
ಗಂಗಾವತಿ: ಆನೆಗುಂದಿಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಶ್ರೀಮತಿ ಲಲಿತಾರಾಣಿರವರ ಮಾರ್ಗದರ್ಶನದಲ್ಲಿ ಹೈಟೆಕ್ ಆಗಿ ನಿರ್ಮಾಣಗೊಂಡಿರುವ ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯವರಿAದ ಚಿತಾಗಾರದ ಸಹಕಾರ ನೀಡಿದ್ದು, ಈ ರುದ್ರಭೂಮಿಯ ಉದ್ಘಾಟನೆ ಕಾರ್ಯಕ್ರಮ ಜುಲೈ-೦೧ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಿತು ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ. ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ತಿಳಿಸಿದರು.
ಗ್ರಾಮದ ಹಿರಿಯರು ಹಾಗೂ ರುದ್ರಭೂಮಿಯ ಹೋರಾಟಗಾರರಾದ ಶ್ರೀ ನಿಜಲಿಂಗಪ್ಪರವರೊAದಿಗೆ ಜಂಟಿಯಾಗಿ ರುದ್ರಭೂಮಿಯ ಉದ್ಘಾಟನೆ ಮಾಡಿ ಮಾತನಾಡಿದರು. ನಮ್ಮ ಆನೆಗುಂದಿಯ ಹಿರಿಯರು ಹಾಗೂ ಹೋರಾಟಗಾರರಾದ ಶ್ರೀ ನಿಜಲಿಂಗಪ್ಪ ಅವರು ಆನೆಗುಂದಿಯಲ್ಲಿ ಎರಡು ಎಕರೆ ರುದ್ರಭೂಮಿಗೆ ಜಾಗ ಬೇಕೆಂದು ೧೯೯೨ ರಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ, ಅವರ ಕನಸು ಈಗ ನನಸಾಗಲಿದೆ, ಈ ರುದ್ರಭೂಮಿಯ ಕಾಮಗಾರಿ ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳಲು ಆನೆಗುಂದಿ ಗ್ರಾಮ ಪಂಚಾಯತ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಆನೆಗುಂದಿಯ ಎಲ್ಲಾ ಸಮಾಜದ ಗುರು ಹಿರಿಯರು ಇವರೆಲ್ಲ ಸಹಕಾರ ಮುಖ್ಯ ಕಾರಣವಾಗಿದೆ ಎಂದರು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರನಟ ಹಾಗೂ ಕಾಂಗ್ರೆಸ್ ಮುಖಂಡ ವಿಷ್ಣುತೀರ್ಥ ಜೋಶಿ, ಆನೆಗೂದಿಯ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ತಿರುಕಪ್ಪ ಆನೆಗುಂದಿ, ತಿಮ್ಮಪ್ಪ ಬಾಳೆಕಾಯಿ, ಗುರಪ್ಪ, ಹೊನ್ನಪ್ಪ ನಾಯಕ್, ಯುವರಾಜ್ ಕಡೆಬಾಗಿಲು, ನೂರ್, ಗ್ರಾಮಪಂಚಾಯತ್ ಸದಸ್ಯ ಶೇಖರ್, ರಮೇಶ ಕಲಾಲ್, ನಾಗಪ್ಪ ಮೆಟ್ರಿ, ಟಿ. ಚಂದ್ರು, ಆನೆಗುಂದಿಯ ಗ್ರಾಮದ ಗುರುಹಿರಿಯರು, ಸಮಸ್ತ ಎಲ್ಲಾ ಸಮಾಜದ ಮುಖಂಡರು, ಸಂಘ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.