Breaking News

ಹದೆಯ ಅರಿಯದ ಟೀನೇಜ್ ಸಮಯದಲ್ಲಿ ಮೊಬೈಲ್ ಬಳಕೆ ಎಚ್ಚರಿಕೆ ಅಗತ್ಯ : ಗೊಂಡಬಾಳ

ಕೊಪ್ಪಳ: ಶಿಕ್ಷಣ ಮುಂದುವರಿಯುವಿಕೆಗೆ ಮೊಬೈಲ್ ಮಿತವಾಗಿ ಬಳಸುವುದು ಬಹಳ ಮುಖ್ಯ, ಅದರಲ್ಲೂ ಹದೆಯ ಅರಿಯದ ಟೀನೇಜ್ ಸಮಯದಲ್ಲಿ ಮೊಬೈಲ್ ಬಳಕೆ ಎಚ್ಚರಿಕೆ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಎಚ್ಚರಿಕೆ ನೀಡಿದರು.

ಜಾಹೀರಾತು

ಅವರು ಸ್ನೇಹ ಸಂಸ್ಥೆಯ ನೇತೃತ್ವದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಕಿಶೋರಿ ನಾಯಕಿಯರಿಗೆ ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯ ರಕ್ಷಣೆ ಮತ್ತು ಪೌಷ್ಟಿಕ ಆಹಾರ ಕುರಿತು ಎರಡು ದಿನಗಳ ವಿಶೇಷ ತರಬೇತಿಯನ್ನು ಶೋಭಾ’ಸ್ ಹೋಟೆಲ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ಸಣ್ಣಪುಟ್ಟ ಆಸೆಗಳಿಗೆ‌ ಮರುಳಾಗುತ್ತಿರುವದು ತುಂಬಾ ಆತಂಕದ ಸಂಗತಿ. ಪೋಕ್ಸೋ ಕಾಯ್ದೆಯ ಬಗ್ಗೆ, ಮಕ್ಕಳ ಮೇಲೆ ಆಗುವ ಲೈಂಗಿಕ ಅಪರಾಧಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿದರು.
ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿಯಾದ ಗಂಗಮ್ಮ ಮಾತನಾಡಿ, ಅವರು ಪೌಷ್ಟಿಕ ಆಹಾರ, ಶುಚಿ ಬಳಕೆ, ಸ್ವಚ್ಛತೆ ಬಗ್ಗೆ ತಿಳಿಸಿದರು. ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕಿ ಜ್ಯೋತಿ ಎಂ. ಗೊಂಡಬಾಳ ಅವರು ಈ ತರಹದ ತರಬೇತಿಗಳನ್ನು ಪಡೆದುಕೊಂಡು, ತಮ್ಮನ್ನು ಯಾರಾಉ ಸಹ ದುರುಪಯೋಗಪಡಿಸಿಕೊಳ್ಳದ ಹಾಗೆ ನೋಡಿಕೊಳ್ಳಿ, ಈ ಮಾಹಿತಿಯನ್ನು ನಿಮ್ಮ ಕಿಶೋರಿ ಸಂಘದಲ್ಲಿ ಎಲ್ಲರಿಗೂ ತಿಳಿಸಿ, ಸದಾ ಜಾಗರೂಕತೆಯಿಂದ ಜೀವನದಲ್ಕಿ ಅಭಿವೃದ್ಧಿ ಹೊಅಮದಿ ಎಂದರು. ಸಂಘಟಕಿ ಜ್ಯೋತಿ ಹಿಟ್ನಾಳ್ ಅವರು ಮಾತನಾಡಿ, ಋತುಮತಿಯಾಗುವುದರ ಬಗ್ಗೆ, ಯಾವ ಶುಚಿ ಎಷ್ಟು ಸಾರೆ ಬಳಕೆ ಮಾಡಬೇಕು, ಹೇಗೆ ಬಳಕೆ ಮಾಡಬೇಕು ಹಾಗೂ ಸ್ವಚ್ಛತೆ ಬಗ್ಗೆ ಗುಂಪು ಚಟುವಟಿಕೆ ಮುಖಾಂತರ ಬಟ್ಟೆಯಲ್ಲಿರುವ ಡ್ರೈಯಿಂಗ್ ಮುಖಾಂತರ ಮಕ್ಕಳಿಗೆ ಸ್ಪಷ್ಟವಾದ ಮಾಹಿತಿಯೊಂದಿಗೆ ಮಕ್ಕಳು ಭಾಗವಹಿಸುವಂತೆ ಮಾಡಿ ಮಾಹಿತಿ ತಿಳಿಸಿದರು. ಗುಡ್ ಯೋಜನೆ ಸಿಬ್ಬಂದಿಗಳಾದ ಗಾಯಿತ್ರಿ, ಶೋಭಾ, ಮಹಾಲಕ್ಷ್ಮಿ, ಶೇಖರವ್ವ ಭಾಗವಹಿಸಿದ್ದರು.

About Mallikarjun

Check Also

ಪ್ರವಾಸೋದ್ಯಮ ದಿನಾಚರಣೆಕಾರ್ಯಕ್ರಮಕ್ಕೆಸಚಿವರಿಂದಚಾಲನೆ

Conducted by the Minister for the Tourism Day programme ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ: ಎನ್.ಎಸ್.ಭೋಸರಾಜು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.