ವರದಿ : ಬಂಗಾರಪ್ಪ ಸಿ .
ಹನೂರು : ತಾಲೂಕಿನ ಬೈಲೂರು ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಸ್ ಬಾರದ ಕಾರಣ ಶಾಲಾ ಮಕ್ಕಳು ಶಿಕ್ಷಕರು ಸಾರ್ವಜನಿಕರು ತೀವ್ರ ತೊಂದರೆಯನ್ನು ಅನುಭವಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ಕಣ್ಣೂರು ಮಾರ್ಗವಾಗಿ ಹನೂರು ತಾಲೂಕಿನ ಬೈಲೂರಿಗೆ ಸಂಚರಿಸುತ್ತಿರುವ ಸಾರಿಗೆ ಬಸ್ ಬಾರದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುಂಬಾ ತೊಂದರೆ ಪಡುವಂತಾಗಿದೆ ಇದರಿಂದ ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲಾರದೆ ನೂರಾರು ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗಿದ್ದು ಭವಿಷ್ಯದಲ್ಲಿ ಶೈಕ್ಷಣಿಕ ಹಿನ್ನಡೆ ಅನುಭವಿಸುವಂತಾಗುವ ಸಾಧ್ಯತೆ ಇದೆ.
ಹನೂರು ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಗೋಳು ಕೇಳೋರು ಯಾರೂ ?
ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಬಸ್ಸ ವ್ಯವಸ್ಥೆ ಕಲ್ಪಿಸುವಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿ ಎಡುವುದಿದ್ದು , ಹಾಗಾಗಿ ವಿದ್ಯಾರ್ಥಿಗಳು ಹನೂರು ತಾಲ್ಲೂಕಿನಲ್ಲಿ ಆಗಾಗ ಪ್ರತಿಭಟನೆಗಳು ಸಹ ನಡೆಯುತ್ತಿರುತ್ತವೆ ,
ಪತ್ರಿಭಟನೆ ವೇಳೆ ಸಮರ್ಪಕ ಬಸ್ಸ್ ಪೂರೈಸುತ್ತವೆ ಎಂದು ಭರವಸೆ ನೀಡಿ ಕೆಲ ಕಾಲ ಸಮರ್ಪಕವಾಗಿ ಬಸ್ಸ್ ಬಿಡಲಾಗುತ್ತದೆ ಆದರೆ ಅದೂ ಅಲ್ಪಾವಧಿ ಗಷ್ಟೇ ಸೀಮಿತ ವಾಗಿದೆ.
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹನೂರು ತಾಲೂಕು ಜಿಲ್ಲೆಯಲ್ಲಿ ಕಡೆಯ ಸ್ಥಾನವನ್ನು ಪಡೆದಿದ್ದು ಕಾಡಂಚಿನ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವ ಕಾರಣ ತರಗತಿಗಳಿಗೆ ಗೈರು ಹಾಜರಾಗಿದ್ದು ಈ ಕಾರಣವೂ ಸಹ ಹನೂರು ತಾಲೂಕು ಕಡೆಯ ಸ್ಥಾನವನ್ನು ಪಡೆಯುವುದಕ್ಕೆ ಒಂದು ಕಾರಣವಾಗಿರಬಹುದು.
ಎಂದು ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ಚನ್ನಲಿಂಗನಹಳ್ಳಿ ,ಲೊಕ್ಕನಹಳ್ಳಿ ,ಒಡೆಯರಪಾಳ್ಯ ,ಹುತ್ತೂರು, ಹುಣಸೆಪಾಳ್ಯ, ಮಾರ್ಗವಾಗಿ ಬೈಲೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ವಾಹನವು ಸ್ಥಗಿತಗೊಂಡಿತು ಈ ಮಾರ್ಗವಾಗಿ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಗೆ ಹೋಗಲು ಪರದಾಡುವಂತಾಗಿದೆ.
ಮುಂಜಾನೆ ಸಮಯದಲ್ಲಿ ಶಾಲಾ ಅವಧಿಯ ವೇಳೆಗೆ ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್ ನಿಗದಿತ ವೇಳೆಗೆ ಆಗಮಿಸುತ್ತಿಲ್ಲ ಹಾಗೂ ಕೆಲ ದಿನಗಳು ಬಸ್ ಗಳೇ ಬರುವುದಿಲ್ಲ ಈ ಮಾರ್ಗದಲ್ಲಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ತೆರಳಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತಪರಿಹಾರನೀಡಬೇಕು.ಎಂದುಶಿಕ್ಷಕರಾದವೆಂಕಟೇಶ್ ವಿ ರವರು ತಿಳಿಸಿದರು .