Guarantee Scheme Implementation Taluk Committee Office Inauguration

ಗಂಗಾವತಿ : ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಗ್ಯಾರೆಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿಯ ಕಚೇರಿಯನ್ನು ಸೋಮವಾರದಂದು ಗ್ಯಾರೆಂಟಿ ಯೋಜನೆಯ ಪದಾಧಿಕಾರ ಜಿಲ್ಲಾ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಉದ್ಘಾಟಿಸಿ ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳು 97% ರಷ್ಟು ಫಲಾನುಭವಿಗಳಿಗೆ ದೊರೆಯುತ್ತಿದೆ, ರಾಜ್ಯದಲ್ಲಿ ಕೊಪ್ಪಳ ಐದನೇ ಸ್ಥಾನದಲ್ಲಿ ಇದೆ, ಒಂದನೇ ಸ್ಥಾನಕ್ಕೆ ಬರಬೇಕೆಂಬುವುದೇ ನಮ್ಮ ಗುರಿ ಇದಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವೆಂಕಟೇಶ್ ಬಾಬು, ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್ ಬಿ ಖಾದ್ರಿ, ತಾಲೂಕು ಸಮಿತಿ ಸದಸ್ಯರಾದ ಸನ್ನಿಕ್ ಪಾಷಾ, ಮುಸ್ತಕ್, ರಾಮು ಕಿರಿಕಿರಿ, ಮಂಜುನಾಥ, ವೀರೇಶ್, ಓಂಕಾರಪ್ಪ, ಪ್ರಜ್ವಲ್, ದಾವಲ್, ಮುತ್ತುರಾಜ, ಉಪಸ್ಥಿತರಿದ್ದರು
Kalyanasiri Kannada News Live 24×7 | News Karnataka
