Breaking News

ಅಧಿಕಾರಿಗಳು ಭೂಗಳ್ಳರಿಗೆ ಸಾತ್ ತಡೆಯುವಂತೆ ಒತ್ತಾಯಿಸಿ ಮನವಿ


ಗಂಗಾವತಿ: ನಗರದ ಸರ್ವೇ ನಂಬರ್ ೫೩ರಲ್ಲಿ (ಸಾಯಿನಗರದಲ್ಲಿ) ಎಸ್ಸಿ ಎಸ್ಟಿಗೆ ವಸತಿ ನಿಲಯಕ್ಕೆ ಮೀಸಲಿಟ್ಟದ್ದ ಹತ್ತು ಗುಂಟೆ ಜಮೀನನ್ನು ಕೊಲ್ಲಿ ನಾಗೇಶ್ವರರಾವ್ ಹಾಗು ಕೊಲ್ಲಿ ಗಂಗಾಧರ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ವೇ ನಂ.೪೦ ರ ವ್ಯಾಪ್ತಿಗೆ ಒಳಪಡಿಸಿಕೊಂಡು ಮಾರಾಟ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿಯವರು ಕೂಡಲೆ ಪಾರದರ್ಶಕವಾಗಿ ನಿರ್ವಹಿಸಿ ಬಿಚ್ಚಾಲಿ ಕುಟುಂಬದ ಖರೀದಿಸಿರುವ ಈ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ಪುನಾಃ ಹಾಸ್ಟೇಲ್‌ಗೆ ಮೀಸಲಿಡಬೇಕೆಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ಮಾದಿಗೆ ಕ್ಷೇಮಾಭಿವೃದ್ಧಿ ಸಂಘದ ಶಿವಪ್ಪ ಮಾದಿಗ ಸಚಿವರಿಗೆ ಆಚಾರ ನರಸಾಪುರದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಪ್ರಮುಖರಾದ ಕಿರಣ್ ಕುಮಾರ್, ಕೆ.ಎಂ.ಕಾಗೇರಿ, ಸುರೇಶ್ ಮುಕ್ಕುಂದಿ, ಶಾಂತಕುಮಾರ್ ಇತರರಿದ್ದರು.

About Mallikarjun

Check Also

ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ದ ಜುಲೈ 01 ರಂದು ಡಿ.ಎಸ್ ಎಸ್ಪ್ರತಿಭಟನೆ

ತಿಪಟೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳು ಮಹಿಳೆಯರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜುಲೈ 01ರಂದು ಸೋಮವಾರ ಕರ್ನಾಟಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.