Breaking News

ಪಶು ಪಾಲನಾ ಮತ್ತು ಪಶು ಸಂಗೋಪನಾ ಸೇವಾ ಇಲಾಖೆಯಗೆ ಬೆನ್ನುಲುಬಾದ ಪಶು ಸಖಿಯರು

ಗಂಗಾವತಿ: ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿಯಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಶು ಸಖಿಯರ 3 ಹಂತದ ಆರು ದಿನಗಳ ಸಮಗ್ರ ಜಾನುವಾರುಗಳ ನಿರ್ವಹಣೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕೆ.ವಿ.ಕೆ.ಯ ಹಿರಿಯ ಮತ್ತು ಮುಖ್ಯಸ್ಥರಾದಂತ ಡಾ.ರಾಘವೇಂದ್ರ ಎಲಿಗಾರ್, ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ , ಕೊಪ್ಪಳ ಪಶು ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಕಾರ್ತಿಕ್ , ಗಂಗಾವತಿ ಮತ್ತು ಕಾರಟಗಿ ತಾಲೂಕಿನ ಎನ್.ಆರ್.ಎಲ್.ಎಂ. ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ಶ್ಯಾಮ್ ಸುಂದರ್, ಕನಕಗಿರಿ ತಾಲೂಕಿನ ವಲಯ ಮೇಲ್ವಿಚಾರಕರಾದ ರೇಣುಕಾ, ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ , ಮೂರು ತಾಲೂಕಿನ ಪಶು ಸಖಿಯರು ಉಪಸ್ಥಿತರಿದ್ದರು.
ಕೊಪ್ಪಳ 153 ಪಶು ಸಖಿ ನಿಯೋಜನೆ : ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಬ್ಬರಂತೆ ಕೆಲಸ
ಪಶು ಪಾಲನಾ ಇಲಾಖೆಗೆ ಬೆನ್ನುಲುಬಾದ ಪಶು ಸಖಿಯರು
ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಪಶುವೈದ್ಯಕೀಯ ಮತ್ತು ಪಶು ಸಂಗೋಪನಾ ಸೇವಾ ಇಲಾಖೆಯಡಿ ‘ಪಶು ಸಖಿಯರನ್ನು ಗ್ರಾಮೀಣ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ಇಲಾಖೆಗೆ ‘ ಪಶುಸಖಿ’ ಯರು ಬೆನ್ನುಲುಬು.
ಕೊಪ್ಪಳ ಜಿಲ್ಲೆಯಲ್ಲಿ 153 ಪಂಚಾಯಿತಿ ಗಳಲ್ಲಿ 153 ಪಶುಸಖಿಯರನ್ನು ನೀಯೋಜಿಸಲಾಗಿದ್ದು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಶುಸಖಿಯರಿಗೆ 3 ಹಂತದ ಸಮಗ್ರ ಜಾನುವಾರು ನಿರ್ವಹಣೆ ಕುರಿತು ತರಬೇತಿ ಇಂದು ಮುಗಿದಿದೆ. ಮುಂದಿನ ದಿನಗಳಲ್ಲಿ ಪಶು ವಿಸ್ತರಣಾ ಕಾರ್ಯಕರ್ತರಾಗಿ ಇಲಾಖೆ ಪೂರ್ಣಪ್ರಮಾಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಾಕಿ ಉಳಿದ ಪಶು ಸಖಿಯರಿಗೆ ಶೀಘ್ರದಲ್ಲಿ 3 ನೇ ಹಂತದ ತರಬೇತಿ ನಡೆಯಲಿದೆ.
ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಮೂಲಕ ಡೇ ಎನ್ಆರ್ ಎಲ್ ಎಮ್ ವಿಧೇಯಕ ಸ್ವಸಹಾಯ ಗುಂಪಿನ ಮಹಿಳಾ ರೈತರಿಗೆ ಪಶು ಸಂಗೋಪನಾ ಇಲಾಖೆಯ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಘನ ಉದ್ದೇಶ ಹೊಂದಲಾಗಿದೆ. ಪಶುಸಂಗೋಪನೆ ಇಲಾಖೆ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಅಗತ್ಯತೆಗೆ ಅನುಸಾರವಾಗಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ (ಜಿಪಿಎಲ್ಎಫ್) ತಲಾ ಒಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ನಿಯೋಜನೆಗೂಂಡ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಪಶು ಸಖಿ) ಅವರಿಗೆ ಒಂದು ತಿಂಗಳಲ್ಲಿ 15 ದಿನಗಳ ಕಾಲ ಸಲ್ಲಿಸುವ ಪಶು ಇಲಾಖೆಯ ವಿವಿಧ ವಿಸ್ತರಣಾ ಸೇವೆಗಳಿಗೆ ಆಯಾ ಜಿಪಿಎಲ್ಎಫ್ ಮೂಲಕ ಒಂದು ದಿನಕ್ಕೆ ರೂ.250/- ರೂಗಳಂತೆ ತಿಂಗಳಿಗೆ ರೂ.3750/- ಗೌರವಧನ ಪಾವತಿಸಲಾಗುತ್ತದೆ‌.
ಪಶು ಸಖಿಯರು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ಪಶು ವೈದ್ಯಾಧಿಕಾರಿಗಳೂಂದಿಗೆ ನಿರಂತರ ಸಂಪರ್ಕದಲಿದ್ದು ಅವರು ತಾಂತ್ರಿಕ ಮತ್ತು ವಿಸ್ತರಣಾ ಸೇವೆ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ
17 ದಿನಗಳ ಹೆಚ್ಚುವರಿ ತರಬೇತಿ
ಈಗಾಗಲೇ ಮೂರು ಹಂತದ ತರಬೇತಿ ಪಡೆದಿರುವ ಪಶು ಸಖಿಯರಿಗೆ ಅವರು ಆಸಕ್ತಿ ಇದ್ದಲ್ಲಿ ಹೆಚ್ಚುವರಿ 17 ದಿನಗಳ ತರಬೇತಿ ನೀಡಲಾಗುತ್ತದೆ. ಪ್ರಾಯೋಗಿಕ ಹಾಗೂ ಪಠ್ಯವನ್ನು ಒಳಗೊಂಡಿರುವ ಈ ತರಬೇತಿಯಲ್ಲಿ ಪ್ರಥಮ ಚಿಕಿತ್ಸೆ , ಚುಚ್ಚು ಮದ್ದು ನೀಡುವುದು ಕೃತಕ ಗರ್ಭಧಾರಣೆ ಮೊದಲಾದವುಗಳನ್ನು ಕಲಿಸಿಕೊಡಲಿದ್ದಾರೆ ಅದಕ್ಕೆ ಬೇಕಾದ ಕಿಟ್ ಗಳನ್ನು ಒದಗಿಸಲಾಗುತ್ತದೆ ಕೃತಕ ಗರ್ಭಧಾರಣೆ ಲಸಿಕೆ ಹಾಕಿಸಿದರೆ ಸರ್ಕಾರದಿಂದ ಇಂತಿಷ್ಟು ಮೊತ್ತ ದೊರೆಯುತ್ತದೆ ಇದರಿಂದ ಆದಾಯವನ್ನು ಹೆಚ್ಚಿಸಬಹುದು.
ಸಿಬ್ಬಂದಿ ಕೊರತೆ ನಿಗಿಸಿದೆ
ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಒಟ್ಟು 11 ಪಶುವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿ ಪಂಚಾಯತಿಯಿಂದ ಪಶು ಸಖಿಯರು ಇಲಾಖೆಗೆ ಬೆನ್ನುಲುಬು ಆಗಿದ್ದಾರೆ.
ಪಶು ಸಖಿ‌ ಹೇಳಿಕೆ
“ನಾನು ಪಶು ಸಖಿಯಾಗಿ ಕೆಲಸ ಮಾಡಲು ಇಚ್ಛಿಸಿದ್ದೆನೆ ಇದುವರೆಗೂ 3 ಹಂತದ ತರಬೇತಿ ಪಡೆದಿದ್ದು ಇನ್ನು ಹೆಚ್ಚುವರಿ ತಾಂತ್ರಿಕ ತರಬೇತಿಯನ್ನು ಪಡೆಯಲು ಆಸಕ್ತಿ ಹೊಂದಿದ್ದೆನೆ. ಜಾನುವಾರುಗಳ ಗಣತಿ, ಲಸಿಕೆ ನೀಡುವುದರ ಬಗ್ಗೆ ತಿಳಿದು ಕೊಂಡಿದ್ದೆನೆ. ಜಾನುವಾರುಗಳ ನಿರ್ವಹಣೆ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಇಲಾಖೆ ಮತ್ತು ರೈತರ ನಡುವೆ ಕೆಲಸ ಮಾಡಲು ಖುಷಿಯಾಗುತ್ತದೆ”.- ಜ್ಯೋತಿ, ಪಶು ಸಖಿ,ಹೊಸ್ಕೇರಾ
“ಪಶು ಸಖಿಯವರು ಗ್ರಾಮೀಣ ಭಾಗದಲ್ಲಿ ಇಲಾಖೆಯ ರಾಯಭಾರಿಗಳಂತೆ ಕೆಲಸ ಮಾಡುತ್ತಿದ್ದಾರೆ ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ಅವರ‌ ಮೂಲಕ ರೈತರಿಗೆ ತಿಳಿಸಲು ಸಹಕಾರಿ, ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯ ಸಮಸ್ಯೆಯನ್ನು ನೀಗಿಸುತ್ತಿದ್ದಾರೆ”- ಡಾ.ಮಹೇಶ್ ಕುಮಾರ, ಹಿರಿಯ ಪಶು ವೈದ್ಯಾಧಿಕಾರಿಗಳು, ಹೋಸ್ಕೇರಾ
ಪಶು ಸಖಿಯವರ ಕೆಲಸ ಆರಂಭ
ಪಶು ಸಖಿಯವರಿಗೆ ಜಾನುವಾರು ತಳಿ,ಹುಲ್ಲು,ಆಹಾರ,ಜಂತು ನಾಶಕಗಳು, ಸರ್ಕಾರದ ಯೋಜನೆಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಜ್ಞರು ಸಂಪನ್ಮೂಲ ವ್ಯಕ್ತಿಗಳ‌ ಮೂಲಕ ನೀಡಲಾಗಿದೆ.

About Mallikarjun

Check Also

ಅಧಿಕಾರಿಗಳು ಭೂಗಳ್ಳರಿಗೆ ಸಾತ್ ತಡೆಯುವಂತೆ ಒತ್ತಾಯಿಸಿ ಮನವಿ

ಗಂಗಾವತಿ: ನಗರದ ಸರ್ವೇ ನಂಬರ್ ೫೩ರಲ್ಲಿ (ಸಾಯಿನಗರದಲ್ಲಿ) ಎಸ್ಸಿ ಎಸ್ಟಿಗೆ ವಸತಿ ನಿಲಯಕ್ಕೆ ಮೀಸಲಿಟ್ಟದ್ದ ಹತ್ತು ಗುಂಟೆ ಜಮೀನನ್ನು ಕೊಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.