ಗಂಗಾವತಿ.: ತಾಲೂಕಿನ ಹೊಸಳ್ಳಿ ಗ್ರಾಮದ ಗಂಗಾಮತ ಸಮಾಜದ ವತಿಯಿಂದ ಗಂಗಾ ಪರಮೇಶ್ವರಿ ಜಯಂತಿಯನ್ನು ಭಾನುವಾರ ಆಚರಣೆ ಮಾಡಲಾಯಿತು.
ಜಯಂತಿಯ ಅಂಗವಾಗಿ ಗಂಗಾ ಪರಮೇಶ್ವರಿ ದೇವಿಯ ದೇವಸ್ಥಾನದಲ್ಲಿ ಬೆಳಗ್ಗೆ ಗಂಗಾದೇವಿ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ನಂತರ ಗಂಗಾಮತ ಸಮಾಜದವರಿಂದ ಕಳಶ ಕುಂಭಗಳೊAದಿಗೆ ಗಂಗಾದೇವಿ ಮೂರ್ತಿಯನ್ನು ಅದ್ದೂರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು. ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಎಚ್.ಆರ್.ಶ್ರೀನಾಥ ಮಾತನಾಡಿ, ಗಂಗಾಮತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಸಮಾಜವಾಗಿದೆ. ಸಮಾಜದ ಮಕ್ಕಳು ಸರಿಯಾಗಿ ಶಿಕ್ಷಣವನ್ನು ಪಡೆದುಕೊಳ್ಳದೆ ಕೂಲಿ ಮಾಡಿಕೊಂಡು ಜೀವನ ನಡೆಸುವ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಗಂಗಾಮತ ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ಮೀಸಲಾತಿ ನೀಡಬೇಕು ಎಂದು ಸಮಾಜದವರು ಸುಮಾರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದಷ್ಟು ಬೇಗನೆ ಸರಕಾರ ಗಂಗಾಮತ ಸಮಾಜಕ್ಕೆ ಮೀಸಲಾತಿಯನ್ನು ನೀಡಬೇಕು ಎಂದು ಹೇಳಿದರು.
ಗಂಗಾಮತ ಸಮಾಜದ ಮುಖಂಡರಾದ ರಾಜಶೇಖರಪ್ಪ ಮುಸ್ಟೂರು, ಮಹಾದೇವಪ್ಪ, ಹನುಮೇಶಪ್ಪ, ಕನಕರಾಯ, ಮರಿಯಪ್ಪ, ಶ್ರೀನಿವಾಸ, ಸಿದ್ದು, ದುರುಗಪ್ಪ, ದೊಡ್ಡ ಮರಿಯಪ್ಪ ಹಾಗೂ ಇತರರಿದ್ದರು.