ತಿಪಟೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳು ಮಹಿಳೆಯರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜುಲೈ 01ರಂದು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸಂಘಟನೆ ವತಿಯಿಂದ ಪ್ರತಿಭಟನ ಧರಣಿ ಹಮ್ಮಿಕೊಳ್ಳಲಾಗಿದೆ,
ನಗರದ ತಿಪಟೂರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಘೋಷ್ಠಿ ಉದೇಶಿ ಮಾತನಾಡಿದ ಡಿ.ಎಸ್ ಎಸ್ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ತುಮಕೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳು ದಿನನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಗಳು ಕೆಲಸ ನಿರ್ವಹಿಸುತ್ತಿದ್ದು ಮಹಿಳೆಯರಿಗೆ ಗುಂಪು ಸಾಲ ನೀಡುವ ಫೈನಾನ್ಸ್ ಗಳು ಸಾಲವಸೂಲಿಗಾಗಿ ಹುಡುಗರನ್ನ ನೇಮಿಸಿಕೊಂಡು ಹಣವಸೂಲಿಗೆ , ಗುಂಡಾಗಿರಿ ಮಾಡುವ ಜೊತೆಗೆ, ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ.
ಮೈಕ್ರೋಫೈನಾನ್ಸ್ ಕಿರುಕುಳದಿಂದ ತಿಪಟೂರು ತಾಲ್ಲೋಕಿನ ಅರಳಗುಪ್ಪೆ.ಮದ್ಲೆಹಳ್ಳಿ.ಭೈರಾಪುರ. ತಿಪಟೂರು ಗಾಂಧಿನಗರ.ಹುಳಿಯಾರು ಹೋಬಳಿ ಮದರ್ ಸಾಬರ ಪಾಳ್ಯ. ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಾನಮರ್ಯಾದೆಗೆ ಅಂಜಿ .ಮಹಿಳೆಯರು ಅತ್ಮಹತ್ಯೆಗೆ ಶರಣಾಗಿದ್ದಾರೆ.
ಅನೇಕ ಕುಟುಂಬಗಳು ಫೈನಾನ್ಸ್ ಕಿರುಕುಳದಿಂದ ಊರುಗಳನ್ನೆ ತೊರೆದಿದ್ದಾರೆ.
ಸರ್ಕಾರ ಕೂಡಲೇ ಮೈಕ್ರೋಫೈನಾನ್ಸ್ ಲೈಸೆನ್ಸ್ ರದ್ದುಗೊಳಿಸಬೇಕು
ಮೈಕ್ರೋಫೈನಾನ್ಸ್ ಕಿರುಕುಳದಿಂದ ಮೃತಪಟ್ಟು ಕುಟುಂಬಗಳಿಗೆ ಕನಿಷ್ಠ 25ಲಕ್ಷ ಪರಿಹಾರ ಘೋಷಣೆ ಮಾಡಬೇಕು
ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋಫೈನಾನ್ಸ್ ಗಳು ನೀಡಿರುವ ಸಾಲ ಮನ್ನಾಮಾಡಬೇಕು
ಎಂದು ಒತ್ತಾಯಿಸಿ ಜುಲೈ 01ನೇ ತಾರೀಖು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು
ಪ್ರತಿಭಟನೆ ಅಂಗವಾಗಿ ತಿಪಟೂರು ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಿ.ಹೆಚ್ ರಸ್ತೆ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ
ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು
ನಂತರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ತಾಲ್ಲೋಕು ಸಂಚಾಲಯ ಮೋಹನ್, ಜಿಲ್ಲಾಪೌರಕಾರ್ಮಿಕ ಸಂಘಟನೆ ಸಂಚಾಲಕ ರಘು ಬಿಳಿಗೆರೆ,ಸಂಘಟನಾ ಸಂಚಾಲಕ ಗಡಬನಹಳ್ಳಿ ಶೇಖರಪ್ಪ,ಸುರೇಶ್, ಶಿವಪುರ ರಾಮೇಶ್,ಮಹಿಳಾ ಘಟಕದ ಸಂಚಾಲಕರಾದ ಮಂಜುಳ ನಂದಿನಿ,ಮುಖಂಡರಾದ ಹಾಲ್ಕುರಿಕೆ ಜಯಕುಮಾರ್, ರಮೇಶ್ ಮುಂತಾದವರು ಉಪಸ್ಥಿತರಿದರು.
ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ದ ಜುಲೈ 01 ರಂದು ಡಿ.ಎಸ್ ಎಸ್ಪ್ರತಿಭಟನೆ
ಜಾಹೀರಾತು