Breaking News

ಸಾವಳಗಿ ಗ್ರಾಮದಿಂದ ತುಬಚಿ ರಸ್ತೆ 2-3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ, ಮಳೆಗಾಲದಲ್ಲಿ ಕೆಸರು ಗದ್ದೆಯಾಗಿದೆ,ಮುಕ್ತಿ ಯಾವಾಗ…?

ಜಮಖಂಡಿ: ಸಂಪೂರ್ಣ ಹದಗೆಟ್ಟು ರಸ್ತೆಯು ಸಂಚಾರಕ್ಕೆ ತೊಂದರೆ ಉಂಟಾಗಿದೆ, ಅದರಲ್ಲು ಮಳೆಗಾಲದಲ್ಲಿ ಹೇಳ ತೀರದು ಮಳೆಯಾದರೆ ಸಾಕು ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ, ಇದನ್ನು ನೋಡಿದರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

ಜಾಹೀರಾತು

ಹೌದು ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಿಂದ ತುಬಚಿ ರಸ್ತೆ 2-3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ.

ಈ ರಸ್ತೆಯು ಬರಿ ಕೆಸರು (ರಾಡಿ) ಧೂಳಿನಿಂದ ಕೂಡಿದ ರಸ್ತೆ, ಮತ್ತು ಕೆಲವು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನದಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡರ್ ಅವರ ಹಸ್ತದಿಂದ ಗುದ್ದಲಿ ಪೂಜೆಯಾದ ರಸ್ತೆ ಇದಾಗಿದೆ, ರಸ್ತೆಯು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಇಲ್ಲಿನ ಗ್ರಾಮಸ್ಥರು ನಿತ್ಯ ಈ ರಸ್ತೆಯ ಮೇಲೆ ಜೀವ ಭಯದಿಂದ ಸಂಚರಿಸುವುದು ಅನಿವಾರ್ಯವಾಗಿದೆ. ರಸ್ತೆ ದುರಸ್ತಿ ಕಾಣದೇ ಸಾಕಷ್ಟು ದಿನ ಕಳದಿವೆ. ನೂರಾರು ವಾಹನಗಳು ಈ ರಸ್ತೆಯ ಮೇಲೆ ನಿತ್ಯ ತುಬಚಿ, ಶೂರ್ಪಾಲಿ, ಝುಂಜರವಾಡ, ಸೇರಿದಂತೆ ಅನೇಕ ಕಡೆ ಸಂಚಾರ ಮಾಡುತ್ತಿವೆ. ನಾಲ್ಕು ಚಕ್ರ ವಾಹನಗಳು ಈ ರಸ್ತೆಗೆ ಬಂದರೆ ನಡುವೆ ವಾಹನ ಕೈ ಕೊಡುವುದು ಗ್ಯಾರಂಟಿ. ಕೆಲವೊಂದು ಬಾರಿ ಕೆಟ್ಟು ನಿಂತಿವೆ. ಇದರ ನಡುವೆ ಬೈಕ್ ಸವಾರರ ಸ್ಥಿತಿ ದಯನೀಯವಾಗಿದೆ.

ಗದ್ದಿಗೌಡ 5ನೇ ಬಾರಿ ಸಂಸದರು: ಬಾಗಲಕೋಟೆ ಲೋಕಸಭಾಗೆ ಸತತ ಐದನೇಯ ಬಾರಿಗೆ ಪಿ ಸಿ ಗದ್ದಿಗೌಡ ಅವರು ಸಂಸದರು ಆಗಿದ್ದಾರೆ, ಅವರ ಹಸ್ತದಿಂದ ಭೂಮಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಆದರೆ ಸಾವಳಗಿ-ತುಬಚಿ 2-3 ಕಿ.ಮೀ ರಸ್ತೆ ಕಾಮಗಾರಿ ಹದಗೆಟ್ಟು, ಕೆಸರಿನಿಂದ ಕೂಡಿದ್ದು, ರಸ್ತೆ ಕಾಮಗಾರಿ ಸುಧಾರಣೆಗೆ ಮುಂದಾಗುತ್ತಿಲ್ಲ, ಇದು ಬೇಸರ ಸಂಗತಿಯಾಗಿದೆ.

ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾರರು ಈ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸುಧಾರಸಬೇಕೆಂಭ ಬೇಡಿಕೆ ಇಟ್ಟಿರು ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗೆ ಸೀಮಿತವಾಗಿದ್ದಾರೆ ಗ್ರಾಮ ಪಂಚಾಯತ ಸದಸ್ಯರು ಮನಸು ಮಾಡಿದರೆ ಗ್ರಾಮ ಪಂಚಾಯತ ಅನುದಾನದಲ್ಲಿ ರಸ್ತೆ ಸುಧಾರಿಸಬಹುದು ಅವರೇ ಗ್ರಾಮ ಪಂಚಾಯಿತಿ ಸದಸ್ಯರನ್ನು ಗೆದ್ದು ಬಂದ ನಂತರ ಇತ್ತ ಕಡೆ ಗಮನ ಹರಿಸುವುದಿಲ್ಲ ಎನ್ನುವುದು ನಿವಾಸಿಗಳ ಮಾತಾಗಿದೆ. ಇದು ಬಹು ದಿನಗಳ ಬೇಡಿಕೆಯ ರಸ್ತೆ ಈ ಪ್ರದೇಶದಲ್ಲಿ ಗ್ರಾಮದ ಎಲ್ಲಾ ವಾರ್ಡಿನ ಇಲ್ಲಿ ವಾಸಿಸುವುದು ಮತ್ತೊಂದು ವಿಷಯ.

ಬಾಕ್ಸ್: ಈಗ ತಾನೇ ಸಂಸದರು ಆಗಿದ್ದಾರೆ, ಅನುದಾನ ಬಿಡುಗಡೆ ಮಾಡಲಿಕ್ಕೆ ಸ್ವಲ್ಪ ಸಮಯ ಬೇಕು, ಒಮ್ಮೆ ಕೋಡಲು ಸಾಧ್ಯ ವಿಲ್ಲಾ, ತುಬಚಿ ಸಾವಳಗಿ ರಸ್ತೆ ಕಾಮಗಾರಿ ಅವರೆ ಕಾಮಗಾರಿ ಮಾಡಿ‌ಸಿದ್ದಾರೆ, ಹೊಸದಾದ ಕಾಮಗಾರಿಯ ಅನುದಾನ ಬರಲು ಸಮಯ ಬೇಕು, ರಸ್ತೆ ಸುಧಾರಣೆ ಬಗ್ಗೆ ಸಂಸದರ ಗಮನಕ್ಕೆ ತಂದಿದ್ದು ಅವರು ಆದಷ್ಟು ಬೇಗ ರಸ್ತೆ ಸುಧಾರಣೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ಬಸವರಾಜ ಪರಮಗೌಡ
ಗ್ರಾಮ ಪಂಚಾಯತ ಸದಸ್ಯರು ಸಾವಳಗಿ

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.