ಟ ವೇತನವನ್ನಾಗಲಿ ಕಲ್ಪಿಸದಿರುವುದು ದುರದೃಷ್ಟಕರ, ಪ್ರಸಕ್ತವಾಗಿ ತಮ್ಮ ಹೋರಾಟದ ಬೇಡಿಕೆಗಳನ್ನು ಯಶಸ್ವಿಯಾಗಿ ಗಟ್ಟಿ ಗೊಳಿಸಲು ಅಗತ್ಯವಿರುವ ಸಂಘಟನಾತ್ಮಕ ನಾವುಗಳು ಗಟ್ಟಿಗೊಳ್ಳಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಗ್ರಾಮೀಣ ಘಟಕದ ಅಧ್ಯಕ್ಷ ಜ್ಯೋತಿಲಕ್ಷ್ಮಿ, ಸುನೀತಾ ಉಪಸ್ಥಿತರಿದ್ದರು.

ನಗರ ಆಶಾ ಕಾರ್ಯಕರ್ತೆಯರ ಸಮ್ಮೇಳನ ಹೊಸ ಸಮಿತಿ 

 ಅಧ್ಯಕ್ಷರು ವಿಜಯ ಲಕ್ಷ್ಮಿ ಆಚಾರ್,ಉಪಾಧ್ಯಕ್ಷರುಗಳು ಲಾಲಬಿ ಅನ್ನಪೂರ್ಣ, ರಜಿಯಾಬೇಗಂ, ಚಂಪಾ, ಆಫ್ರಿನಾ, ದ್ರಾಕ್ಷಿಯಣಿ, ರಾಜೇಶ್ವರಿ, ಅಮರಮ್ಮ,

ಕಾರ್ಯದರ್ಶಿ ಶಿವಮ್ಮ ಯಲಬುರ್ಗಾ, ಕಾರ್ಯಕಾರಿ ಮಂಡಳಿ ಸದಸ್ಯರು 

ಶರಣಮ್ಮ, ಮೀನಾಕ್ಷಿ, ರೇಖಾ, ರಾಧಾ, ಖುರ್ಷಿದ ಬಾನು, ಸಂಗೀತ, ಲಲಿತಾ, ಸುಮಾ, ಅಫ್ರೀನಾ, ಈರಮ್ಮಗಂಗಾವತಿ, ಸರೋಜ ಬಾಯಿ, ಜಯಶ್ರೀ, ಲಕ್ಷ್ಮಿ, ಸವಿತಾ, ಸಮೀರಾ ಬಾನು,ಹನುಮಕ್ಕ, ಪ್ರೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *