ಗಂಗಾವತಿ ರಸ್ತೆಗಳೋ ಅಥವಾ ಬಂಡಿ ಜಾಡುಗಳೋ,,,,
ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ಚುನಾವಣೆಗೂ ಮುನ್ನ ಅಧಿಕಾರ ಗದ್ದುಗೆ ಏರುವ ಆತುರದಲ್ಲಿ ಜನರಿಗೆ ಕೊಟ್ಟ ಭರವಸೆಯ ಮಾತನ್ನೇ ಮರೆತು, ಅಧಿಕಾರ ಚುಕ್ಕಾಣಿ ಹಿಡಿದ ಶಾಸಕರು ಅಧಿಕಾರ ನಡೆಸುತ್ತಾ ಒಂದು ವರ್ಷ ಗತಿಸಿದರು ಅಭಿವೃದ್ಧಿ ಶೂನ್ಯ ಎನ್ನತ್ತಾರೆ ಇಲ್ಲಿನ ಜನ.
ಹೌದು,,ಇದು ರಾಜ್ಯದಲ್ಲಿ ಭತ್ತದ ನಾಡು ಎಂದೇ ಪ್ರಸಿದ್ದಿ ಪಡೆದ ಗಂಗಾವತಿ ಸೇರಿದಂತೆ, ಕೇಂದ್ರ ಸ್ಥಾನಗಳಿಗೆ ಭೇಟಿ ನೀಡುವ ಹಳ್ಳಿಯ ಜನರ ಹಾಗೂ ರಸ್ತೆಗಳ ಕಥೆ ಮತ್ತು ವ್ಯಥೆ,,
ಗಂಗಾವತಿ ರಸ್ತೆಗಳೋ ಅಥವಾ ಬಂಡಿ ಜಾಡುಗಳೋ,,,,
ಅನುದಾನದ ಕೊರತೆಯಿಂದ ನಗರದ ಒಳ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಒಂದೊಂದು ಕಥೆಗಳನ್ನು ಹೇಳುತ್ತಾ ದುರಸ್ಥಿ ಕಾಣದೇ ಪ್ರತಿ ದಿನ ನರಕ ಯಾತನೆ ಅನುಭವಿಸುತ್ತಿವೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಾದ ವಡ್ರಟ್ಟಿ, ಗಡ್ಡಿ, ಸಂಗಾಪೂರ, ಚಿಕ್ಕ ಬೆಣಕಲ್, ಜಂಗಮರ ಕಲ್ಗುಡಿ,ಹೇರೂರು ವ್ಯಾಪ್ತಿಯ 40 ಕಿ.ಮೀ ರಸ್ತೆಯಲ್ಲಿ 20 ಕಿ.ಮೀ ನಷ್ಟು ಗುಂಡಿಗಳೇ ಬಿದ್ದಿದ್ದು, ವಾಹನ ಸವಾರರು ಸಂಚರಿಸಲು ಪರಡಾವ ಸನ್ನಿವೇಶ ಎದುರಾಗಿದೆ. ಇನ್ನೂ ನಗರದ ಕಥೆ ಹೀಗಾದರೆ ಹಳ್ಳಿಯ ಒಳ ರಸ್ತೆಗಳ ಪಾಡೇನು,,,?
ಇಲ್ಲಿದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆರಾಳ ರಸ್ತೆಯ ಒಂದು ಕಥೆ,,, ರಸ್ತೆ ಮಾತನಾಡಿದ್ದು ಹೀಗೆ ನೋಡಿ ಸ್ವಾಮಿ ಯಾರು ಬಂದ್ರೇನೂ ಬಿಟ್ರೇನು ನಮ್ಮ ಕಾಯಕ ನಾವು ಮಾಡಬೇಕಲ್ವೇ,,, ನನ್ನ ಎಂಟತ್ತು ವರ್ಷಗಳ ಹಿಂದೆ ಮದುವಣ ಗಿತ್ತಿಯಂಗೇ ಸಿಂಗಾರ ಮಾಡಿದ್ದರು, ಆಗ ನಾನು ಮೈ ತುಂಬಿಕೊಂಡು ದಪ್ಪನಾಗಿ, ಕಪ್ಪಾಗಿ ಫಳ ಫಳ ಹೊಳಿತ್ತಿದ್ದೆ ಬರು ಬರುತಾ ನನ್ನ ಕಲರ್ ಬಿಳಿ ಬಣ್ಣಕ್ಕೆ ಬಂತು, ನಂತರ ನನ್ನ ಮೇಲೆ ಅಲ್ಲೊಂದು ಇಲ್ಲೊಂದು ಗುಂಡಿ ಬಿಳತಾ ಬಂತು ನೋಡಿ.
ಅಷ್ಟೇ ಮಳೆಗಾಲದಾಗೇ, ಸುಗ್ಯಾಗೇ ನನ್ನ ಮೇಲೆ ದೊಡ್ಡ ದೊಡ್ಡ ವಾಹನ ಓಡಾಡಕತ್ತಿದವು, ಇದ್ದ ಸಣ್ಣ ಗುಂಡಿ ದೊಡ್ಡದಾದವು, ಅದನ್ನ ಮುಚ್ಚಕ ಅಂತ ಆಗೊಮ್ಮೆ ಈಗೊಮ್ಮೆ ರಿಪೇರಿ ಮಾಡೋರ ಬಂದು ನನ್ನ ಮೇಲೆ ತೇಪೆ ಹಚ್ಚಿ ಮತ್ತೆ ಹರಕ ಬುರಕ ಸುಂದರಿನ್ನ ಮಾಡಿದ್ರು.
ಅಲ್ರೀ ಇವರು ಹಿಂಗ ತ್ಯಾಪಿ ಹಚ್ಚ ಕೆಲಸ ಮಾಡಿದ್ರ ನಾನ್ಯೇನು ಮೊದಲಗಿನಂಗ ಆಕಿನೇನು,,ಮತ್ಯೆ ಅದೇ ರಾಗ ಅದೇ ಹಾಡು ಸಲ್ಪ ದಿನದಗ ಮತ್ತಿಷ್ಟು ಹದಗೆಟ್ಟು ಹೋತು, ಯಾರರ ಅರ್ಜೆಂಟ್ ನನ್ನ ಮೇಲೆ ಓಡಾಡಿದರ ಅವರು ಹೋಗ ಜಗಕ ಹೋಗತಿದ್ದಿಲ್ಲ, ಸಿದಾ ದವಾಖಾನಿಗೆ ಹೋಗುತ್ತಿದ್ರು ನೋಡ್ರಿ.
ಯಾರನ ಅರ್ಜೆಂಟ್ ಡಿಲವರಿ ಪೇಶಂಟ್ ತೊಗೊಂಡು ದವಾಖಾನಿಗೆ ಹೋಗದ್ರೋಳಗ ಇಲ್ಲೇ ಹೆರಿಗಿನ ಆಗ್ಯಾವು.
ಇನ್ನೂ ಯಾವ ಕಾಲಕ ನಾವು ಮತ್ತ್ಯೇ ಸಿದಾ ಅಕಿವ್ಯಾ ಏನೋ ಗೋತ್ತಿಲ್ಲ ನೋಡ್ರಿ ಎಂದು ತನ್ನ ಅಳಲನ್ನು ಹೇಳಿತು ಒಂದು ರಸ್ತೆ,
ಇನ್ನೂ ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸುತ್ತ ಮುತ್ತ ಇರುವ ಹಳ್ಳಿಗಳಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಜಾತ್ರೆ ಇಲ್ಲಾ ಹಬ್ಬ, ಹರಿದಿನ ಬಂದ್ರೇ ಇಲ್ಲಾ ಯಾರಾದರು ರಾಜಕೀಯ ಧುರೀಣರು ಬಂದ್ರೇ ಮಾತ್ರ ನಮಗೆ ಹಬ್ಬ ಎನ್ನುತ್ತಿವೆ.
ಆದ್ದರಿಂದ ಇನ್ನೂ ಮೇಲಾದರು ಜನ ಶಾಸಕರು, ಪ್ರತಿನಿಧಿಗಳು ಇಂತಹ ಬಂಡಿ ಜಾಡಿನ ರಸ್ತೆಗಳಂತಹ ರಸ್ತೆಗಳಿಗೆ ನಾಂದಿ ಹಾಡಿ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.