70/5,000 Characters
ESIC Hospital celebrates National Doctor’s Day

ಬೆಂಗಳೂರು, ಜೂ,29; ರಾಜಾಜಿನಗರದ ಇಎಸ್ಐಸಿ ಮಾದರಿ ಆಸ್ಪತ್ರೆಯ ಅಕಾಡೆಮಿಕ್ ಬ್ಲಾಕ್ ನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ಮಾನವನ ಅಮೂಲ್ಯ ಅಂಗಾಂಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಜನ ಸಾಮಾನ್ಯರು, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅಂಗಾಂಗಳು ಹೇಗೆ ಕಾರ್ಯನಿರ್ವಹಿಸುತ್ತವೆ. ಅವುಗಳ ಮಹತ್ವ, ಅಂಗಾಂಗಗಳ ರಚನೆ ಕುರಿತಂತೆ ಅರಿವು ಮೂಡಿಸಲಾಯಿತು.
ವಿಶೇಷವಾಗಿ ಮೆದುಳು, ಹೃದಯ, ಶ್ವಾಸಕೋಶ, ಕಿಡ್ನಿ ತಾಯಿಯ ಗರ್ಭದಲ್ಲಿರುವ ಬ್ರೂಣ ಸೇರಿದಂತೆ ಪ್ರತಿಯೊಂದು ಅಂಗಾಂಗಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಇಎಸ್ಐಸಿ ಡೀನ್ ಡಾ.ಸಂಧ್ಯಾ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಎಸ್ ಕೇದಾರ್, ಇಎಸ್ಐಸಿ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ.ಗಿರೀಶ್, ಚರ್ಮ ರೋಗ ತಜ್ಞರಾದ ಡಾ ವಿನಯ್, ಡಾ ರವಿ, ಡಾ ಸುಚಿತ್ರ, ಡಾ ವಿಜಯ ಕುಮಾರಿ, ಡಾ ಪ್ರತಿಭಾ, ಡಾ ಸೀಮಾ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು ಸಿಬ್ಬಂದಿ ಭಾಗವಹಿಸಿದ್ದರು.