ಹೊಸದುರ್ಗ: “ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವಿಶ್ವಕರ್ಮ ಸಮುದಾಯದ ಸಂಘಟನೆಗಳ ಒಕ್ಕೂಟವನ್ನು ಬಲಪಡಿಸುವ ಅಗತ್ಯವಿದೆ” ಎಂದು ಬೆಂಗಳೂರಿನ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಹಾಗೂ ಹೊಸದುರ್ಗ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಶೋಕ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜನಜಾಗೃತಾ ಸಮಾವೇಶವನ್ನು ಉದ್ಘಾಟಿಸಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
“ಒಂದು ಒಕ್ಕೂಟವಾಗಿ ನಾವು ಕೆಲಸ ಮಾಡಿದಾಗ ನಮ್ಮ ಧ್ವನಿಗೆ ಹೆಚ್ಚು ಶಕ್ತಿ ಬರುತ್ತದೆ. ಸರ್ಕಾರಿ ಮಟ್ಟದಲ್ಲಿ ನಮ್ಮ ಮಾತಿಗೆ ಹೆಚ್ಚು ಬಲ ದೊರಕುತ್ತದೆ. ರಾಜಕೀಯವಾಗಿ ವಿಶ್ವಕರ್ಮರು ಬೆಳೆಯಲು ಸಹ ಸಾಧ್ಯವಾಗುತ್ತದೆ. ಒಂದು ಸಂಸ್ಥೆಯಿಂದ ಸಾಧ್ಯವಾಗದ ಹಲವಾರು ಕೆಲಸಗಳನ್ನು ಒಕ್ಕೂಟದಿಂದ ಮಾಡಲು ಸಾಧ್ಯವಿದೆ. ಆದ್ದರಿಂದ ಸಮುದಾಯದ ಹಿರಿಯರೆಲ್ಲ ಸೇರಿ ವಿಶ್ವಕರ್ಮ ಸಂಘಟನೆಗಳ ಒಕ್ಕೂಟವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸಬೇಕೆಂದು ಈ ಮೂಲಕ ನಾನು ವಿನಂತಿ ಮಾಡಿಕೊಳ್ಳುತ್ತೇನೆ.” ಎಂದು ಉಮೇಶ್ ಕುಮಾರ್ ಅವರು ಕರೆ ಕೊಟ್ಟರು
ಈ ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ಬಿ.ಜಿ ಗೋವಿಂದಪ್ಪನವರು ವಹಿಸಿದ್ದರು. ದಿವ್ಯ ಸಾನ್ನಿಧ್ಯವನ್ನು ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಡ್ನಾಳ್ ಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಪೋತುಲೂರಿನ ವೀರಂ ಭಟ್ಲಯ್ಯ ಸ್ವಾಮಿ, ಐರಾಣಿ ಮಠದ ಶ್ರೀ ಗಜದಂಡ ಸ್ವಾಮೀಜಿ ವಹಿಸಿದ್ದರು
ಜನ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಕನ್ನಡ ಸೋಮು, ಪರಮೇಶ್ವರಚಾರ್,
ತಾಲೂಕು ಅಧ್ಯಕ್ಷ ಶಿವಕುಮಾರ್ ರವರು ನೇತೃತ್ವವನ್ನು ವಹಿಸಿದ್ದರು, ವಿಶ್ವಕರ್ಮ ಸಮಾಜದ ಮುಖಂಡರುಗಳಾದ ಶಿಲ್ಪಿ ಹೊನ್ನಪ್ಪಚಾರ್, ಬಾಬು ಪತ್ತಾರ್, ಈಶ್ವರಚಾರ್, ಪ್ರಸನ್ನ ಕುಮಾರ್,
ಸರ್ವೆಶಾಚಾರ್ ಸೇರಿ ಹಲವರು ವಿಶ್ವಕರ್ಮ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.