Breaking News

ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ – ಕೃಷಿ ಸಖಿಯರು ಕಲಿತರೆ ರೈತರಯೋಜನೆಯೊಂದು ಮನೆ ಬಾಗಿಲಿಗೆ ತಲುಪಿದಂತೆ


ಗಂಗಾವತಿ:ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಇವರ ಸಹಯೋಗದೊಂದಿಗೆ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಂಚಾಯತಿಯಿಗೆ ಒಬ್ಬರಂತೆ ಇರುವ ಕೃಷಿ ಸಖಿಯರಿಗೆ ಐದು ದಿನಗಳ ಕಾಲ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೆ.ವಿ.ಕೆ ವಿಜ್ಞಾನಾಗಳಾದ ಡಾ.ನಾರಪ್ಪ, ಕನಕಗಿರಿ ತಾಲೂಕಿನ ವಲಯ ಮೇಲ್ವಿಚಾರಕದ ಶ್ರೀಮತಿ ರೇಣುಕಾ, ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ್ ರವರು ಉಪಸ್ಥಿತರಿದ್ದರು. *ನೈಸರ್ಗಿಕ ಕೃಷಿ ತರಬೇತಿಯ ಅಣಕು* ರಾಸಯನಿಕ‌ ಗೊಬ್ಬರಗಳು ಮತ್ತು ಕ್ರಿಮಿ ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ವಾತಾವರಣವನ್ನು ಕಲುಷಿತಗೂಳಿಸುತ್ತದೆ, ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಮುಂದಿನ ಪೀಳಿಗೆಗೆ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಲಕ್ಷಣಗಳು ಕಡಿಮೆಯಾಗಿ ಸವಳು ಭೂಮಿ ಯಾಗುತ್ತದೆ.
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ನೈಸರ್ಗಿಕ ಕೃಷಿಯಲ್ಲಿನ ಕೃಷಿ ತ್ಯಾಜ್ಯಗಳಿಂದ ಎರೆಹುಳು ಗೊಬ್ಬರ ತಯಾರಿಕೆ, ಜೀವಾಮೃತ, ಘನ ಜೀವಾಮೃತ,ಬೀಜಾಮೃತ ಬಳಕೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಒದಗಿಸುವ ಸೂಕ್ಷಣುಜೀವಿಗಳನ್ನು ಹೆಚ್ಚಿಸುವುದರಿಂದ ಸಸ್ಯಗಳಲ್ಲಿ ಬೆಳವಣಿಗೆಯ ಪ್ರಚೋದಕಗಳಾಗಿ ಮತ್ತು ಗುಣಮಟ್ಟದ ವಿಷಮುಕ್ತ ಆಹಾರವನ್ನು ಉತ್ಪಾದಿಸಬಹುದು.

*ಹೇಳಿಕೆ* -ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ಕಡಿಮೆ ಅವಧಿಯಲ್ಲಾ ಅಧಿಕ ಲಾಭಗಳನ್ನು ಪಡೆಯಬಹುದು. ಕುಲಕಸುಬುಗಳಾಗಿ ಮಲ್ಲಿಗೆ ಹೂವಿನ ತೋಟದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು. ತೋಟಗಾರಿಕೆ ಇಲಾಖೆಯ‌ ಯೋಜನೆಗಳನ್ನು ರೈತರಿಗೆ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯವಾಗಿದೆ. ಆಧುನಿಕ ತಂತ್ರಜ್ಞಾನ, ಕೃಷಿ ವೆಚ್ಚ, ಕೃಷಿ ಮಾರುಕಟ್ಟೆ ಇವುಗಳ ಬಗ್ಗೆ ಅರಿವು ಮೂಡಿಸುವುದು. – *ಡಾ.ಎ.ಆರ್. ಕುರುಬರ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು*
*ಹೇಳಿಕೆ* -ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್, ನೈಸರ್ಗಿಕ ಕೃಷಿ ಅಭಿಯಾನದಡಿ ತರಬೇತಿ ಮುಗಿಸಿದ ಕೃಷಿ ಸಖಿಯರನ್ನು  ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಆಯ್ಕೆ ಮಾಡಿಕೊಳ್ಳಲಾಗುವುದು, ಅತಿ ಹೆಚ್ಚು ಕೃಷಿ ಉತ್ಪಾದನೆಯನ್ನು ಹಳ್ಳಿಯಲ್ಲಿ ಇರುವುದರಿಂದ ನೈಸರ್ಗಿಕ ಕೃಷಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಗ್ರಾಮೀಣ ಭಾಗದ ಕೃಷಿ ಸಖಿಯರ ಕಾರ್ಯ ಮಹತ್ತರವಾದದ್ದು.- *ಡಾ.ರಾಘವೇಂದ್ರ ಎಲಿಗಾರ್, ಹಿರಿಯ ಮತ್ತು ಮುಖ್ಯಸ್ಥರು, ಕೆ.ವಿ.ಕೆ, ಗಂಗಾವತಿ*
ಕೊಪ್ಪಳ ಜಿಲ್ಲೆಯಲ್ಲಿ 153 ಪಂಚಾಯಿತಿ ಗಳಲ್ಲಿ 153 ಕೃಷಿ ಸಖಿಯರನ್ನು ನೀಯೋಜಿಸಲಾಗಿದ್ದು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕೃಷಿ ಸಖಿಯರಿಗೆ 1 ನೇ ಹಂತದ ಪರಿಸರ ಕೃಷಿ ವಿಧಾನಗಳ ಕುರಿತು ತರಬೇತಿ ಮುಗಿದಿದೆ ಮತ್ತು ಇಂದು ನೈಸರ್ಗಿಕ ಕೃಷಿ ಪದ್ಧತಿಯ ತರಬೇತಿ ಮುಗಿದಿದೆ. ಮುಂದಿನ ದಿನಗಳಲ್ಲಿ ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಇಲಾಖೆ ಪೂರ್ಣಪ್ರಮಾಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಾಕಿ ಉಳಿದ ಕೃಷಿ ಸಖಿಯರಿಗೆ ಶೀಘ್ರದಲ್ಲಿ 2 ನೇ ಹಂತದ ತರಬೇತಿ ನಡೆಯಲಿದೆ.
ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಮೂಲಕ ಡೇ ಎನ್ಆರ್ ಎಲ್ ಎಮ್ ವಿಧೇಯಕ ಸ್ವಸಹಾಯ ಗುಂಪಿನ ಮಹಿಳಾ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಘನ ಉದ್ದೇಶ ಹೊಂದಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಅಗತ್ಯತೆಗೆ ಅನುಸಾರವಾಗಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ (ಜಿಪಿಎಲ್ಎಫ್) ತಲಾ ಒಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ನಿಯೋಜನೆಗೂಂಡ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) ಅವರಿಗೆ ಒಂದು ತಿಂಗಳಲ್ಲಿ 15 ದಿನಗಳ ಕಾಲ ಸಲ್ಲಿಸುವ ಕೃಷಿ ಇಲಾಖೆಯ ವಿವಿಧ ವಿಸ್ತರಣಾ ಸೇವೆಗಳಿಗೆ ಆಯಾ ಸರ್ಕಾರದ ಅನುದಾನದಿಂದ ಬಿಡುಗಡೆ ಆದ ಗೌರವಧನ ಜಿಪಿಎಲ್ಎಫ್ ಮೂಲಕ ಒಂದು ದಿನಕ್ಕೆ ರೂ.250/- ರೂಗಳಂತೆ ತಿಂಗಳಿಗೆ ರೂ.3750/- ಗೌರವಧನ ಪಾವತಿಸಲಾಗುತ್ತದೆ‌.
ಕೃಷಿ ಸಖಿಯರು ತಮ್ಮ ಗ್ರಾಮ ಪಂಚಾಯಿತಿ ಒಳಪಡುವ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಅಧಿಕಾರಿಗಳು/ಸಹಾಯಕ ಕೃಷಿ ಅಧಿಕಾರಿಗಳೂಂದಿಗೆ ನಿರಂತರ ಸಂಪರ್ಕದಲಿದ್ದು ಪಿ.ಎಂ.ಕಿಸಾನ್,  ಬೆಳೆ ಸಮಿಕ್ಷೇ , ಹಂಗಾಮುವಾರು ವಿವಿಧ ಕೃಷಿ ಬೆಳೆಯ ಬಿತ್ತನೆ ಬೀಜ ಕೊಡಿಸುವುದು, ರೈತರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದು, ಸಾವಯವ ಕೃಷಿ ಪದ್ಧತಿ, ಮಣ್ಣಿನ ಆರೋಗ್ಯ ಮಹತ್ವ ಮತ್ತು ನಿರ್ವಹಣೆ, ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳು / ತರಬೇತಿಗಳಲ್ಲಿ ರೈತರು ಭಾಗವಹಿಸಲು ಮಾಹಿತಿ ನೀಡುವುದು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ತಾಂತ್ರಿಕ ಮತ್ತು ವಿಸ್ತರಣಾ ಸೇವೆ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
*ಕೃಷಿ ಸಖಿ ಹೇಳಿಕೆ* – ನಾನು ಕೃಷಿ ಸಖಿಯಾಗಿ ಕೆಲಸ ಮಾಡಲು ಇಚ್ಛಿಸಿದ್ದೆನೆ ಇದುವರೆಗೂ 1ನೇ ಹಂತದ ತರಬೇತಿ ಪಡೆದಿದ್ದು ಇನ್ನು ಹೆಚ್ಚುವರಿ ತಾಂತ್ರಿಕ ತರಬೇತಿಯನ್ನು ಪಡೆಯಲು ಆಸಕ್ತಿ ಹೊಂದಿದ್ದೆನೆ. ಬೆಳೆ ಸಮಿಕ್ಷೇ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಬೀಜೋಪಚಾರ, ರೈತ ಯೋಜನೆಯನ್ನು ಸಹಾಯಧನದಲ್ಲಿ ಕೊಡಿಸುವುದು, ಜೈವಿಕ ಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ತಿಳಿದು ಕೊಂಡಿದ್ದೆನೆ. ಸಮಗ್ರ ಕೃಷಿ ಪದ್ಧತಿ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಇಲಾಖೆ ಮತ್ತು ರೈತರ ನಡುವೆ ಕೆಲಸ ಮಾಡಲು ಖುಷಿಯಾಗುತ್ತದೆ.- *ಸುಜಾತಾ , ಕೃಷಿ ಸಖಿ,ಬೂದುಗುಂಪಾ*

ಜಾಹೀರಾತು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.