ಕುಕನೂರು: ಇಂದಿನ ದುಬಾರಿ ದಿನಗಳಲ್ಲಿ ಯುವ ಜನಾಂಗ ಸಾಮೂಹಿಕ ವಿವಾಹ ಗಳಲ್ಲಿ ಮದುವೆ ಆಗುವ ಮೂಲಕ ಆಡಂಬರ ಜೀವನದಿಂದ ಹೊರಗೆ ಬರಲು ಪ್ರಯತ್ನಿಸಬೇಕೆಂದು ಕುಕನೂರಿನ ಡಾ.ಮಹಾದೇವ ಸ್ವಾಮೀಜಿ ನುಡಿದರು.
ಅವರು ಭಾನುವಾರ ತಾಲ್ಲೂಕಿನ ಯಡಿಯಪುರ ಗ್ರಾಮದ ಪರಶುರಾಮ್ ಮ್ಯಾಗೇರಿ ಹಮ್ಮಿಕೊಂಡಿದ್ದ 11 ಜೋಡಿ ಸಾಮೂಹಿಕ ವಿವಾಹ ಕಾಯ೯ಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಳೆದ 8 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆ ಇಂಥ ಚಟುವಟಿಕೆಗಳು ಪ್ರತಿಗಳ ಯುವಕರು ಆಯೋಜಿಸಲು ಮುಂದಾಗಬೇಕು, ಇದರಿಂದ ಸಮಾಜಕ್ಕೆ ಉತ್ತಮ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಇಂಥ ಕೆಲಸಕ್ಕೆ ತಾವೂ ಸಹ ತನು ಮನ ಧನ ಸಹಾಯ ನೀಡುವುದಾಗಿ ಶ್ರೀಗಳು ತಿಳಿಸಿದರು.
ಹಿರಿಯ ಸಾಹಿತಿ ಕೊಟ್ರಪ್ಪ ತೋಟದ ಅವರು ಮಾತನಾಡಿ, ಯುವ ಮುಖಂಡ ಪರಶು ರಾಮನ ಸಮಾಜ ಸೇವೆಗೆ ಸಾವ೯ಜನಿಕರು ಸದಾ ಪ್ರೋತ್ಸಾಹ ಬೆಂಬಲ ನೀಡುತ್ತಾ ಮುಂದೆ ಜಿಲ್ಲಾ ಪಂಚಾಯತ್ ಸದಸ್ಯ ರನ್ನಾಗಿಸುವ ಹೊಣೆ ಎಲ್ಲರದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಂದಪ್ಪ ಜವಳಿ, ಸುಧಾಕರ್ ದೇಸಾಯಿ, ರಾಮಚಂದ್ರ , ಹರೀಶ್ ಹಿರೇಮಠ, ಪರಶುರಾಮ್ ಮ್ಯಾಗೇರಿ , ಮಲ್ಲಯ್ಯ ಪೂಜಾರ್, ಶೇಖಪ್ಪ ಕಂಬಳಿ, ಪತ್ರಕರ್ತ ರಾದ ರುದ್ರಪ್ಪ ಭಂಡಾರಿ, ಪಂಚಯ್ಯ ಹಿರೇಮಠ, ವೀರಯ್ಯ ಕುತ೯ಕೋಟಿ, ಶಿಕ್ಷಕರಾದ ಉಮೇಶ್ ಕಂಬಳಿ, ಹನುಮಂತಪ್ ನಾಮದಾರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.