Breaking News

ಎನ್.ಆರ್.ಕಾಲೋನಿಯ ಆಚಾರ್ಯ ಪಾಠಶಾಲಾದಲ್ಲಿ ವೈಭವದಿಂದ ಜರುಗಿದ ಸಮ್ಮಿಲನ ಕಾರ್ಯಕ್ರಮ


ಬೆಂಗಳೂರು, ಜೂ, 30; ಎಪಿಎಸ್ ಶೈಕ್ಷಣಿಕ ಟ್ರಸ್ಟ್ ನ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಯ ಉತ್ಸಾಹಭರಿತ ಸಮ್ಮಿಲನ ಆಯೋಜಿಸಲಾಗಿತ್ತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಎ.ವಿಷ್ಣು ಭರತ್ ಆಲಂಪಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ವಾರಾಂತ್ಯದಲ್ಲಿ ಶಿಕ್ಷಣ ಕೇಂದ್ರ ಉತ್ಸಾಹದ ಕೇಂದ್ರವಾಗಿ ಮಾರ್ಪಟ್ಟಿತ್ತು. ಈ ಕಾರ್ನೀವಲ್ ಕಿರಿಯರಿಂದ ಹಿರಿಯ ನಾಗರಿಕವರೆಗೆ ಎಲ್ಲರಿಗೂ ಮೋಜಿನ ವೇದಿಕೆಯಾಗಿತ್ತು. ಸ್ವಚ್ಛ ಮತ್ತು ಸುಂದರ ಮಳಿಗೆಗಳಲ್ಲಿ ರೋಮಾಂಚಕ ಆಟಗಳು, ಸಮ್ಮೋಹನಗೊಳಿಸುವ ಸಂಗೀತ, ಆಕರ್ಷಕ ನೃತ್ಯ ಪ್ರದರ್ಶನಗಳು, ಮನಸೂರೆಗೊಳ್ಳುವ ನಾಟಕಗಳು ಮತ್ತು ರುಚಿಕರವಾದ ತಿಂಡಿ – ತಿನಿಸುಗಳು ಗಮನ ಸೆಳೆದವು. ಅತ್ಯಾಕರ್ಷಕ ಅದೃಷ್ಟದ ಲಾಟರಿ ಡ್ರಾಗಳಲ್ಲಿ ಬಹುಮಾನ ಗೆದ್ದು ಬೀಗಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಂದ ಉತ್ಸಾಹದ ಸಮ್ಮಿಲನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೃಜನಶೀಲತೆ ಮತ್ತು ಸಮುದಾಯ ಮನೋಭಾವದ ಆಚರಣೆ ಜೊತೆಗೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *