Breaking News

ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ ಪ್ರದಾನ

ಬೆಂಗಳೂರು: ಜೂನ್.16: ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಗುಜ್ಜನಹಳ್ಳಿ ಗ್ರಾಮದ ನಿವಾಸಿಯಾದ ದಿವಂಗತ ಗಡ್ಡೂರು ಮುನಿಯಪ್ಪ, ದಾಸನ್ನನವರ ವೆಂಕಟಮ್ಮ ಎಂಬ ದಂಪತಿಗಳ ಪುತ್ರ ವೆಂಕಟೇಶ್ ಜಿ.ಎಂ.ರವರು ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯವು ಪದವಿಯನ್ನು ಪ್ರಧಾನ ಮಾಡುವ ಮೂಲಕ ಗೌರವಿಸಿದೆ. ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ ಲಭಿಸಿರುವ ಹಿನ್ನಲೆ ಶಿಕ್ಷಕರು, ಸ್ನೇಹಿತ ಬಳಗ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

About Mallikarjun

Check Also

ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ದ ಜುಲೈ 01 ರಂದು ಡಿ.ಎಸ್ ಎಸ್ಪ್ರತಿಭಟನೆ

ತಿಪಟೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳು ಮಹಿಳೆಯರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜುಲೈ 01ರಂದು ಸೋಮವಾರ ಕರ್ನಾಟಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.