ಗಂಗಾವತಿ: ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ ಚಿವ ಶಿವರಾಜ ತಂಗಡಿ ಅವರ ಜನ್ಮದಿನ ಆಚರಣೆ ನಿಮಿತ್ತ ಸೋಮವಾರ ಗಂಗಾವತಿ ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ಸಾಮಾಜಿಕ ಸೇವಾ ಕಾರ್ಯಗಳು ಜರುಗಿದವು.
ಬೆಳಿಗ್ಗೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆ
ಡ್ಡಿ ಶ್ರೀನಿವಾಸ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶ್ರೀ
ರಾಮನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಒಳರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಣೆ ಮಾಡಿ, ಆರೋಗ್ಯಕ್ಕೆ ಕೇಂದ್ರದಲ್ಲಿ ಸಸಿಗಳು ನೆಡಲಾಯಿತು.
ನಂತರ ಗಂಗಾವತಿ ನಗರ ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಬುದ್ದಿಮಾಂದ್ಯ ಮಕ್ಕಳ ವಸತಿ ನಿಲಯ ಮತ್ತು ಕಂಪ್ಲಿ ರಸ್ತೆ ಯಲ್ಲಿನ ಮರನಥ ಚಾರಿಟೆಲ್ ಟ್ರಸ್ಟಿನ ನವಜೀವನ ವೃದ್ಧಾ ಶ್ರಮಕ್ಕೆ ಭೇಟಿ ನೀಡಿ, ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ವೃ ದ್ಧರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಮಾತನಾಡಿ ಸಚಿವ ಶಿವರಾಜ್ ತಂಗಡಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳು ತಂಗಡಗಿಯವರು ಮಾಡಿದ್ದಾರೆ, ಜೀವನದಲ್ಲಿ ಇನ್ನೂ ಉನ್ನತ ಸ್ಥಾನಮಾನ ಸಿಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಅಮರೇಶ ಗೋನಾಳ, ನವಜೀವನ ವೃದ್ಧಾಶ್ರಮದ ಸಂಸ್ಥಾಪಕ ಆನಂದರಾವ್ ಮುಳ್ಳಪುಡಿ, ಶ್ರೀ ರಾಮನಗರ ಗ್ರಾ.ಪಂ ಅಧ್ಯಕ್ಷ ಶಾಂತಪ್ಪ, ಸದಸ್ಯ ಪಿಲ್ಲಿ ರಾ ಮಕೃಷ್ಣ, ಬುಳ್ಲಿಕಾಪು, ಮೈಬೂಬ್, ಸಾಂಬಮೂರ್ತಿ, ವಿಎ ಸ್ಎಸ್ಎನ್ ಸೊಸೈಟಿ ಅಧ್ಯಕ್ಷ ಪಿ.ವೆಂಕಟೇಶರಾವ್, ಎ. ಸೂರ್ಯರಾವ್, ನಾಗೇಶ್ವರರಾವ್, ಕಲಕಮೂರ್ತಿ, ಬಳ್ಳಾರಿ ಗೋವಿಂದ ಸೇರಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು