Breaking News

ಗಂಗಾವತಿ ಪ್ರಗತಿಪರ ನಾಗರಿಕ ವೇದಿಕೆಯ ಪೂರ್ವಭಾವಿ ಸಭೆನಗರದ ಪ್ರಮುಖ ರಸ್ತೆಗಳ ಸುಧಾರಣೆ ಬಗ್ಗೆ ಚರ್ಚೆ

A preliminary meeting of the Gangavati Progressive Civic Forum discussed the improvement of major roads in the city

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಗಂಗಾವತಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸದೇ ಇರುವುದನ್ನು ವಿರೋಧಿಸಿ, ಗಂಗಾವತಿ ಪ್ರಗತಿಪರ ನಾಗರಿಕ ವೇದಿಕೆ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ದಿನಾಂಕ: ೦೩.೦೭.೨೦೨೪ ಬುಧವಾರ ಬೆಳಿಗ್ಗೆ ೧೧:೦೦ ಗಂಟೆಗೆ ಪೂರ್ವಭಾವಿಯಾಗಿ ಸಭೆಯನ್ನು ನಗರದ ರಾಯಚೂರು ರಸ್ತೆಯಲ್ಲಿರುವ ಆಟೋನಗರದ ಪ್ಲಾಟ್ ನಂ: ೧೧೧, ಕ್ರಾಂತಿಕೇAದ್ರ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ವೇದಿಕೆಯ ಪ್ರಧಾನ ಸಂಚಾಲಕರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ಗಂಗಾವತಿಯ ರಸ್ತೆಗಳು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯು ಗಂಗಾವತಿ ನಗರದ ಸಿ.ಹೆಚ್. ನಾರಿನಾಳರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜೋಗದ ನಾರಾಯಣಪ್ಪ ನಾಯಕ, ಕೆ. ಕಾಳಪ್ಪ, ಶಂಕರಗೌಡ ಹೊಸಳ್ಳಿ ಪಾಲ್ಗೊಳ್ಳಲಿದ್ದಾರೆ. ಕಾರಣ ಈ ಸಭೆಯಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಅಂಗ ಸಂಸ್ಥೆಗಳು ಹಾಗೂ ಸಿ.ಪಿ.ಎಂ ಪಕ್ಷದ ಅಂಗಸAಸ್ಥೆಗಳು, ಡಿ.ಎಸ್.ಎಸ್ ಸಂಘಟನೆಯ ಮುಖಂಡರು, ಕಾರ್ಮಿಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *