
ಗಂಗಾವತಿ: ತಾಲೂಕಿನ ರಾಮದುರ್ಗ (ಗೂಗಿಬಂಡಿ ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಾಲೂಕು ಗಂಗಾವತಿ ಶಾಲೆಗೆ ಶ್ರೀಮತಿ ಬೆನ್ನಿತ್ ಬೇ ನೋನಿ ಇಂಜಿನಿಯರ್ ಅಮೆರಿಕ( ಮೈಸೂರು) ಅವರು ವಿದ್ಯಾರ್ಥಿಗಳ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯಕ್ಕೆ ಅನುಕೂಲವಾಗುವಂತೆ ಶಾಲೆಗೆ 50 ತಟ್ಟೆ ಮತ್ತು 50 ಲೋಟಗಳನ್ನು ಅಂದರೆ 6000 ಸಾವಿರದ ಮೊತ್ತದ ಪರಿಕರಗಳನ್ನು ದೇಣಿಗೆ ನೀಡಿದ್ದಾರೆ ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾವತಿ ಮುಖ್ಯೋಪಾಧ್ಯಾಯರು ಶಿಕ್ಷಕರಾದ ಶ್ರೀ ಶ್ರೀನಿವಾಸ ಕೆಎಸ್ ಶ್ರೀಮತಿ ಕೊಣ್ಣೂರು ರೇಣುಕಾ ಹಾಗೂ SDMCಅಧ್ಯಕ್ಷರಾದ ಶ್ರೀ ನಾಗರಾಜ ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲ ಹಾಗೂ SDMC ಸದಸ್ಯರಾದ ನಾಗರಾಜ ಮುಕುಂಪಿ ಶ್ರೀಮತಿ ರೇಣುಕಾ ಮೆಹಬೂಬಿ ಹುಲಿಗೆಮ್ಮ ಹನುಮಂತ ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ದಾನಿಗಳ ಸಹೃದಯತೆಯನ್ನು ಹಾಗೂ ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಶ್ರೀ ದೇವೇಂದ್ರ ಕುಮಾರ ಇಮ್ಮಡಿ ಇಂಜಿನಿಯರ್ ಅಮೆರಿಕ ಅವರ ಕಾರ್ಯವನ್ನು ಊರಿನ ಸಮಸ್ತ ಗ್ರಾಮಸ್ಥರು ಪ್ರಶಂಸಿಸಿದ್ದಾರೆ