Breaking News

ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣ ಕಡೆಗಣಿಸುತ್ತಿದೆ : ಹೊಳೆಯಾಚೆ,,,,

ವರದಿ : ಪಂಚಯ್ಯ ಹಿರೇಮಠ,,,

ಕೊಪ್ಪಳ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ರೈತರನ್ನು ಸಂಪೂರ್ಣ ಕಡೆಗಣಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳಿಯಾಚಿ ಆರೋಪಿದರು.

ಬುಧವಾರ ಕೊಪ್ಪಳದ ಜಿಲ್ಲಾ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನಾ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕೇಂದ್ರದಲ್ಲಿ ಜಾರಿ ಮಾಡಿದ ಕೃಷಿ ಕಾಯ್ದೆಯನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ವಾಪಸ್ ಹಿಂಪಡೆಯುತ್ತೇವೆ ಎಂದ ಮಾನ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರು, ಅಧಿಕಾರಕ್ಕೆ ಬಂದ ಒಂದು ವರ್ಷ ಗತಿಸಿದರು ಹಿಂಪಡೆಯಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರ ರೈತರನ್ನು ವಿರೋಧಿ ನೀತಿಯನ್ನು ಮೂಂದೊರೆಸಿದಲ್ಲಿ ಜಿಲ್ಲೆಯ ಯಾವ ಭಾಗಕ್ಕೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಬಂದರೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಹಲವಾರು ಬಾರಿ ಶಾಸಕರ ಹಾಗೂ ಸಚಿವರ ಮೂಲಕ ಮನವಿಯನ್ನು ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ ರೈತರ ವಿರುದ್ಧವಿರುವ ಕಾಯ್ದೆಗಳನ್ನು ಹಿಂಪಡೆದು ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿದರು.

ಕೇವಲ ಭರವಸೆಯ ಮಾತುಗಳನ್ನು ಬಿಟ್ಟು ಸ್ವಾಮಿ ನಾಥನ್ ಆಯೋಗದ ವರದಿಯಂತೆ ಶೀಘ್ರವೇ ಎಂ ಎಸ್ ಪಿ ಕಾಯ್ದೆ ಕಾನೂನು ಜಾರಿ ಮಾಡಬೇಕು ಎಂದರು. ರಾಜ್ಯದಲ್ಲಿ ವಕೀಲರ, ನೌಕರರ ಹಾಗೂ ಜನ ಪ್ರತಿನಿಧಿ ಆಯೋಗದ ವರದಿಗಳನ್ನು ಜಾರಿ ಮಾಡುತ್ತಿರುವ ನೀವು ರೈತ ವಿರೋಧಿ ವರದಿಗಳನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.

ನಮ್ಮ ಬೇಡಿಕೆಗಳು ಈ ರೀತಿಯಾಗಿದ್ದು, ಮರಳಿ ಗ್ರಾಮದ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಿಸಬೇಕು, ಬರ ಪರಿಹಾರ ರೈತರ ಖಾತೆಗಳಿಗೆ ಜಮೆಯಾಗಬೇಕು, ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜನ , ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದೂ ಎಲ್ಲಾ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು, ರೈತರ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಅಕ್ರಮ ಸಕ್ರಮ ಯೋಜನೆಯಡಿಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಹಕ್ಕು ಪತ್ರ ನೀಡಬೇಕು, ಉದ್ಯೋಗ ಖಾತ್ರಿಯ ಮಾನವ 100 ದಿನಗಳನ್ನು 200ಕ್ಕೆ ಹೆಚ್ಚಿಸಬೇಕು, ರೈತರು ವಿಮೆಗೆ ಕಟ್ಟಿದ ಹಣವನ್ನು ವಿಮೆಗೆ ಒಳಪಡಿಸಿ ಕೂಡಲೇ ಹಣ ಪಾವತಿಸಬೇಕು, ಬೆಳೆ ವಿಮೆ ಮಂಜೂರ ಮಾಡಬೇಕು, ಹಾಗೂ ಬೂದಗುಂಪ ಗ್ರಾಮವನ್ನು ಹೋಬಳಿಯನ್ನಾಗಿಸಬೇಕು, ರೈತ ಪಂಪ್ ಸೆಟ್ ಕಳ್ಳತನವಾಗುತ್ತಿದ್ದು ಅದರ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿ ನಳಿನ್ ಕುಮಾರ ಅತುಲ್ ಮೂಲಕ ಮನವಿಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಲೋಕಸಭಾ ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಇವರಿಗೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಇದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಭೋವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ಹಿರಿಯ ರೈತ ಮುಖಂಡ ಗಾಳೆಪ್ಪ ಸುಣಗಾರ ಇನ್ನಿತರ ರೈತರು ಉಪಸ್ಥಿತರಿದ್ದರು.

About Mallikarjun

Check Also

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.