Breaking News

ಕರ್ನಾಟಕದ ದಲಿತ ಚಳುವಳಿಗೆ50ವರ್ಷಗಳ ಸಂಭ್ರಮೋತ್ಸವದ ಕರಪತ್ರ ಬಿಡುಗಡೆ

IMG 20240622 WA0157 300x135

ತಿಪಟೂರು:-ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ 50 ವರ್ಷಗಳ ಸಂಭ್ರಮೋತ್ಸವದ ಕರಪತ್ರವನ್ನು ತಿಪಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗತ್ತಿಹಳ್ಳಿ ಕೃಷ್ಣಮೂರ್ತಿರವರು ಜಿಲ್ಲೇಯ ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ತಾಲೂಕು ಪದಾಧಿಕಾರಿಗಳಿಗೆ ವಿತರಿಸಲಾಯಿತು.

ಜಾಹೀರಾತು

ಜುಲೈ 10 ಬುಧವಾರ ಡಾ!! ಅಂಬೇಡ್ಕರ್ ಭವನ ಮಿಲ್ಲರ್ಸ್ ರಸ್ತೆ ವಸಂತ್ ನಗರ ಬೆಂಗಳೂರಿನಲ್ಲಿ ಏರ್ಪಡಿಸಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರ ನೇತೃತ್ವದಲ್ಲಿ ನೆರವೇರುತ್ತದೆ ಎಂದು ತಿಳಿಸಿದರು.

ಈ ಸಭೆಗೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ನಾಗರಿಕರು ಆಗಮಿಸುತ್ತಾರೆ. ಮತ್ತು ಈ ಕಾರ್ಯಕ್ರಮದ ಐವತ್ತು ವರ್ಷಗಳ ಸಂಭ್ರಮೋತ್ಸವ ಅದ್ದೂರಿಯಾಗಿ ನೆರವೇರಿಸಲು ಸಜ್ಜಾಗಿದ್ದೇವೆ ಎಂದು ನಾಗತ್ತಿಹಳ್ಳಿ ಕೃಷ್ಣಮೂರ್ತಿ ಮತ್ತು ಜಿಲ್ಲಾ ಸಂಚಾಲಕರಾದ ಲಾವಣ್ಯ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಪ್ರೊ. ಬಿ ಕೃಷ್ಣಪ್ಪ ಅವರಿಗೆ “”ಕರ್ನಾಟಕ ರತ್ನ”” ಪ್ರಶಸ್ತಿ ನೀಡುವುದು ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸುವುದು ಹಾಗೆ ಸಮಾಜ ಕಲ್ಯಾಣ ಇಲಾಖೆ,ಶಿಕ್ಷಣ ಇಲಾಖೆ,ಆರೋಗ್ಯ ಇಲಾಖೆ,ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ಕಾರವೇ ನ್ಯಾಯ ಸಮ್ಮತ ವೇತನ ನೀಡುವುದು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು.
ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು.
ಅದೇ ರೀತಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಉಪಯೋಜನೆಯ ಅನುದಾನದಡಿ ಬಡವರಿಗೆ ವಸತಿ ನಿರ್ಮಾಣಕ್ಕಾಗಿ ತಲಾ ಹತ್ತು ಲಕ್ಷ ಸಹಾಯಧನ ಮಂಜೂರು ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಲಾವಣ್ಯ ಗುಬ್ಬಿ. ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ್ ಉಪ್ಪಾರಹಳ್ಳಿ. ಗುಬ್ಬಿ ತಾಲೂಕು ಸಂಚಾಲಕರಾದ ಮಾರ ಶೆಟ್ಟಿಹಳ್ಳಿ ಬಸವರಾಜ್. ತಿಪಟೂರು ತಾಲೂಕು ಸಂಚಾಲಕರಾದ ಮಂಜುನಾಥ್ ಅರಚನಹಳ್ಳಿ. ತಾಲೂಕು ಸಂಘಟನೆಯ ಸಂಚಾಲಕರಾದ ಆಲೂರು ರಂಗಸ್ವಾಮಿ. ತಿಪಟೂರು ನಗರ ಸಂಚಾಲಕರಾದ ಮಂಜುನಾಥ ಮಾರನಗೆರೆ. ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಶಿವಕುಮಾರ್ ಮಾರನಗೆರೆ. ಹಟ್ಣ ದಯಾನಂದ ಹಾಗೂ ಇನ್ನಿತರರು ಹಾಜರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.