Breaking News

ಕರ್ನಾಟಕ ಸರ್ಕಾರ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಗುರು ಬಸವಣ್ಣನವರ ಜೀವನ ಚರಿತ್ರೆಬದಲಾವಣೆ, ಉಗ್ರ ಹೋರಾಟ-ಬಸವ ಪ್ರಭು ಸ್ವಾಮೀಜಿ

Karnataka Govt Ninth Class Social Science Text of Guru Basavanna’s Biography Change, Fierce Struggle-Basava Prabhu Swamiji

ವೀರಶೈವರ ಪತ್ರಕ್ಕೆ ಮಣಿದು ಕರ್ನಾಟಕ ಸರ್ಕಾರ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಗುರು ಬಸವಣ್ಣನವರ ಜೀವನ ಚರಿತ್ರೆ ಬದಲಾಯಿಸಿದ್ಧಾದರೆ ಉಗ್ರ ಹೋರಾಟ ಮಾಡಲಾಗುವುದು.

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನೂತನವಾಗಿ ಪರಿಷ್ಕರಿಸಿರುವ ಗುರು ಬಸವಣ್ಣನವರ ಜೀವನ ಚರಿತ್ರೆಯನ್ನು ವೀರಶೈವರ ಪತ್ರಕ್ಕೆ ಮಣಿಯದೆ ಯಥಾವತ್ತಾಗಿ ಮುಂದುವರಿಸಬೇಕೆಂದು ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿಯವರು ಆಗ್ರಹಿಸಿದ್ದಾರೆ.

ವೀರಶೈವರಿಂದ ಗುರು ಬಸವಣ್ಣನವರಿಗೆ ಆಗುತ್ತಿರುವ ಅವಮಾನಕ್ಕೆ ಕೈಕಟ್ಟಿ ಕೂಡದಿರಿ ಲಿಂಗಾಯತರು

ಹೌದು..! ಏನಾದರೂ ಒಂದು ತಕರಾರು ತೆಗೆದು ಗುರು ಬಸವಣ್ಣನವರ ಜೀವನ ಚರಿತ್ರೆಯನ್ನು ಅಪಂಭ್ರಂಶ ಮಾಡುವುದನ್ನು ಶತ ಶತಮಾನಗಳಿಂದ ಮಾಡಿಕೊಂಡು ಬಂದಿರುವ ವೀರಶೈವರು ಇತ್ತೀಚಿನವರೆಗೂ ಅದನ್ನು ಮುಂದುವರೆಸಲು ವಂಚು ಹಾಕಿದ್ದಾರೆ.

ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಕರ್ನಾಟಕ ಸರಕಾರ 9ನೇ ತರಗತಿಯ ಸಮಾಜ-ವಿಜ್ಞಾನ ಪುಸ್ತಕದಲ್ಲಿ ಪರಿಷ್ಕೃತ ಮಾಡಿ ಬಸವಣ್ಣನವರ ಜೀವನ ಚರಿತ್ರೆಯನ್ನು ಅರ್ಥಪೂರ್ಣ ಮತ್ತು ವೈಚಾರಿಕವಾಗಿ ಹಾಗೂ ಅವರ ಜೀವನಕ್ಕೆ ಸರಿಹೊಂದುವ ಹಾಗೆ ಜೀವನ ಚರಿತ್ರೆಯನ್ನು ಪ್ರಕಟಿಸಿರುವುದು ಬಸವ ಅಭಿಮಾನಿಗಳಿಗೆ ಅತ್ಯಂತ ಸಂತಸ ತಂದಿದೆ. ಸುಮಾರು ವರ್ಷಗಳಿಂದ ಬಸವಣ್ಣನವರ ಜೀವನ ಚರಿತ್ರೆಯನ್ನು ತಪ್ಪು ತಪ್ಪಾಗಿ ಮುದ್ರಿಸಿ, ಪ್ರಕಟಿಸಲಾಗುತ್ತಿತ್ತು ಇದರಿಂದ ವಿದ್ಯಾರ್ಥಿಗಳು ಬಸವಣ್ಣನವರ ಜೀವನ ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಇದೀಗ ಆ ಎಲ್ಲ ತಪ್ಪುಗಳನ್ನು ಸರಿಪಡಿಸಿ ಬಸವಣ್ಣನವರ ನೈಜ ಬದುಕಿನ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿರುವ ಘನ ಸರಕಾರಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು, ಇದನ್ನು ಸಹಿಸಿಕೊಳ್ಳದ ಕಣ್ಣು ಕಾಣದ ಗೂಭೆ ರವಿಯ ಕಂಡು ಬೈಯುವಂತೆ ಯಾವಾಗಲೂ ಬಸವಣ್ಣನವರನ್ನು ನಮ್ಮ ಭಕ್ತರೆಂದು ಕೊಟ್ಟಿ ಇತಿಹಾಸವನ್ನು ಸೃಷ್ಟಿ ಮಾಡಿ ಬಸವಣ್ಣನವರ ತತ್ವಗಳನ್ನು ಹೈಜಾಕ್ ಮಾಡುವ ಕುತಂತ್ರ ಬುದ್ಧಿಯನ್ನು ವೀರಶೈವವಾದಿಗಳು ಪದೇ ಪದೇ ಮಾಡುತ್ತಿರುವುದು ಸಹನೀಯವಲ್ಲ. ಮೊನ್ನೆ ಮೊನ್ನೆ ವೀರಶೈವವಾದಿಗಳ ಮಠಾಧೀಶ್ವರ ಗುಂಪೊಂದು ಸಭೆ ಮಾಡಿ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಬಸವಣ್ಣನವರ ಜೀವನ ಚರಿತ್ರೆಯಲ್ಲಿ ಎಂದಿನಿಂದಲೂ ಬಂದಿರುವ ವೀರಶೈವವನ್ನು ಪದವನ್ನು ಹಾಗೆ ಇಡಬೇಕು ಮತ್ತು ಬಸವಣ್ಣನವರಿಗೆ ವೀರಶೈವ ಗುರುಗಳಿಂದ ದೀಕ್ಷೆಯಾಗಿತ್ತು ಎಂಬುದನ್ನು ಮುದ್ರಿಸಬೇಕೆಂದು ಒತ್ತಾಯಿಸಿ ಒಂದು ವೇಳೆ ಅದಾಗದಿದ್ದರೆ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಲಿಂಗಾಯತ ಮಠಾಧೀಶರು ಬಸವ ಅಭಿಮಾನಿಗಳು ವೈಚಾರಿಕ ಚಿಂತನೆಗಾರರು ಎಚ್ಚೆತ್ತುಕೊಂಡು ಮುಖ್ಯಮಂತ್ರಿಯಾದ ಮಾನ್ಯ ಸಿದ್ದರಾಮಯ್ಯ ಸರ್ಕಾರದ ಬೆಂಬಲಕ್ಕೆ ನಿಂತು ವೀರಶೈವವಾದಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಬಸವಣ್ಣನವರ ಗುರುತ್ವವನ್ನು ಒಪ್ಪದ ಬಸವಣ್ಣನವರ ತತ್ವ ಸಂದೇಶವನ್ನು ಆಚರಣೆಗೆ ತರದ ಈ ಖೊಟ್ಟಿ ವೀರಶೈವವಾದಿಗಳು ಅದೇಕೆ ಬಸವಣ್ಣನವರಿಗೆ ಜ್ಯೋತಿಬಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ, ಹಿಂದೊಮ್ಮೆ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡಿದಾಗ ಲಿಂಗಾಯತ ಧರ್ಮ ಗುರುಬಸವ ಪ್ರಣಿತ ಧರ್ಮ ಎಂಬುದನ್ನು ಮಾನ್ಯ ನಾಗಮೋಹನ್ ದಾಸ್ ಅವರ ಸಮಿತಿ ಅತ್ಯಂತ ಮನೋಜ್ಞವಾಗಿ ಸರ್ಕಾರಕ್ಕೆ ವರದಿ ನೀಡಿತ್ತು ಇದನ್ನು ವಿರೋಧಿಸುವುದಲ್ಲದೆ ಲಿಂಗಾಯಿತ ಧರ್ಮಕ್ಕೆ ಮಾನ್ಯತೆ ಸಿಗುವುದನ್ನು ತಪ್ಪಿಸಿ ಐತಿಹಾಸಿಕ ದೋಷವೆಸಗಿದ್ದಾರೆ. ಇದಾದ ಕೆಲವೇ ದಿನದಲ್ಲಿ ಸ್ವತಂತ್ರ ಧರ್ಮದ ಭಾಗವಾಗಿ ಸಾಕಷ್ಟು ಸವಲತ್ತುಗಳನ್ನು ಪಡೆಯುವುದು ಬಿಟ್ಟು ತಾವು ಬೇಡ ಜಂಗಮರೆಂದು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕೆಂದು ಹೋರಾಟ ಮಾಡಿ ಲಿಂಗಾಯತ ವೀರಶೈವರಿಗೆ ಮುಜುಗರ ಉಂಟುಮಾಡಿ ನಡುನೀರಿನಲ್ಲಿ ಕೈ ಬಿಟ್ಟಿದ್ದು ಇತಿಹಾಸ ದಾಖಲಾಗಿದೆ. ಹೀಗೆ ಪಂಚಾಚಾರ್ಯ ವೀರಶೈವ ಗುರು ಪರಂಪರೆಯ ಮಠಾಧೀಶರು ಲಿಂಗಾಯತರ ಪರವಾಗಿ ಇಲ್ಲ ಮತ್ತು ಅವರು ಬಸವಣ್ಣನವರ ವಿರೋಧಿಗಳೆಂಬುದನ್ನು ಪದೇ ಪದೇ ಸಾಬೀತು ಮಾಡಿದ್ದಾರೆ ಆದ್ದರಿಂದ ಈಗಲಾದರೂ ತಾವು ಲಿಂಗಾಯಿತರಿದ್ದು ವೀರಶೈವರೆಂದು ಹೇಳಿಕೊಳ್ಳುವ ಗುರು ಪರಂಪರೆಯ ಬಾಲಂಗೋಸಿ ಖಾನೆ ಸುಮಾರಿ ಲಿಂಗಾಯತರು ಅವರನ್ನು ಬಿಟ್ಟು ಬಸವ ತತ್ವಕ್ಕೆ ಮರಳಿ ಬಂದು ಬಸವಣ್ಣನವರಿಗೆ ಆಗುವ ಅವಮಾನ ಮತ್ತು ತಮ್ಮ ಧರ್ಮಕ್ಕೆ ಆಗುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಕಾಲ ಒದಗಿಬಂದಿದೆ ಆದ್ದರಿಂದ ಒಂದು ವೇಳೆ ಅವರೇನಾದರೂ ಹೋರಾಟಕ್ಕೆ ಹೋಗುವ ದಾದರೆ ನಾವು ಅವರ ವಿರುದ್ಧ ಉಗ್ರವಾಗಿ ಹೋರಾಟ ಮಾಡಿ ಜಾತಿಗೆ ಸೀಮಿತವಾಗುವ ಗುರು ಪರಂಪರೆಯ ಅಥವಾ ವೀರಶೈವ ಜಂಗಮ ಮಠಾಧೀಶರನ್ನು ಲಿಂಗಾಯತರ ಮಠಗಳಿಂದ ಹೊರದೊಬ್ಬಬೇಕು ಬದಲಿಗೆ ಲಿಂಗಾಯತ ತತ್ವವನ್ನು ಬೋಧಿಸುವ ಬಸವ ಪರಂಪರೆಯ ಲಿಂಗಾಯತ ಜಂಗಮರನ್ನು ಆ ಮಠಕ್ಕೆ ನೇಮಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಬೇಕು.

ಇದೇ ರೀತಿ ಮುಂದುವರೆದರೆ ಈ ಪಂಚಾಚಾರ್ಯ ಗುರು ವರ್ಗದವರಿಂದ ಲಿಂಗಾಯತ ಧರ್ಮವು ನಶಿಸಿಹೋಗುವ ಹಂತಕ್ಕೆ ಬಂದು ತಲುಪುತ್ತದೆ. ದಯವಿಟ್ಟು ವೀರಶೈವರಿಂದ ಪದೇಪದೇ ಬಸವಣ್ಣನವರಿಗೆ ಆಗುವ ಅವಮಾನವನ್ನು ಸಹಿಸಿಕೊಳ್ಳದೆ, ರಾಷ್ಟ್ರೀಯ ಬಸವದಳ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ, ಬಸವ ಕೇಂದ್ರ, ಬಸವ ಬಳಗ, ಅಕ್ಕನ ಬಳಗ, ಬಸವ ಧರ್ಮಪೀಠ, ಬಸವ ತತ್ವ ಮಠಾಧೀಶರ ವೇದಿಕೆ ಕೇವಲ ಬಸವಣ್ಣ ಬಸವಣ್ಣ ಎಂದು ಜಪಿಸುತ್ತಾ ಕೂಡದೆ, ಅವರ ತತ್ವಕ್ಕೆ ಅನ್ಯಾಯವಾದಗ ಹೋರಾಟ ಮಾಡಿ ಗುರು ಬಸವಣ್ಣನವರಿಗೆ ನ್ಯಾಯ ದೊರಕಿಸಿಕೊಳ್ಳಬೇಕಾಗಿದೆ.

ನಮ್ಮ ಗುರುಗಳಾದ ಪೂಜ್ಯಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿತಾಯಿಯವರು ಈಗ ಇದ್ದಿದ್ದರೆ ತಕ್ಷಣವೇ ಪತ್ರಿಕೆ ಹೇಳಿಕೆ ಅಥವಾ ಮಾಧ್ಯಮದ ಹೇಳಿಕೆ ನೀಡಿ ಹೋರಾಟಕ್ಕೆ ಕರೆ ನೀಡುತ್ತಿದ್ದರು ಆದರೆ ಹುಲಿ ಹೊಟ್ಟೆಯಲ್ಲಿ ಇಲಿ ಹುಟ್ಟಿದಂತಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ ನಿಜಕ್ಕೂ ನಾಚಿಕೆಗೇಡಿತನ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವೀರಶೈವರ ಪತ್ರಕ್ಕೆ ಕಿವಿಗೊಡದೆ ತಾವು ಪರಿಷ್ಕರಿಸಲು ಸೂಚಿಸಿದ ಸಮಿತಿಯು ಅತ್ಯಂತ ನೈಜತೆಯಿಂದ ಬಸವಣ್ಣನವರ ಜೀವನ ಚರಿತ್ರೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಈಗಿರುವ ಪಠ್ಯವನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಆಗಹಿಸುತ್ತೇವೆ.

ಜೈ ಬಸವೇಶ ಜೈ ಲಿಂಗಾಯತ.

ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.

About Mallikarjun

Check Also

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

ಗಂಗಾವತಿ: ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಟನೆಯು ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಜೂನ್-೨೮ ರಿಂದ ಜುಲೈ-೦೩ ರವರೆಗೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.