Commemoration of Lingaikya by Phagu Halakatti and Pravachana Pitamahajagadgurulinganandaswamiji
ಕೊಪ್ಪಳ ; 30,ನಗರದ ಚನ್ನಬಸವೇಶ್ವರ ಕಾಲೋನಿಯ ಜಿಲ್ಲಾ ರಾಷ್ಟ್ರೀಯ ಬಸವ ದಳದ ಗುರು ಬಸವ ಮಂಟಪದಲ್ಲಿ, ಬಸವ ಧರ್ಮಪೀಠದ ಗಣ ನಾಯಕರು,ತ್ರಿಕಲ ಲಿಂಗಪೂಜಾ ನಿಷ್ಠಾವಂತರು,ಗೃಹಸ್ಥ ಜಂಗಮ ರಾದ ವೀರಣ್ಣ ಕೆ ಲಿಂಗಾಯತ ಇವರ ನೇತೃತ್ವದಲ್ಲಿ,ವಚನ ಶಾಸ್ತ್ರ ಪಿತಾಮಹ ಫ ಗು ಹಳಕಟ್ಟಿಯವರ ಸಂಸ್ಮರಣೆ ಹಾಗೂ ಪ್ರವಚನ ಪಿತಾಮಹ ಪರಮ ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಸ್ವಾಮೀಜಿಯವರ ಲಿಂಗೈಕ್ಯ ಸಂಸ್ಮರಣೆ ಆಯೋಜಿಸಿತ್ತು
ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಯವರ ಬಗ್ಗೆ ಸಿಂಧನೂರು ರಾ ಬದಳ ದ ಕಾರ್ಯದರ್ಶಿಶರಣ ಮಹಾದೇವಪ್ಪ ಚಿಂಚರಕಿರವರು ಮಾತನಾಡಿ
ಪೂಜ್ಯ ಶ್ರೀ ಲಿಂಗಾನಂದ ಅಪ್ಪಾಜಿಯವರು ವಿಶ್ವಗುರು ಬಸವಣ್ಣನವರು ಜನಿಸಿದ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೋಕಿನ ಮನಗೂಳಿ ಎಂಬ ಗ್ರಾಮದಲ್ಲಿ. ಗಣೇಶ ಚೌತಿಯ ೧೫ ಸೆಪ್ಟೆಂಬರ ೧೯೩೧ರಂದು ಜನಿಸಿ, ಬಿ. ಎ. ಆನರ್ಸ್ ಪದವೀಧದರರಾಗಿ, ೨೫ನೆ ಏಪ್ರಿಲ ೧೯೫೫ರಂದು ಅಧ್ಯಾತ್ಮಿಕ ಮಾನಸಾಂತರ ಹೊಂದಿ, ೧೯ ನವೆಂಬರ್ ೧೯೫೬ರಂದು ಜ್ಞಾನ ಸನ್ಯಾಸವನ್ನು ಸ್ವೀಕರಿಸಿ, ತಮ್ಮ ಕೊನೆಯುಸಿರಿರುವವರೆಗೂ ಒಂದು ದಿನವು ಬಿಡದೆ ಪ್ರವಚನದ ಜ್ಞಾನದಾಸೋಹ ಮಾಡಿದ ಪಾವನ ಚೇತನ. ಪೂಜ್ಯ ಸ್ವಾಮೀಜಿಯವರ ಬರುವು ಮತ್ತು ಬದುಕು ಬಸವ ತತ್ವಕ್ಕೆ ಜೀವಾಳ. ಬಸವ ಯುಗದ ಪುನರುತ್ಥಾನಕ್ಕೆ ನಾಂದಿ ಹಾಡಿದ ಚೇತನಶಕ್ತಿ ಪೂಜ್ಯ ಅಪ್ಪಾಜಿ ಎಂದರೆ ಉತ್ಪ್ರೇಕ್ಷೆಯಾಗದು.
ಶ್ರೀಗಳು ಚಲಿಸುವ ಜ್ಞಾನದೇಗುಲವಾಗಿ ಅಸಂಖ್ಯಾತ ಚೇತನಗಳಿಗೆ ಅರಿವಿನ ಬೆಳಕನಿತ್ತು ಹರಿವ ಜ್ಞಾನಗಂಗೆಯಾಗಿ, ಅಪರಿಮಿತ ಕ್ಷೇತ್ರದಲ್ಲಿ ಸಂಚರಿಸಿ ಪಾರಮಾರ್ಥಿಕ ನಂದನವನ್ನು ನಿರ್ಮಿಸಿದ ದಿವ್ಯ ಚೇತನ ಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಸ್ವಾಮಿಗಳು. ತಮ್ಮದೇ ಆದ ವಾಗ್ಮಿತ್ವದಿಂದ ಎಲ್ಲರನ್ನು ಎಚ್ಚರಿಸುತ್ತ ದೀಮಂತ ವ್ಯಕ್ತತ್ವದಿಂದ ಆಕರ್ಷಿಸುತ್ತ ಜನರಲ್ಲಿ ಧರ್ಮವನ್ನು ಕುರಿತು ಶ್ರದ್ಧೆ, ಆಸಕ್ತಿ ಅಭೀಪ್ಸೆ ಹುಟ್ಟಿಸಿದ ಪ್ರತಿಭಾವಂತ ಪ್ರವಚನಕಾರರು.ತಮ್ಮ ಪ್ರವಚನದಿಂದ ಜನರಲ್ಲಿ ಮತ್ತು ಮಠಾಧೀಶರಲ್ಲಿರುವ ಅಂಧಶ್ರದ್ಧೆ ,ಮೂಡನಂಬಿಕೆ,ಕಂದಾಚಾರ,ಶುಷ್ಕಾಚಾರ ಎಲ್ಲವನ್ನು ಓಡಿಸಿ,ಜಂಗಮರೆಂದರೆ ಯಾರು?ಅವರು ಏನು ಕೆಲಸ ಮಾಡಬೇಕು?ಅವರ ಗುರಿ ಏನು?ಎಂಬುದನ್ನು ತಿಳಿಸಿ,ಮಠದಿಂದ ಅವರನ್ನು ಹೊರಗೆ ಹೆಜ್ಜೆ ಇಡಿಸಿ,ಧರ್ಮ ಪ್ರಚಾರ ಮಾಡಲು ಕಲಿಸಿದರು.ಬಸವಣ್ಣನವರು ಲಿಂಗಾಯತರ ಧರ್ಮ ಎಂದಿದ್ದಕ್ಕೆ ಅಂದು ಕಲ್ಲಿನಿಂದ ಹೊಡಿಸಿಕೊಂಡರು.ಆದರೂ ಈ ಜಗತ್ತಿಗೆ ಬಸವಣ್ಣನವರೇ ಲಿಂಗಾಯತರ ಧರ್ಮಗುರು ಎಂದು ಪ್ರಚಾರ ಮಾಡುವುದನ್ನು ಬಿಡಲಿಲ್ಲ.ಅಂದು ಅವರು ಪಟ್ಟ ಶ್ರಮ ಇಂದು ಇಡೀ ಜಗತ್ತಿನ ಪೂಜ್ಯರು ನಾಡಿನ ಜನತೆ ಬಸವಣ್ಣನವರು ಎನ್ನಲು ಕಲಿತರು.
ಶ್ರೀಗಳು ೧೩ನೇ ಜನವರಿ ೧೯೯೨ರ ಸೋಮವಾರದಂದು ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಸ್ಥಾಪಿಸಿ ಪ್ರಥಮ ಪೀಠಾಧೀಶರಾಗಿ ಆರೋಹಿಸಿ ಅಸಂಖ್ಯಾತ ಬಸವ ಭಕ್ತರಿಗೆ ಆನಂದವನ್ನು ಉಂಟು ಮಾಡಿ, ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಧರ್ಮ ಪೀಠವೊಂದು ಇರದಿರುವ ಕೊರತೆಯನ್ನು ತುಂಬಿದರು.
ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನ ದಾಸೋಹ ಮಾಡುತ್ತ “ಪ್ರವಚನ ಪಿತಾಮಹ” ಎಂಬ ಬಿರುದು ಪಡೆದರು.
ವಿಶ್ವಗುರು ಬಸವಣ್ಣನವರು ಬೋಧಿಸಿದ ವಿಶ್ವಧರ್ಮದ ಸಾರವನ್ನು ಪ್ರವಚನ, ಸಾಹಿತ್ಯ ಕೃತಿಗಳ ಮೂಲಕ ಪ್ರಚಾರ ಮಾಡಿದ್ದರು.
ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಡಾ|| ಜಗದ್ಗುರು ಮಾತೆ ಮಹಾದೇವಿ ಮಾತಾಜಿಯವರನ್ನು ಪ್ರಥಮ ಅಧಿಕಾರಿಯನ್ನಾಗಿ ಮಾಡಿ, ಸ್ತ್ರೀ ಸಮಾನತೆ ತತ್ವವನ್ನು ಎತ್ತಿಹಿಡಿದ ಕ್ರಾಂತಿಕಾರಿಗಳು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿ, ಬಸವ ಮಂಟಪವನ್ನು ಕಟ್ಟಿಸಿದರು.
ಕೂಡಲಸಂಗಮ ಕ್ಷೇತ್ರವನ್ನು ಸರ್ವಾಂಗ ಸುಂದರವಾಗಿ ಕಟ್ಟಲೋಸುಗ ಬಸವ ಧರ್ಮ ಪೀಠ ಟ್ರಸ್ಟನ್ನು ರಚಿಸಿ, ಬೃಹತ್ ಯೋಜನೆಗಳನ್ನು ಪ್ರಾರಂಭಿಸಿರುವ ಅವಿಶ್ರಾಂತ ಕ್ರಿಯಾಮೂರ್ತಿ.
ನಾಡಿನಾದ್ಯಂತ ಸಂಚರಿಸಿ, ಜನಮನದಲ್ಲಿ ಬಸವ ತತ್ವದ ಬೀಜಗಳನ್ನು ಬಿತ್ತಿ; ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ’ ಎಂಬ ವಾತವರಣವನ್ನು ನಿರ್ಮಾಣ ಮಾಡಿ, ಬಸವ ಯುಗಕ್ಕೆ ನಾಂದಿ ಹಾಡಿದ ಜಂಗಮ ಜ್ಯೋತಿ.ಪೂಜ್ಯ ಲಿಂಗಾನಂದ ಅಪ್ಪಾಜಿಯವರು.
ಇಂತಹ ಮಹಾನ್ ಪೂಜ್ಯ ಶ್ರೀಗಳು ಇದೇ ತಿಂಗಳು (ಜೂನ್) ೩೦ ೧೯೯೫ರಂದು ಹಿರಿಯೂರಿನಲ್ಲಿ ಪ್ರವಚನ ಮಾಡುತ್ತಲೇ ಲಿಂಗೈಕ್ಯರಾದರು.ಅವರು ಯಾವ ಕಾರ್ಯವನ್ನು ಹೊತ್ತುಕೊಂಡು ಈ ಭೂಮಿಗೆ ಬಂದರೋ ಆ ಕಾರ್ಯವನ್ನು ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಮಾಡಿ ಮತ್ತೆ ತಮ್ಮ ಗೂಡಿಗೆ ತೆರಳಿದರು.ಮುಂದಿನ ಧರ್ಮದ ಕಾರ್ಯ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ.ಇಂದು ಅವರ ದೇಹ ಕಾಣದಾಗಿದೆ.ಆದರೆ ಅವರು ಇಟ್ಟ ಹೆಜ್ಜೆ ನಮಗೆ ಸ್ಪೂರ್ತಿಯಾಗಿದೆ.ಎಲ್ಲಿ ರಾಷ್ಟ್ರೀಯ ಬಸವ ದಳ ಚೆನ್ನಾಗಿರುವುದೋ,ಎಲ್ಲಿ ನಿಶ್ವಾರ್ಥತೆ,ಪ್ರಾಮಾಣಿಕತೆ ಇರುವುದೋ ಅಲ್ಲಿ ಅಪ್ಪಾಜಿ ಮಾತಾಜಿ ಜೇವಂತವಾಗಿದ್ದಾರೆ.ಎಂದು ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು .
ವಚನ ಶಾಸ್ತ್ರ ಪಿತಾಮಹ ಫ ಗು ಹಳಕಟ್ಟಿಯವರ ಕುರಿತುಅವರಸಾಧನೆಬಗ್ಗೆ,ಶರಣರಾದಸುಂಕಪ್ಪಅಮರಪುರ್,ಮಾತನಾಡಿ, 12ನೇ ಶತಮಾನದ ನಂತರ ಬಸವಾದಿ ಶರಣರ ವಚನ ಸಾಹಿತ್ಯಕ್ಕೆ ಹೊಸ ಮೆರುಗು ನೀಡಿ, ವಚನ ಸಾಹಿತ್ಯವನ್ನು ಈ ನಾಡಿಗೆ ಧಾರಿಯರದವರು ಡಾ.ಸ.ಗು ಹಳಕಟ್ಟಿ ಶರಣ- ರು. ಕತ್ತಲೆಯಲ್ಲಿದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಸಮಾಜದ ಪ್ರತಿಯೊಬ್ಬರಿಗೂ ಮುಟ್ಟುವಂತೆ ಮಾಡಿದ ಶ್ರೇಯಸ್ಸು ಇವರದು. ఒందు విత్తవిద్యాలయ చూడదం ఇరుద ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧಾ ಭಕ್ತಿಯಿಂದ ವಚನ ಸಾಹಿತ್ಯ ಮುದ್ರಿಸಿದರು. ಸುರಕ್ಷಿತವಾಗಿ ಸಂರಕ್ಷಿಸಿ, ಜಾಗತಿಕ ಲೋಕಕ್ಕೆ ಸಮರ್ಪಿಸಿದ್ದಾರೆ ಹಳಕಟ್ಟಿ ಶರಣರು,
ಬದುಕಿನೊದ್ದಕು ಶರಣರ ಮೌಲ್ಯಾಧಾರಿತ ಚಿಂತನೆಗಳನ್ನು ಜೀವನದಲ್ಲಿ ಆಳವಡಿಸಿಕೊಂಡು, ಪಾಲಿಸಿಕೊಂಡು ಬಂದಿರುವ ಶ್ರೀಯುತರು.ಸೇವೆಯೇ ಶ್ರೇಷ್ಠ ಜೀವನದ ಪಾಲಕರಾಗಿ ನಿಷ್ಕಲ್ಲರ ಜೀವನವನ್ನು ಸ್ಫೂರ್ತಿದಾಯಕ ಮೇರು ವ್ಯಕ್ತಿತ್ವದ ಶ್ರೇಷ್ಠ ಹೋರಾಟಗಾರರು. ಛಲಗಾರರು, ಮರಣವೇ ಮಾಹಾನವಮಿ ಎನ್ನುವ ಎದೆಗಾರಿಕೆಯ ಗುಣದವರು. ಹೀಗೆ ಜೀವನದ ಕೊನೆಯ ವಿಚಾರಗಳಿಗೂ ರಾಜಿ ಮಾಡಿ ಕೊಳ್ಳದೆ ಶರಣರ ವಚನ ಪ್ರಮುಖ ಕಾಯಕವನ್ನಾಗಿ ಮಾಡಿಕೊಂಡು, ಹಗಲಿರುಳು ಎನ್ನದೆ, ತಮ್ಮ ಜೀವನದ ಹಂಗನ್ನು ತೊರೆದು, ಮನೆ ಮಠವನ್ನು ಕಳೆದುಕೊಂಡು. ಬಸವಾದಿ ಪ್ರಮಥರ ವಿಚಾರಧಾರೆಗಳು ಈ ನಾಡಿನಲ್ಲಿ ಬಿತ್ತುವ ಕಾರ್ಯ ಮಾಡಿದ್ದಾರೆ. ಅವರು ಮಾಡಿದ ಕಾರ್ಯದ ಬಲದಿಂದಲೇ ಲಿಂಗಾಯತ ಧರ್ಮ ಇಂದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.ಅದಕ್ಕಾಗಿಯೇ ಶರಣ ಬಂಧುಗಳೇ ಹಳಕಟ್ಟಿಯವರ ಪಟ್ಟ ಶ್ರಮ ಹಾಗೂ ತ್ಯಾಗದ ನಿಸ್ವಾರ್ಥ ಸೇವೆಯನ್ನು ನಾವು ಇಂದು ನೆನೆಯಬೇಕಾಗಿದೆ. ಅವರು ಹಾಕಿಕೊಟ್ಟ ಸನ್ಮಾರ್ಗದ ದಾರಿಯಲ್ಲಿ ಹೆಜ್ಜೆ ಹಾಕಬೇಕಾಗಿದೆ. ಅವರ ದುಡಿಮೆಯ ಕಾಯಕವನ್ನು ನಾವೆಲ್ಲರೂ ಚಾಚೂತಪ್ಪದೆ ಅನುಸರಿಸಿ, ಶರಣ ತತ್ತ್ವ ಪ್ರಚಾರ ಮಾಡ ಬೇಕಾಗಿದೆ ಎಂದರು. ವೇದಿಕೆಯ ಮೇಲೆ ಗಂಗಾವತಿ ರಾ ಬ ದಳ ಶಾಖೆಯ ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಾಲ,ಬಳ್ಳಾರಿಯ ಅಂದ್ರಾಳ ಶಾಖೆಯ ಅಧ್ಯಕ್ಷರಾದ ಶಿವಕುಮಾರ, ಕೊಪ್ಪಳ ತಾಲೂಕ ಶಾಖೆಯ ಅಧ್ಯಕ್ಷರಾದ ಲಿಂಗನಗೌಡರು, ಹೊಸಪೇಟೆಯ ಶರಣ ಸೋ ದಾ ವೀರುಪಾಕ್ಷಗೌಡರು ಇದ್ದರು.
ಈ ಸಂಧರ್ಭದಲ್ಲಿ ಗಂಗಾವತಿಯ ಹೆಚ್ ಮಲ್ಲಿಕಾರ್ಜುನ , ವಿರೇಶ ಕುಂಬಾರ,ವಿಜಯ ಲಕ್ಷೀ ಕೆ ಲಿಂಗಾಯತ, ಚನ್ನಬಸಮ್ಮ ಕಂಪ್ಲಿ ವಚನ ಗಾಯನ ಮಾಡಿದರು, ಕೊಪ್ಪಳ ಜಿಲ್ಲಾ ರಾ ಬ ದಳದ ಮಂಗಳೂರು , ಹಾಗೂ ಸೊಲ್ಲಾಪುರ, ಬೆಂಗಳೂರು, ಸಿಂಧನೂರು, ಹೊಸಪೇಟೆ ,ಬಳ್ಳಾರಿ, ಕೊಪ್ಪಳ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದು ವಿಶೇಷವಾಗಿತ್ತು , ಕಾರ್ಯಕ್ರಮ ದ ನಿರೂಪಣೆ , ಅಚ್ಚುಕಟ್ಟಾಗಿ, ಅಧ್ಯಕ್ಷರಾದ ಶರಣ ಸತೀಶ್ ಅವರು ನಡೆಸಿಕೊಟ್ಟರು, ಶರಣೆ ಜಡೇಶ್ವರಿ ಅಕ್ಕನವರು ಶರಣು ಸಮರ್ಪಣೆ ಮಾಡಿದರು. ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.