ಸಮಗ್ರ ಜಾನುವಾರುಗಳ ನಿರ್ವಹಣೆ ತರಬೇತಿ
ಗಂಗಾವತಿ : ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪಶು ವೈದ್ಯಕೀಯ ಮತ್ತು ಪಶು ಪಾಲನಾ ಇಲಾಖೆ, ಕೊಪ್ಪಳ ಹಾಗೂ ಕೆ.ವಿ.ಕೆ ಗಂಗಾವತಿ ಇವರ ಸಹಯೋಗದಲ್ಲಿ “ಸಮಗ್ರ ಜಾನುವಾರುಗಳ ನಿರ್ವಹಣೆ” ಕುರಿತಂತೆ ಗಂಗಾವತಿ/ಕಾರಟಗಿ/ಕನಕಗಿರಿ ತಾಲೂಕಿನ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ
ಆಯೋಜಿಸಿದ್ದ ( ಪಶು ಸಖಿ) ಮಾಡ್ಯೂಲ್ -3 ಆರು ದಿನಗಳ ತರಬೇತಿಯನ್ನು ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ
ಕೊಪ್ಪಳ ಡಾ.ಪಿ.ಎಮ್. ಮಲ್ಲಯ್ಯ ಅವರು ಉದ್ಘಾಟಿಸಿದರು.
ಉಪ ನಿರ್ದೇಶಕರಾದ
ಕೊಪ್ಪಳ ಡಾ.ಪಿ.ಎಮ್. ಮಲ್ಲಯ್ಯ ಅವರು ಮಾತನಾಡಿ, ಪಶು ಸಖಿಯರು ಗ್ರಾಮೀಣ ಭಾಗದಲ್ಲಿ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ, ಈಗಾಗಲೇ ಮೊದಲ ಮತ್ತು ಎರಡನೇ ಹಂತದ ಜಾನುವಾರುಗಳ ನಿರ್ವಹಣೆ ಯ ತರಬೇತಿ ಮುಗಿದಿವೆ, ಇಂದಿನಿಂದ ಮೂರನೇ ಹಂತದ ತರಬೇತಿ ಪ್ರಾರಂಭವಾಗಿದ್ದು ಆರು ದಿನಗಳ ಕಾಲ ವಸತಿ ಸಹಿತ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದೆ. ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ , ಕೊಪ್ಪಳ, ಉಪ ವ್ಯವಸ್ಥಾಪಕರಾದ ಡಾ.ಗಂಗಾಧರ , ಕೆ.ಎಂ.ಎಫ್ ನಿವೃತ್ತ ವ್ಯವಸ್ಥಾಪಕರಾದ ಶ್ರೀ ಪಡಸಲಗಿ, ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ.ಮಹೇಶ್ ಕುಮಾರ, ಪ್ರಥಮ ದರ್ಜೆ ಸಹಾಯಕರಾದ ಕಾರ್ತಿಕ್ ಹಾಗೂ ತಾಲೂಕು ಪಂಚಾಯತ್ ಎನ್.ಆರ್.ಎಲ್.ಎಮ್ ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ ರವರು ಉಪಸ್ಥಿತರಿದ್ದರು.