ವರದಿ : ಪಂಚಯ್ಯ ಹಿರೇಮಠ,,,,
ಕೊಪ್ಪಳ : (ಯಲಬುರ್ಗಾ) – ಯುವಕರು ತಮ್ಮ ಕಲಿಯುವ ವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಹಾಗೂ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಪಿಎಸ್ಐ ವಿಜಯ್ ಪ್ರತಾಪ್ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಪಿಯುಸಿ ಕಾಲೇಜಿನಲ್ಲಿ ಪೋಲಿಸ್ ಇಲಾಖೆಯಿಂದ ಹಮ್ಮಿಕೊಂಡ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೂನ್ 26ನೇ ದಿನವನ್ನು ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತಿದೆ ಆದ್ದರಿಂದ ಮಾದಕ ವ್ಯಸನದಿಂದ ಮನುಷ್ಯನ ಜೀವನದಲ್ಲಿ ನಡೆಯುವ ದುರ್ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ ಹಾಗೂ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೂ ಸಹ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಹಾಗೂ ಮನುಷ್ಯ ಜೀವನದಲ್ಲಿ ಒಂದು ಸಾರಿ ಮಾದಕತೆಗೆ ಅಂಟಿಕೊಂಡರೆ ಅವರ ಜೀವನವೆ ನಾಶವಾಗುವದು ಎಂದರು.
ಪೋಲಿಸ್ ಸಿಬ್ಬಂದಿ ಬಾಳನಗೌಡ ಪಾಟೀಲ ಮಾತನಾಡಿ ಮಾದಕ ವ್ಯಸನದ ಬಗ್ಗೆ ನಮ್ಮ ಪಿಎಸ್ಐ ಸಾಹೇಬರು ಎಲ್ಲಾ ಮಕ್ಕಳಿಗೆ ಮನಮುಟ್ಟುವಂತೆ ಮಾದಕ ವ್ಯಸನದಿಂದ ಉಂಟಾಗುವ ಕೆಟ್ಟ ಪರಿಣಾಮದ ಬಗ್ಗೆ ತಿಳಿಸಿದ್ದಾರೆ ಅದರಂತೆ ಎಲ್ಲಾ ಯುವಕರು ಎಚ್ಚರಿಕೆಯಿಂದ ಜೀವನ ಸಾಗಿಸಿ ಮತ್ತು ನೀವು ವಾಸಿಸುವ ಪ್ರದೇಶ ಅಥವಾ ಗ್ರಾಮಗಳಲ್ಲಿ ಯಾವುದೇ ರೀತಿಯ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ 112 ನಂಬರಿಗೆ ಕರೆ ಮಾಡಿ ಹಾಗೂ ಕರೆ ಉಚಿತವಾಗಿರುತ್ತದೆ ಮತ್ತು ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವದು ಸಮಾಜದಲ್ಲಿರುವ ಹಲವಾರು ಸಮಸ್ಯಗಳ ಪರಿಹಾರಕ್ಕೆ ಯುವಕರು ಕೈಜೋಡಿಸಬೇಕು ಇದರಿಂದ ಸಮಾಜದ ಹಲವಾರು ಕೆಟ್ಟ ಪಿಡುಗುಗಳನ್ನ ಹೊಡೆದುಹಾಕಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಶೇಖರಗೌಡ ಉಳಾಗಡ್ಡಿ ವಹಿಸಿದ್ದರು. ಹಾಗೂ ಖಜಾಂಚಿಯಾದ ಶರಣಪ್ಪ ಗಾಂಜಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು.ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.