ಗಂಗಾವತಿ,27: ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾಗಿದ್ದು, ಮಾದಕ ವಸ್ತುಗಳ ಸೇವನೆ ಸೇರಿದಂತೆ ವಿವಿಧ ದುಶ್ಚಟಗಳಿಗೆ ದಾಸ ರಾಗಿ ಅದನ್ನು ಹಾಳು ಮಾಡಿ ಕೊಳ್ಳಬಾರದು ಎಂದು ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆ ದಂತ ವೈದ್ಯರಾದ ಡಾ.ವಿಜಯಕುಮಾರ್ ಹೇಳಿದರು.
ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗಂಗಾವತಿ ಉಪವಿಭಾಗ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚ ರಣೆಯಲ್ಲಿ ಅವರು ಮಾತನಾ ಡಿದರು.ಮಾದಕ ವಸ್ತುಗಳ ಸೇವನೆಯೂ ಅನೇಕ ಅಪರಾಧಕೃತ್ಯಕ್ಕೆ ದಾರಿಮಾಡಿ ಕೊಡುತ್ತದೆ. ಮಾದಕ ವ್ಯಸನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಮಾದಕ ವ್ಯಸನಕ್ಕೆ ದಾಸ ರಾಗುತ್ತಿರುವ ಯುವಜನತೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಬೇರೆಯವರಿಗೂ ಜಾಗೃತಿ ಮೂಡಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳ ಶ್ರಮಿಸಬೇಕು ಎಂದರು,
ಮಾದಕ ಕವಸ್ತುಗಳ ಸೇವನೆ ಆರೋ ಗ್ಯಕ್ಕೆ ಹಾನಿಕಾರಕ ಹಾಗಾಗಿ ವಿದ್ಯಾರ್ಥಿಗಳು ಇದರಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮನೋರೋಗ ತಜ್ಞ ಡಾ.ವಾದಿರಾಜ್,ಆರೋಗ್ಯ ಸಿಬ್ಬಂದಿಗಳಾದ ಅಕ್ಬರ್, ಯಮನೂರಪ್ಪ ಬಜೇಂತ್ರಿ,ಪ್ರಾಂಶುಪಾಲರಾದ ಜಗದೇವಿ ಕಲಶೆಟ್ಟಿ, ಡಾ.ರವಿಕಿರಣ,ಸೇರಿದಂತೆ ಇತರರು ಇದ್ದರು