ಯೋಗದಿಂದ ರೋಗ ದೂರ ಯೋಗಪಟು ಸಣ್ಣ ವೀರನಗೌಡ ಹೇಳಿಕೆ
ಗಂಗಾವತಿ : ನಿತ್ಯ ಯೋಗಭ್ಯಾಸ ರೂಢಿ ಮಾಡಿಕೊಂಡರೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಯೋಗಪಟು ಸಣ್ಣ ವೀರನಗೌಡ ಪರನಗೌಡ್ರು ಹೇಳಿದರು.
ತಾಲೂಕಿನ ಗಡ್ಡಿ ಕೆರೆ (ಅಮೃತ ಸರೋವರ ) ಹತ್ತಿರ ಯೋಗ ದಿನ ಅಂಗವಾಗಿ ಕೂಲಿಕಾರರಿಗೆ ವೆಂಕಟಗಿರಿ ಗ್ರಾ.ಪಂ. ವತಿಯಿಂದ ಶುಕ್ರವಾರ ಆಯೋಜಿಸಿದ್ದ ಯೋಗ ಶಿಬಿರವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಶೈಲಿ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಯೋಗ ಮಾಡಬೇಕು, ಇದರಿಂದ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದರು.
ಕೂಲಿಕಾರ್ಮಿಕರು ರೋಗಗಳಿಗೆ ತುತ್ತಾದಾಗ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ, ರೋಗದಿಂದ ದೂರ ಇರಲು ಯೋಗ ಮಾಡಬೇಕು ಎಂದರು.
ಯೋಗ ಮಾಡುವ ವಿಧಾನ ಹಾಗೂ ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ಮಂಜಪ್ಪ ಕೆ., ವೆಂಕಟಗಿರಿ ಗ್ರಾ.ಪಂ ಕಾರ್ಯದರ್ಶಿಗಳಾದ ಶ್ರೀ ಪ್ರಭುರಾಜ, ನರೇಗಾ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ
ಸಿಬ್ಬಂದಿಗಳಾದ ರವಿಕುಮಾರ್, ಮಲಿಯಪ್ಪ, ದುರಗೇಶ, ಶೋಭಾ, ಲಲಿತಮ್ಮ, ಬಿಎಫ್ ಟಿ ವಿರುಪಣ್ಣ, ಕಾಯಕ ಬಂಧುಗಳು ಸೇರಿ ಇತರರು ಇದ್ದರು.