Breaking News

ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯಲ್ಲಿ ಶೀಘ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳು ಪ್ರಾರಂಭ – ಐಐಎಚ್ ಎಂಆರ್ ಅಧ್ಯಕ್ಷ ಡಾ.ಎಸ್.ಡಿ.ಗುಪ್ತ

Indian Institute of Health Management Research to soon start courses in Artificial Intelligence and Data Science: Dr. S.D. Gupta

ಜಾಹೀರಾತು

ಬೆಂಗಳೂರು, ಜೂ,29; ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯಲ್ಲಿ ಶೀಘ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳನ್ನು ಪ್ರಾರಂಭಿಸುವುದಾಗಿ ಐಐಎಚ್ ಎಂಆರ್ ಸೊಸೈಟಿಯ ಅಧ್ಯಕ್ಷ ಡಾ.ಎಸ್.ಡಿ.ಗುಪ್ತ ಹೇಳಿದ್ದಾರೆ.
ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ – ಐಐಎಚ್ಎಂಆರ್ ನ 2024-2026 ಬ್ಯಾಚ್ನ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗಾವಕಾಶಗಳ ಬಗ್ಗೆ ಚಿಂತಿಸದೆ ಕಲಿಕೆಯತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಆರೋಗ್ಯ ರಕ್ಷಣೆಯಲ್ಲಿ ಹೆಚ್ಚುತ್ತಿರುವ ಮಾಹಿತಿ ತಂತ್ರಜ್ಞಾನ ಆರೋಗ್ಯ ಕ್ಷೇತ್ರವನ್ನು ಬದಲಿಸಿದೆ. ಬೆಂಗಳೂರಿನ ಐಐಎಚ್‌ಎಂಆರ್ ನಲ್ಲಿ ಎಐಸಿಟಿಇ-ಅನುಮೋದಿತ ಪಿಜಿಡಿಎಂ ಕಾರ್ಯಕ್ರಮದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಐಐಎಚ್ಎಂಆರ್ ನಿರ್ದೇಶಕರಾದ ಡಾ.ಉಷಾ ಮಂಜುನಾಥ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನ ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದ್ದು, ಆಧುನಿಕ ಸವಾಲಯಗಳಿಗೆ ಸೂಕ್ತ ರೀತಿಯಲ್ಲಿ ವಿದ್ಯಾರ್ಥಿಗಳು ಸಜ್ಜಾಗಬೇಕು. ಆಧುನಿಕ ಜಗತ್ತಿಗೆ ಅನುಗುಣವಾಗಿ ಆಸ್ಪತ್ರೆ ನಿರ್ವಹಣೆ, ಆರೋಗ್ಯ ನಿರ್ವಹಣೆ, ಆರೋಗ್ಯ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ನಿರ್ವಹಣೆ ಮತ್ತು ಔಷಧೀಯ ನಿರ್ವಹಣೆ ಕೋರ್ಸ್ ಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮನೀಶ್ ತ್ರಿವೇದಿ ಮಾತನಾಡಿ, ಆರೋಗ್ಯ ಉದ್ಯಮದಲ್ಲಿ ದತ್ತಾಂಶ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ದತ್ತಾಂಶವನ್ನು ವಿಶ್ಲೇಷಿಸಲು ಮತ್ತು ಅರ್ಥೈಸಲು ಕೃತಕ ಬುದ್ಧಿಮತ್ತೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದರು.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಹ ಪ್ರಾಧ್ಯಾಪಕ ಡಾ. ಅಲೆನ್ ಪಿ. ಉಗರಗೋಳ್ ಮಾತನಾಡಿ, ವಿದ್ಯಾರ್ಥಿಗಳು ಪರಸ್ಪರ ಬೆಳವಣಿಗೆ ಮತ್ತು ನಿರಂತರ ಸುಧಾರಣೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕರಾದ ಡಾ. ಅಮಿತಾ ಮುಖೋಪಾಧ್ಯಾಯ, ಸಹ ಪ್ರಾಧ್ಯಾಪಕ ಡಾ. ಜ್ಞಾನ್ ಚಂದ್ರ ಕಶ್ಯಪ್ ಮತ್ತಿತರರು ಉಪಸ್ಥಿತದ್ದರು.

About Mallikarjun

Check Also

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara” ಕರ್ನಾಟಕ ಸರ್ಕಾರಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.