ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಇವರ ಸಹಯೋಗದೊಂದಿಗೆ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಂಚಾಯತಿಯಿಗೆ ಒಬ್ಬರಂತೆ ಇರುವ ಕೃಷಿ ಸಖಿಯರಿಗೆ ಐದು ದಿನಗಳ ಕಾಲ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಕೆ.ವಿ.ಕೆಯ ಗೃಹ ವಿಜ್ಞಾನಿಗಳಾದ ಡಾ.ಕವಿತಾ, ಕಾಮನೂರ ಗ್ರಾಮದ ಪ್ರಗತಿಪರ ರೈತರಾದ ಶ್ರೀಬಸಪ್ಪ ವಂಕಲಕುಂಟ ಇವರು ಉದ್ಘಾಟಿಸಿದರು.
ಡಾ.ಕವಿತಾ, ಗೃಹ ವಿಜ್ಞಾನಿ, ಕೆ.ವಿ.ಕೆ, ಗಂಗಾವತಿ ಇವರ ಹೇಳಿಕೆ .
ರೈತರಿಗೆ ಕೃಷಿ ತಾಂತ್ರಿಕತೆಗಳನ್ನು ವರ್ಗಾವಣೆ ಮಾಡುವಲ್ಲಿ ಕೃಷಿ ಸಖಿಯಾರ ಪಾತ್ರ ಬಹಳ ಮುಖ್ಯವಾದುದು, ಕೃಷಿ ಸಖಿಯರು ವಿವಿಧ ಋತುವಿನಲ್ಲಿ ಬೆಳೆಯುವ ಬೆಳೆಗಳಿಗೆ ಸೂಕ್ತ ಮಾಹಿತಿಯನ್ನು ತಿಳಿಸಬೇಕು. ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ತಮ್ಮ ಗ್ರಾಮದಲ್ಲಿ ರೈತರಿಗೆ ಸೇವೆಯನ್ನು ಒದಗಿಸಬೇಕೆಂದು ತಿಳಿಸಿದರು. ನೈಸರ್ಗಿಕ ಕೃಷಿ ಪರಿಕರಗಳ ತಯಾರಿಕೆಯ ಪ್ರಾತಿಕ್ಷ್ಯತೆಯ ಹಾಗೂ ಅವುಗಳ ಮಹತ್ವ ಮಣ್ಣಿನಲ್ಲಿ
ಪೋಷಕಾಂಶಗಳು, ಸಾವಯವ ಪರಿಕರಗಳು, ಪೌಷ್ಟಿಕ ತೋಟ , ಹೈನು ದನಗಳ ಪೋಷಣೆ, ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಹಾಗೂ ಪ್ರಗತಿಪರ ರೈತರ ಅನುಭವ ಹಂಚಿಕೆ ಈ ತರಬೇತಿಯ ವಿಶೇಷ.
ಈ ಸಂದರ್ಭದಲ್ಲಿ ಕೆ.ವಿ.ಕೆ ವಿಜ್ಞಾನಿಗಳು, ಗಂಗಾವತಿ ಕಾರಟಗಿ, ಕನಕಗಿರಿ ತಾಲೂಕಿನ ಕೃಷಿ ಸಖಿಯರು, ಸಂಜೀವಿನಿ ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ ಇವರು ಉಪಸ್ಥಿತರಿದ್ದರು.